ಮರ್ಜಿಗಳ ನಡುವೆ
– ಚೈತ್ರಿಕಾ ಶ್ರೀಧರ್ ಹೆಗಡೆ

ಗೊತ್ತೆ ಅವನಿಗೆ?
ಪುಸ್ತಕಗಳ ಗಿರವಿ ಇಟ್ಟು
ಕವಡೆ ತಂದಿದ್ದು?
ಕೂಡಿ ಪಗಡೆ ಆಡಿದ್ದು?
ಪಟ್ಟ ಕಟ್ಟಿ ಬೀಗಿದ್ದು?
ಮೆಟ್ಟುವ ದಾಟುವ ಕುಂಟೆಬಿಲ್ಲೆ
ಗೆರೆಗಳ ಬರೆದು ಜಗಳವಾದರೆ
ತೀರ್ಪಿಗೆ ಅಪ್ಪನ್ನ ಕರೆದು,
ಕಡೆಗೂ ನೆನಪುಗಳ ಖಾಲಿ ಮಾಡಿಸಿ
ಮನೆಗಳ ಮಾರಿದ್ದು?
ಯಾರದೋ ನೋವು,
ಸತ್ತ ಸುದ್ದಿಗಳ ಬೀದಿಯಲಿ
ಮಾರಿ ನಾನೊಬ್ಬನೇ ಉಂಡಿದ್ದು?
ಗೊತ್ತಿರಲಿಕ್ಕಿಲ್ಲ ಅವನಿಗೆ
ತಾಜಾ ಕನಸುಗಳ ಸಂತೆಗೆ ಕಳಿಸಿದ್ದು,
ಗಿರಾಕಿಗಳ ದುಂಬಾಲು ಬಿದ್ದಿದ್ದು,
ಕಿಸೆ ತುಂಬುವ
ಹಸಿವು ನೀಗುವ
ಮರ್ಜಿಗಳ ನಡುವೆ ಹರಾಜು ಕೂಗಿದ್ದು..
ದೂರದೂರಲ್ಲಿ ತನಗಿಷ್ಟದ
ಮಿಠಾಯಿಗಳ ಮಾರಿ,
ನನಗಾಗಿ ಊಟಕಟ್ಟಿಸಿ ತಂದಾಗ
ಹೇಳಿಬಿಡಬೇಕು ಎಲ್ಲವ..
ಒಂದೊಂದು ತುತ್ತಿಗೂ
ಒಂದೊಂದು ಸತ್ಯವ..!





ಚೆಂದಿದೆರಿ.
ಬಾಲ್ಯಗಳ ಕಾರ್ಪಣ್ಯಗಳ ನೆನಪಿಸುವ ಕವಿತೆ ಚನ್ನಾಗಿದೆ
tumbaane chennaagide..