ಗೂಗಲ್ ನ್ಯೂಸ್, ಅಲ್ಲಿ ಕನ್ನಡ ಯಾಕಿಲ್ಲ ?


– ಬನವಾಸಿ ಬಳಗ

ಏನ್ ಗುರು, ಕಾಫೀ ಆಯ್ತಾ

ನೂರಾರು ಭಾಷೆಗಳಲ್ಲಿ ಮಿಂಚೆ (ಈಮೇಲ್), ಚಾಟ್, ಹುಡುಕಾಟ ಮುಂತಾದ ಸೌಲಭ್ಯ ಕಲ್ಪಿಸಿ ಜಗತ್ತಿನ ಕೋಟ್ಯಾಂತರ ಜನರಿಗೆ ಅವರವರ ಭಾಷೆಯನ್ನೇ ಬಳಸಿ ಅಂತರ್ಜಾಲದ ಲಾಭ ಸವಿಯಲು ಗೂಗಲ್ ಸಂಸ್ಥೆಯವರು ಈಗ ಜಗತ್ತಿನ ಸುದ್ದಿಗಳನ್ನೆಲ್ಲಾ ಓದುಗನೊಬ್ಬ ಅವನ ಭಾಷೆಯಲ್ಲೇ ಒಂದೆಡೆ ಪಡೆಯಲು ಸಾಧ್ಯವಾಗುವಂತೆ ಗೂಗಲ್ ನ್ಯೂಸ್ ಅನ್ನೋ ಪ್ರಾಡಕ್ಟ್ ಮಾಡಿದ್ದಾರೆ ಗುರು. ಈಗಾಗಲೇ ಭಾರತದ ಹಲವು ಭಾಷೆಗಳಲ್ಲಿ ಈ ಸೇವೆ ಲಭ್ಯವಾಗಿದ್ರೂ ಕನ್ನಡಕ್ಕಿನ್ನೂ ಈ ಅನುಕೂಲ ಸಿಕ್ಕಿಲ್ಲ ಗುರು ! ಇದಕ್ಕೆ ಕಾರಣಗಳೇನು ಮತ್ತು ಇದನ್ನ ಸರಿ ಮಾಡೋಕೆ ನಾವೇನ್ ಮಾಡಬೌದು ಅಂತ ನೋಡೊಣ ಬಾ ಗುರು.
ತಾಣಗಳಲ್ಲಿ ಯೂನಿಕೋಡ್ ಬಳಸಲ್ಲ !
ಯೂನಿಕೋಡ್ ಎಂಬುದು ಕಂಪ್ಯೂಟರ್ ಒಳಗೆ ಜಗತ್ತಿನ ನೂರಾರು ಲಿಪಿಗಳಲ್ಲಿ ಬರೆಯಲು ಉಪಯೋಗಿಸುವ ತಂತ್ರಾಂಶ. ಈ ತಂತ್ರಾಂಶ ಬಳಸಿ ಕನ್ನಡದಲ್ಲಿ ಬರದಿರೋದನ್ನ ಕಂಪ್ಯೂಟರ್ ಒಳಗೆ ಆರಾಮಾಗಿ ಓದೋಕೆ, ಹುಡುಕೋಕೆ ಸಾಧ್ಯವಾಗತ್ತೆ. ಆದರೆ ಇಂದು ಹೆಚ್ಚಿನ ಕನ್ನಡ ಪತ್ರಿಕೆಗಳ ಪೋರ್ಟಲ್ ಗಳಲ್ಲಿ ಯೂನಿಕೋಡ್ ಅಳವಡಿಕೆಯಾಗದ ಕಾರಣ, ಕನ್ನಡದಲ್ಲಿ ಸುದ್ಧಿ ವರದಿ ಮಾಡೋ ಹಲವಾರು ತಾಣಗಳಿದ್ರೂ, ಗೂಗಲ್ ನ್ಯೂಸ್ ಬಳಸಿ ಕನ್ನಡದಲ್ಲಿ ಸುದ್ಧಿ ಹುಡುಕಿದರೆ ಏನೂ ಸಿಗ್ತಿಲ್ಲ ಗುರು.
ಹುಡುಕೋಕೆ ಕನ್ನಡ ಬಳಸಲ್ಲ !
ಅಲ್ಲೊಂದು ಇಲ್ಲೊಂದು ಕನ್ನಡ ತಾಣಗಳಲ್ಲಿ ಯೂನಿಕೋಡ್ ಬಳಕೆಯಾಗ್ತಿದ್ರೂ ಅವು ಗೂಗಲ್ ನ್ಯೂಸ್ ಅಲ್ಲಿ ಕಾಣ್ತಿಲ್ಲ! ಇದಕ್ಕೆ ಕಾರಣ ಅಂತರ್ಜಾಲದಲ್ಲಿ ಸುದ್ಧಿ ಹುಡುಕೋವಾಗ ಕನ್ನಡ ಬಳಸದೇ ಇರೋದು. ಇತ್ತೀಚಿನ ಒಂದು ಮಾಹಿತಿಯ ಪ್ರಕಾರ ದಿನವೊಂದರಲ್ಲಿ ಗೂಗಲ್ ಮೂಲಕ ಆಗುವ ಬಿಲಿಯಗಟ್ಟಲೆ ಹುಡುಕಾಟಗಳಲ್ಲಿ (searches) ಕನ್ನಡ ಪದಗಳನ್ನ ಉಪಯೋಗ್ಸಿ ಮಾಡೋ ಹುಡುಕಾಟಗಳು ಸಾವಿರಕ್ಕೂ ಕಡಿಮೆಯಂತೆ. ಲಕ್ಷಗಟ್ಟಲೆ ಕನ್ನಡಿಗರು ಅಂತರ್ಜಾಲದಲ್ಲಿ ಮಾಹಿತಿ ಹುಡುಕೋರಾಗಿದ್ರೂ ಒಂದು ದಿನಕ್ಕೆ ಒಂದು ಸಾವಿರ ಜನರೂ ಕನ್ನಡ ಬಳಸಿ ಮಾಹಿತಿ ಹುಡುಕುತ್ತಿಲ್ಲ ಅಂದ್ರೆ ಗೂಗಲ್ ಕಂಪನಿಯೋರು ತಮ್ಮ ನ್ಯೂಸ್ ತಾಣದಲ್ಲಿ ಕನ್ನಡದ ಆಯ್ಕೆನಾ ಅದ್ಯಾಕ್ ಕೊಟ್ಟಾರೂ ನೀನೇ ಹೇಳ್ ಗುರು.

ಏನ್ ಪರಿಹಾರ ?
ಇದನ್ನ ಬದಲಾಯಿಸೋದು ಅಂತರ್ಜಾಲದಲ್ಲಿರುವ ಕನ್ನಡಿಗರ ಕೈಲೇ ಇದೆ.

  • ಅಂತರ್ಜಾಲದಲ್ಲಿರುವ ಎಲ್ಲ ಕನ್ನಡ ವರದಿ ತಾಣಗಳಿಗೆ ಯುನಿಕೋಡ್ ಬಳಸುವಂತೆ ಮನವಿ ಮಾಡುವುದು.
  • ಕನ್ನಡ ಯುನಿಕೋಡಿನಲ್ಲಿ ಬರೋ ತಾಣಗಳನ್ನು ಓದಿ ಪ್ರೋತ್ಸಾಹಿಸೋದು.
  • ಅಂತರ್ಜಾಲದಲ್ಲಿ ಮಾಹಿತಿ/ಸುದ್ದಿ ಹುಡುಕಲು ಕನ್ನಡ ಲಿಪಿ ಬಳಸೋದು, ನಮ್ಮ ಗೆಳೆಯರಿಗೂ ಹಾಗೇ ಮಾಡಲು ಹೇಳೋದ್ರ ಮೂಲಕ ಕನ್ನಡದಲ್ಲಿ ಸುದ್ದಿ ಹುಡುಕಾಟಕ್ಕೆ ಬೇಡಿಕೆ ಬರುವಂತೆ ಮಾಡಬೇಕು ಗುರು.

ಅದು ಆದಾಗ ಗೂಗಲ್ ಕನ್ನಡದಲ್ಲಿ ಈ ಸೇವೆ ಖಂಡಿತ ಕೊಡುತ್ತೆ. ಇದ್ಯಾವುದನ್ನ ಮಾಡದೇ ಸುಮ್ಕೆ ಕುಂತಿದ್ರೆ , ಅಂತರ್ಜಾಲದಲ್ಲಿ ಎಲ್ಲಾ ರೀತಿಯ ಸೇವೆ ಬೇರೆಲ್ಲ ಭಾಷೆಲಿ ಬರ್ತಾನೇ ಇರುತ್ತೆ, ನಾವು ಮಾತ್ರ ಕನ್ನಡದಲ್ಲಿ ಯಾಕಿಲ್ಲ ಅಂತಾ ಗೋಳಾಡೋದೆ ಆಗುತ್ತೆ. ಹಾಗಿದ್ರೆ ಇದನ್ನ ಬದಲಾಯ್ಸೋಕೆ ಮುಂದಾಗೋಣ್ವಾ ಗುರು?
 

‍ಲೇಖಕರು avadhi

January 23, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: