ಬ್ರೇಕಿಂಗ್ ನ್ಯೂಸ್ : ಯಶವಂತ್ ಹಳಿಬಂಡಿ ಇನ್ನಿಲ್ಲ

ನಮಗೂ, ಸುಗಮ ಸಂಗೀತಕ್ಕೂ ಸೇತುವೆ ಕಟ್ಟಿದ ಯಶವಂತ ಹಳಿಬಂಡಿ ಇನ್ನಿಲ್ಲ…

ಅವಧಿಯ ಕಂಬನಿ

ಕರ್ನಾಟಕದ ಜಾನಪದ ಹಾಡುಗಾರಿಕೆಯ ಮನೆತನದಲ್ಲಿ ಉತ್ತರ ಕರ್ನಾಟಕದ ತೇರಗಾಂನಲ್ಲಿ ಹುಟ್ಟಿದ ಯಶವಂತ ಹಳಿಬಂಡಿಯವರು ಜಾನಪದ, ಸುಗಮ ಸಂಗೀತ, ಚಲನ ಚಿತ್ರಗೀತೆ ಹೀಗೆ ಹಲವಾರು ಪ್ರಕಾರಗಳ ಯಶಸ್ವಿ ಹಾಡಗಾರರು. ತಂದೆ ಹನುಮಂತಪ್ಪ, ತಾಯಿ ಬಸವೇಶ್ವರಿ. ಅಮ್ಮ ನಿಂದ ಪಡೆದ ಸಂಗೀತ ಸಂಸ್ಕಾರ. ಲಕ್ಷ್ಮಣರಾವ್ ದೇವಾಂಗ ಮಠ ನಂತರ ನಾರಾಯಣರಾವ್ ಮಜುಮದಾರರಿಂದ ಕಲಿತ ಸಂಗೀತ ಶಿಕ್ಷಣ, ಹಿಂದೂಸ್ತಾನಿ, ಸುಗಮ ಸಂಗೀತ, ಜಾನಪದ ಇವರ ಪ್ರೀತಿಯ ಹಾಡುಗಾರಿಕೆಯ ಪ್ರಕಾರಗಳು.

೧೯೭೧ ರಿಂದ ಧಾರವಾಡದ ಆಕಾಶವಾಣಿಯ ಅನುಮೋದಿತ ಗಾಯಕರಾಗಿ ನೇಮಕಗೊಂಡ ನಂತರ ಆಕಾಶವಾಣಿಯ ಸಂಗೀತ ನಿರ್ದೇಶಕರಾದ ಕೇಶವ ಗುರವ್, ವಸಂತ ಕನಕಾಪುರ್‌ ರವರಲ್ಲಿ ಕಲಿತದ್ದು ಅಪಾರ. ಧಾರವಾಡದ ಆಕಾಶವಾಣಿಯಿಂದ ಬೇಂದ್ರೆಯವರ ಕವನ ಮೂಡಲ ಮನೆಯ…. ಹಾಡಿದಾಗ, ತಾವರೆಗೇರಿ ಆಸ್ಪತ್ರೆಯಲ್ಲಿದ್ದ ಬೇಂದ್ರೆಯವರು ರೇಡಿಯೋ ಮೂಲಕ ಹಾಡುಕೇಳಿ, ಬರಮಾಡಿಕೊಂಡು “ಏನ ಹಾಡಿದ್ಯೋ ಮುಂಜಾನಿ ಹುಚ್ಚು ಹಿಡಿಸಿದಿ ನನಗ….” ಎಂದಾಗ ಹುಡುಗ ಹಳಿಬಂಡಿಗೆ ಮಾತೇ ಹೊರಡದಾಯಿತಂತೆ.
ಮುಂದೆ ಬೇಂದ್ರೆ ಕಾವ್ಯವಾಣಿ ಎಂಬ ವಿಶೇಷ ಸಂಗೀತ ರೂಪಕ ರಚನೆ. ನಾಡಿನಾದ್ಯಂತ ನಡೆಸಿಕೊಟ್ಟ ಕಾರ್ಯಕ್ರಮ. ಕೊನೆಯವರೆಗೂ ಬೇಂದ್ರೆಯವರಲ್ಲಿಗೆ ಹೋಗಿ ಹಾಡಿ ಸಂತೋಷ ಪಡಿಸಿದ ಗಾಯಕ.
ಅವರು ಇನ್ನಿಲ್ಲ ಎನ್ನುವ ವಾರ್ತೆ ಬೆಳಗನ್ನು ಮಂಕುಗೊಳಿಸಿದೆ. ಅವರ ನೆನಪಿನಲ್ಲಿ …

‍ಲೇಖಕರು G

January 22, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

11 ಪ್ರತಿಕ್ರಿಯೆಗಳು

  1. ಬಿ. ಆರ್. ಸತ್ಯನಾರಾಯಣ

    ಓ….
    ದ.ರಾ.ಬೇಂದ್ರೆಯವರ ಹಾಡುಗಳನ್ನು ಇವರ ದನಿಯಲ್ಲಿ ಕೇಳುವುದರಲ್ಲೇ ಒಂದು ಸೊಗಸಿತ್ತು. ಆ ಹಾಡುಗಳ ರೂಪದಲ್ಲಿಯೇ ಯಶವಂತ್ ನಮ್ಮೊಂದಿಗಿರುತ್ತಾರೆ.

    ಪ್ರತಿಕ್ರಿಯೆ
  2. Sanjay

    Since from my childhood i am listing his famous song Paataragitti Pakkaa written by Varakavi Bendre. Its my favorite.
    ……RIP

    ಪ್ರತಿಕ್ರಿಯೆ
  3. raju

    ಬೇಂದ್ರೆಯವರ ಅನೇಕ ಕವನಗಳಿಗೆ ಜೀವತುಂಬಿದ ಗಾನ ಗಾರುಡಿಗ,ಸಂಗೀತ ಕ್ಷೇತ್ರ ಇವರನ್ನು ಇನ್ನೂ ಹೆಚ್ಚಾಗಿ ಬಳಸಿಕೂಳ್ಳಬಹುದಿತ್ತು.

    ಪ್ರತಿಕ್ರಿಯೆ
  4. Uday Itagi

    ಬೇಂದ್ರೆಯವರ ಕವನಗಳನ್ನು ಧಾರವಾಡ ಭಾಷೆಯ accent ನಲ್ಲಿ ಒಂಚೂರು ವ್ಯತ್ಯಾಸವಾಗದಂತೆ ಹಾಡಿದವರಲ್ಲಿ ಯಶವಂತ್ ಹಳೆಬಂಡಿ ಒಬ್ಬರು. ಅವರ ಆತ್ಮಕ್ಕೆ ಶಾಂತಿ ಸಿಗಲಿ.

    ಪ್ರತಿಕ್ರಿಯೆ
  5. nempe devaraj

    ಬೇಂದ್ರೆಯನ್ನು ಸಾಮಾನ್ಯರಿಗೂ ಅರ್ಥವಾಗುವಾಗಿಸಲು ತಿರುಗಾಡಿದ ಗಾರುಡಿಗ

    ಪ್ರತಿಕ್ರಿಯೆ
  6. h a patil

    – ಯಶವಂತ ಹಳಬಂಡಿಯವರದು ಅನಿರೀಕ್ಷಿತ ಸಾವು, ಸಾವು ಬರುವದೇ ಹಾಗೆ ಅದನ್ನು ಅರಗಿಸಿಕೊಂಡು ಮುಂದೆ ಸಾಗಬೇಕು. ಅವರ ಕಾಯ ಅಳಿದರೂ ಅವರ ಸ್ವರ ಮಾಧುರ್ಯಕ್ಕೆ ಸಾವಿಲ್ಲ, ಅವರ ಹಾಡುಗಾರಿಕೆ ಯನ್ನು ಯಾವಾಗ ಬೇಕಾದರೂ ಕೇಳ ಬಹುದು. ಅವರಿಗೊಂದು ಹೃತ್ಪೂರ್ವಕ ಶ್ರದ್ಧಾಂಜಲಿ.

    ಪ್ರತಿಕ್ರಿಯೆ
  7. anu

    ಈ ಸಮಯದಲ್ಲಿ ನನ್ನ ಧಾರವಾಡದ ಗೆಳತಿ ವಸಂತ , ನಮ್ಮ ಮಕ್ಕಳನ್ನು ಪಾತರ್ ಗಿತ್ತಿ ಪಕ್ಕ ಗೀತೆಗೆ ನೃತ್ಯ ಮಾಡಿಸಿದ್ದು ನೆನಪಿಗೆ ಬಂತು. ಜೊತೆಗೆ ಬೇಂದ್ರೆಯವರೂ ಸಹ. ದೇವರು ಯಶವಂತರ ಆತ್ಮಕ್ಕೆ ಶಾಂತಿ ಕೊಡಲಿ ಎಂದು ಬೇಡಿಕೊಳ್ಳುತ್ತೇನೆ.
    ಅನು

    ಪ್ರತಿಕ್ರಿಯೆ
  8. D.Ravivarma

    ಈದಿನ ಬೆಳಿಗ್ಗೆ ಗೆಳೆಯ ಸೃಜನ್ ತೆಲುಗಿನ ಪ್ರತಿಭಾವಂತ ನಟ ಅಕ್ಕಿನೇನಿ ಸಾವಿನ ಮೆಸೇಜ್ ಕಳಿಸಿದ್ದ ನನಗೆ ಗರ ಬಡಿದಂತಾಯ್ತು ..ಕಾಲೆಜುದಿನಗಳಲ್ಲಿ ನಾನು ಅವರ ಅಭಿಮಾನಿ.. ಅವರ ಚಿತ್ರದ ಪ್ರೇಮ ಗೀತೆಗಳು ಇಂದಿಗೂ ಅಂದ್ರ ಮತ್ತು ಕರ್ನಾಟಕದ ಉದ್ದಗಲಕ್ಕೂ ಜನ ಬಾಯಲ್ಲಿವೆ ..sarala ಬದುಕು,. ಜೀವನವನ್ನು ಅದಮ್ಯ ವಾಗಿ ಪ್ರೀತಿಸಿದ ಈ ಮೇರು ನಟನ ಹಳೆ ಚಿತ್ರಗಳು ಇಂದಿಗೂ ಕುಶಿ ಕೊದುವನ್ತಿವೆ…ಇ ದುಖದಲ್ಲಿ ಇರುವಾಗ ಇದ್ದಕಿದ್ದಂತೆ ಯಶವಂತ ಹಳೆಬಂಡಿ ಸಾವಿನ ಸುದ್ದಿ ಕೇಳಿ ದಂಗಾಗಿ ಹೊದೆ.. ಅದ್ಯಾಕೆ ಸಾವು ಇಸ್ಟೊಂದು ಕ್ರೂರ ..ಬಹುಶ ಉತ್ತರ ಕರ್ನಾಟಕದ ಎಲ್ಲ ಸಂಗೀತ ಪ್ರಿಯರ ಎದೆ ತಟ್ಟಿದ ಹಾಡುಗಾರ ಈತ.. ಯಶವಂತ್ ನೀವು haaduttiralilla.. ಹಾಡಿನೊಳಗೆ ಒಳ ಹೊಕ್ಕು ಬಿಡುತಿದ್ದಿರಿ. ಬೇಂದ್ರೆ ಹಾಡುಗಳನ್ನು ಅದೆಸ್ತು ಮೈಮರೆತು ಹಾದುತಿದ್ದಿರೆಂದ್ರೆ ಕೇಳುಗರು kuniyovastu ಜೋಶ್ ತರುತಿದ್ದಿರಿ.. ನಿವಿಲ್ಲ ವಾದರೂ ನಿಮ್ಮ ಹಾಡಿನ ಆ ನಾದ ಗುಂಗು ನಮ್ಮನ್ನು ಸದಾ ಕಾದುತಿರುತ್ತದೆ ..ಇದೊ ನಿಮಗೆ ಹೃದಯ ದಾಳದ ಶ್ರದ್ಧಾಂಜಲಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: