ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೀತಾ ಎನ್ ಸ್ವಾಮಿ ಕವಿತೆ- ಮಹಾಘನ ನಿರಾಳ…

ಗೀತಾ ಎನ್ ಸ್ವಾಮಿ

ಬುರುಜುಗಳ ಹತ್ತಿ
ಪ್ರೇಮವನ್ನೇ ಉಸಿರಾಡುವ ಹಕ್ಕಿಗಳನ್ನು ಹಾರಿಸಿದವನೊಬ್ಬ
ಬುದ್ಧನ ವೇಷ ತೊಟ್ಟು ಇಗರ್ಜಿಯಲ್ಲಿ ಲೀನವಾದ
ಯೇಸು ಬುದ್ಧ ರ ಶುದ್ಧ ಉಸಿರು ತಾಗಿ
ಮಂದಿರದ ಅಂಗಳಕೆ ಬಂದು ಜಿಹ್ವೆಮೇಲೆ “ಹಿಂಸೆ” ಎಂದು ಬರೆದು ಕರಕಲಾದ……
ತೇಜೋವಧೆ ಎಂದರೆ ನನಗೆ ಗೊತ್ತಿಲ್ಲ!?
ಸಗಣಿಯ ಬೆನಕಂಗೆ ಸಂಪಿಗೆಯ ಪೂಜೆ ಒಗ್ಗಲ್ಲ
ಹುಣ್ಣಿಮೆ ಹತ್ತಿ ಉರಿದು ತಮವಾಯ್ತು

ನನಗೊಂದು ಹಿಂಸೆ ತಾಗಿ
ಲುಂಬಿನಿಯ ಗುಡ್ಡದ ಮೇಲೆ ಕುಳಿತು ತಣ್ಣಗಾದೆ
ಎಲ್ಲೋ ಬಸಿಯುವ ಕುಟ್ಟುವ ಕೊಲ್ಲುವ ಶಬುದ ಕೇಳುತ್ತಲೇ ಇವೆ….
ಲುಂಬಿನಿಯ ನೆರಳಲ್ಲಿ ಪ್ರಜ್ಞೆ ಘನವಾದ ನಿರಾಳವಾಗಲಿ
ಬುರುಜು, ಸ್ತೂಪ, ಬಸದಿ, ಇಗರ್ಜಿ,ಮಂದಿರ
ಎಲ್ಲಿಗಾದರೂ ಎಡತಾಕಿ ಬದುಕಬೇಕು.. ಹಿಂಸೆ ಎಂದವನ ನೆರಳು ತಾಕದಿರಲಿ…..
ಪುಷ್ಪಗಳನ್ನು ಒಣಗಿಸಿ ಅಗ್ಗಿಕಾಯಿಸಿಕೊಂಡವನ ದರ್ಶನವೆಂದೂ ಆಗದಿರಲಿ…..

‍ಲೇಖಕರು avadhi

3 April, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading