ಗಾಳಿ ಗಮಲು…

ಮಂಜುನಾಥ್  ಅದ್ದೆ
ಟಾರ್ಚ್ ಬೇರರ್…
ತಾವು ನಂಬಿರುವ ಆಲೋಚನೆಗಳನ್ನು, ತಮ್ಮ ಬದುಕಿನ ಮತ್ತು ಪರಿಸರದ ಕ್ರಿಯೆಗಳನ್ನಾಗಿ ರೂಪಿಸಿಕೊಂಡವರು ಬಹಳ ಕಡಿಮೆ ಜನ. ಏಕೆಂದರೆ, ಆಲೋಚನಾ ಮಟ್ಟದಲ್ಲಿ ಮಾತ್ರ ವಿಚಾರಗಳನ್ನು ಸವಿಯುವುದು ಬಹಳಷ್ಟು ಜನರ ಅಗತ್ಯಗಳನ್ನು ತಣಿಸುತ್ತದೆ. ಅಂತಹ ಜನ ಕೇವಲ ಇತರರ ಮನ್ನಣೆಗಾಗಿ ಸದಾ ಹಾ

ತೊರೆಯುತ್ತಿರುತ್ತಾರೆ. ಆದರೆ ತಾವು ನಂಬಿರುವ ವಿಚಾರಗಳನ್ನು ಆಚಾರದಲ್ಲಿಯೂ ಬಳಸುವ ವ್ಯಕ್ತಿಗಳು ಇತರರ ಮನ್ನಣೆಗಿಂತಲೂ ತಮ್ಮ ಆಂತರ್ಯದ ಒಳನೋಟಕ್ಕೆ ಹೆಚ್ಚು ತೆರೆದುಕೊಂಡಿರುತ್ತಾರೆ. ಅಂತಹ ಗುಂಪಿಗೆ ಸೇರಿದ ಯುವಕ ನಮ್ಮ ಮಂಜುನಾಥ ಅದ್ದೆ.
ಬೆಂಗಳೂರಿನ ಸೆರಗಿನಲ್ಲೆ, ಅದಕ್ಕೆ ಅಂಟಿಕೊಂಡೆ ಇರುವ ಕುಗ್ರಾಮದಿಂದ ಬಂದಿದ್ದರೂ, ಇಂದಿಗೂ ಗ್ರಾಮ್ಯದ ಸೊಗಡನ್ನು ತನ್ನ ನಡವಳಿಕೆಯಲ್ಲಿ ಉಳಿಸಿಕೊಂಡು, ನಗರದ ವೇಗ ಮತ್ತು ಅದಕ್ಕೆ ಪೂರಕವಾಗಿರುವ ನಡತೆಯನ್ನು ನಿಧಾನವಾಗಿ ಮೈಗೂಡಿಸಿಕೊಳ್ಳುತ್ತಾ ಅರ್ಥಪೂರ್ಣವಾಗಿ ಬೆಳೆಯುತ್ತಿದ್ದಾರೆ. ಅದ್ದೆ, ನನ್ನಂತಹ ಹಲವರು ನಂಬಿರುವ ಸಿದ್ಧಾಂತಗಳನ್ನು ಸಮರ್ಪಕವಾಗಿ ಮುಂದಿನ ಪೀಳಿಗೆಗೆ ಸಾಗಿಸುವ ದೊಂಧಿಯನ್ನು ಕಡೆಯವರೆಗೂ ಹೆಗಲ ಮೇಲೆ ಹೊತ್ತುಕೊಂಡು ಹೋಗುವ ಸಾಮರ್ಥ್ಯವನ್ನು ರೂಢಿಸಿಕೊಂಡಿದ್ದಾರೆ. ಆ ಮನಃಸ್ಥಿತಿಯನ್ನು ಅವರ ಲೇಖನಗಳಲ್ಲಿ ಗುರುತಿಸಬಹುದು. ಕಲ್ಲು ಮುಳ್ಳುಗಳಿಂದ ಆವೃತವಾಗಿರುವ ಪ್ರಗತಿಪತರ ದಾರಿಯಲ್ಲಿ ದೊಂಧಿ ಹಿಡಿಯುವವರು ಬಹಳ ಮುಖ್ಯ ಅಲ್ಲವೇ?
-ಅಗ್ನಿ ಶ್ರೀದರ್

‍ಲೇಖಕರು avadhi

July 20, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ತಪ್ಪು

ತಪ್ಪು

2 ಪ್ರತಿಕ್ರಿಯೆಗಳು

  1. maletesh urs

    padagala mulaka amalu tarisuva tamma lekaniyinda banbiruva “gaali gamalu “yashassu saadisali.sir

    ಪ್ರತಿಕ್ರಿಯೆ
  2. Mahendra

    ಶ್ರೀ ಅಗ್ನಿ ಶ್ರೀಧರ್ ಗೌರವಿತರು,
    ಸುಗುಣ ಸಹೃದಯ ನಮಸ್ಕಾರಗಳು.
    ’ಗಾಳಿ ಗಮಲು’ ಕುರಿತು ನಿಮ್ಮ ಠೀಕಿತ ಟಿಪ್ಪಣಿಯ ಭಾಷೆ ಸ್ವಚ್ಚ ಕನ್ನಡವಾಗಿ ಸೊಗಸಾಗಿ ತೋರುವುದು.
    ಅಚ್ಚಗನ್ನಡ ಪ್ರೇಮಿಗಳ ಮನ ಮುತ್ತಿ ಮೆಚ್ಚುಗೆ ಚೆಲ್ಲುವುದು.
    ಕನ್ನಡ ಪರಿಣತರೆಂದು ಸ್ವಯಂಕೊಂಡಾಟ ಪ್ರದರ್ಶಕರಾದ ಕಂಗ್ಲಿಷ್ ಮೇಧಾವಿಗಳು ತಮ್ಮ ಕನ್ನಡ ಭಾಷಾಶೈಲಿಯನ್ನು ಅನುಸರಿಸಿಕೊಂಡರೆ ಕನ್ನಡ ಭಾಷೆಗೆ ಅಪಾರ ಸೇವೆ ಗಳಿಸಬಹುದು.
    – ವಿಜಯಶೀಲ, ಬೆರ್ಲಿನ್, ೨೦.೦೭.೨೦೧೦

    ವಿ.ಸೂ.
    ’ಗಾಳಿ ಗಮಲು’ ಲೇಖನದ ಕೊಂಡಿ ಎಲ್ಲಿದೆ?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: