ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಾಯದ ಗುರುತುಗಳು…

ಡಾ ನಾರಾಯಣ್ ಕ್ಯಾಸಂಬಳ್ಳಿ

ನಾನು ಸಣ್ಣವನಿದ್ದಾಗ
ಮೈಮೇಲಿನ ಗಾಯಗಳಿಗೆ
ಮುಲಾಮು ಹಚ್ಚುತ್ತ
ಎಷ್ಟೊಂದು ಗಾಯಗಳು
ಎನ್ನುತ್ತಿದಳು ಅಮ್ಮ

ನಾನು ಪ್ರತಿಯಾಗಿ
ನಿನಗೆ ಗಾಯಗಳಿಲ್ಲವೆ..?
ಎನ್ನುತ್ತಿದ್ದೆ
ಗಾಯಗಳು ನನ್ನೊಳಗು ಇವೆ
ಅದು ಯಾರಿಗೂ ಕಾಣುವುದಿಲ್ಲ.

ಅಪ್ಪನಿಗೆ ಗಾಯಗಳಿಲ್ಲವೆ..? ಎಂದರೆ
ನಿಮ್ಮಪ್ಪನಿಗೂ ಇದೆ ಅವರಪ್ಪನಿಗೂ ಇತ್ತು
ಸರಿಯಾಗಿ ಮುಲಾಮು ಹಚ್ಚಿಕೊ
ಎಂದು ಗದುರುತ್ತಿದ್ದಳು ಅಮ್ಮ

ಅಕ್ಕಂದಿರಿಗೆ ಅಣ್ಣಂದಿರಿಗೂ ಇವೆಯೇ ಎಂದು
ಕೇಳುತ್ತಿದ್ದೆ
ಅವರಿಗೂ ಇವೆ ಅವರೂ ನಿನ್ನಂತೆಯೇ ಅಲ್ಲವೆ ಎನ್ನುತ್ತಿದ್ದಳು
ಗಾಯಮಾಡಿದರ‍್ಯಾರು…? ಎಂದು ಕೇಳುತ್ತಿದ್ದೆ
ಅಮ್ಮನಿಗೂ ಗೊತ್ತಿಲ್ಲವೆನ್ನುತ್ತಿದ್ದರು
ಅದರೆ ನಮ್ಮ ಗಾಯಗಳಿಗೆ ಮುಲಾಮು ಹಚ್ಚುತ್ತಿದ್ದಳು

ಅಪ್ಪ ಅಮ್ಮ ಜೀತವೋ ಕೂಲಿಯೋ ಮಾಡಿ
ನಮ್ಮನ್ನು ಅಕ್ಷರ ಕಲಿಯಲು ಕಳಿಸಿದರು
ಅಮ್ಮ ಅನ್ನುತ್ತಿದ್ದಳು…
ಅಕ್ಷರ ಕಲಿತರೆ ನಿನ್ನ ಗಾಯದ ಗುರುತುಗಳು
ಮಾಸಿಹೋಗುತ್ತವೇ ಎಂದು
ಅದರಂತೆ
ಅಕ್ಷರ ಕಲಿತಿದ್ದೇನೆ
ಗಾಯದ ಗುರುತುಗಳು ಮಾತ್ರ ಮಾಸುತ್ತಿಲ್ಲ

ಹೌದು…
ನಾನೀಗ ಆ ಗಾಯಾದ ಗುರುತುಗಳೊಟ್ಟಿಗೆ
ಬದುಕುತ್ತಿದ್ದೇನೆ
ಗುರುತುಗಳ ಮಾಸುವಿಕೆಗೆ
ಮುಲಾಮು ಹುಡುಕುತ್ತಿದ್ದೇನೆ.

‍ಲೇಖಕರು Admin

9 December, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading