ಗಣಪತಿ ಅಗ್ನಿಹೋತ್ರಿ ಜೊತೆ ʼಫಟಾ ಫಟ್ ʼ

ಗಣಪತಿ ಅಗ್ನಿಹೋತ್ರಿ ಮೂಲತಃ ಉತ್ತರಕನ್ನಡ ಜಿಲ್ಲೆಯ ಕುಮಟಾದವರು. ಪತ್ರಕರ್ತರಾಗಿ ವೃತ್ತಿಜೀವನವನ್ನು ಆರಂಭಿಸಿದ ಇವರು ಇಂದು ಒಳ್ಳೆಯ ಹೆಸರು ಮಾಡಿದ ಕಲಾವಿದರು. ಪೆನ್ನು ಹಿಡಿದುಕೊಳ್ಳುವ ಕೈ ಇಂದು ಕುಂಚವನ್ನು ಹಿಡಿದು ಬಣ್ಣಗಳ ಜೊತೆ ಆಟವಾಡುತ್ತಿದೆ.

ಒಬ್ಬ ಪತ್ರಕರ್ತ ಆರ್ಟಿಸ್ಟ್‌ ಆಗಿ  ಬದಲಾಗುವ ಪರಿಯೇ ಸೋಜಿಗ. ಸದಾ ಒತ್ತಡದಿಂದ ಕಾರ್ಯನಿರ್ವಹಿಸುವ ಪತ್ರಕರ್ತನೆಲ್ಲಿ, ಏಕಾಂತ ಬಯಸುವ, ಬಣ್ಣ ಕುಂಚಗಳೊಟ್ಟಿಗೆ ಕಾಲಕಳೆಯುವ ಕಲೆಗಾರನೆಲ್ಲಿ. ಈ ಇಬ್ಬರೂ ಒಬ್ಬರಲ್ಲೇ ಸಮ್ಮಿಳಿತಗೊಂಡಿದ್ದು ಗಣಪತಿ ಅಗ್ನಿಹೋತ್ರಿಯವರಲ್ಲಿ. 

ಗಣಪತಿ ಅಗ್ನಿಹೋತ್ರಿ ಅವರು ಬಿಡಿಸಿರುವ ಚಿತ್ರಗಳು ಕಣ್ಮನ ಸೇಳೆಯುತ್ತವೆ. ಅವರ ಈ ಕಲೆಯ ಕುರಿತಾಗಿ ʼಅವಧಿʼಯು ನಡೆಸಿದ ಫಟಾ ಫಟ್‌ ಸಂದರ್ಶನ ಇಲ್ಲಿದೆ.

ಪತ್ರಕರ್ತನಿಂದ ಆರ್ಟಿಸ್ಟ್ ಗೆ ಪಾತ್ರ ಬದಲಾಯಿಸಿದ್ದು ಯಾಕೆ ?

> ನಾನು ಓದಿದ್ದೇ ಕಲೆಯಾಗಿದ್ದರಿಂದ ಇದರ ಕಡೆಗೆ ಒಲವು ಜಾಸ್ತಿ. ಜೊತೆಗೆ ಪತ್ರಕರ್ತನಾಗಿದ್ದರಿಂದ ನನ್ನಲ್ಲಿನ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ನಾನು ಕಲೆಯನ್ನು ಆಯ್ಕೆ ಮಾಡಿಕೊಂಡೆ.

ಹುಲಿಯ ಚಿತ್ರಗಳನ್ನೇ ಹೆಚ್ಚು ಬಿಡಿಸಿದ್ದರ ಗುಟ್ಟೇನು ?

> ಲಾಕ್‌ ಡೌನ್‌ ಆದ ಸಂದರ್ಭದಲ್ಲಿ ಹುಲಿಯಲ್ಲಿ ಕೊರೋನಾ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ ಎನ್ನುವ ಸುದ್ದಿಗಳು ಹರಿದಾಡಿದ್ದವು. ಹೀಗಾಗಿ ಹುಲಿಯ ಸಂರಕ್ಷಣೆಗಾಗಿ ಹುಲಿಯ ಚಿತ್ರಗಳನ್ನೇ ಹೆಚ್ಚು ಬಿಡಿಸಿದ್ದೇನೆ. ನಾಲ್ಕು ತಿಂಗಳ ಅವಧಿಯಲ್ಲಿ ಸುಮಾರು 200 ಹುಲಿಯ ಚಿತ್ರಗಳನ್ನ ಬಿಡಿಸಿದ್ದೇನೆ.

ಆರ್ಟಿಸ್ಟ್ or ಪತ್ರಕರ್ತ.. ಯಾರು ನಿಮ್ಮನ್ನು ಹೆಚ್ಚು ಖುಷಿ ಪಡಿಸೋದು ?

>  ಆರ್ಟಿಸ್ಟ್.

 ಅಕ್ಷರ ಮತ್ತು ಬಣ್ಣ ಯಾವುದರ ಸಂಗ ಹೆಚ್ಚು ಇಷ್ಟ ?

> ಬಣ್ಣ. ಯಾಕಂದ್ರೆ ಬಣ್ಣಕ್ಕೆ ಯಾವುದೇ ಪರಿವಿಡಿ ಇಲ್ಲ.

ಪತ್ರಕರ್ತ ಆಗಿದ್ದೋರು ಆರ್ಟಿಸ್ಟ್ ಆದ್ರಿ. ಮುಂದೆ ಏನಾಗ್ತೀರಿ ?

>  ಆರ್ಟಿಸ್ಟ್‌ ಆಗಿಯೇ ಇರುತ್ತೇನೆ.

‍ಲೇಖಕರು Avadhi

September 23, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಮಹೇಂದ್ರ ಡಿ

    ಕಲಾವಿದನಾಗಿ ಮತ್ತು ಪತ್ರಕರ್ತನಾಗಿ ಎರಡರಲ್ಲು ಕ್ರೀಯಾಶೀಲವಾಗಿ ತೊಡಗಿಕೊಂಡಗಲೂ ಚಿತ್ರಕಲೆ ಹೆಚ್ಚು ಕಾಡುವುದು. ಇದನ್ನು ನಾನೂ ಪ್ರಜಾವಾಣಿಯ ಉದ್ಯೋಗಿಯಾಗಿದ್ದಾಗ ಅನುಭವಿಸಿದ್ದೇನೆ. ಗೆಳೆಯ ಅಗ್ನಿಹೋತ್ರಿಯವರ ಫಟಾಫಟ್ ಪ್ರಶ್ನೋತ್ತರದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಅವರಿಗೂ ಹಾಗೆ ಅವಧಿಗೂ ಶುಭ ಹಾರೈಕೆ

    ಪ್ರತಿಕ್ರಿಯೆ
  2. ಕಿರಣ ಭಟ್

    ನಮ್ಮ ‘ ಅಗ್ನಿ’ ತುಂಬ talented. ಕುಮಟಾದಲ್ಲಿದ್ದಾಗ ನಮ್ಮ ಮಕ್ಕಳ ನಾಟಕಗಳಿಗ ಬರ್ತಿದ್ರು. ಒಮ್ಮೆ ತುಂಬ ಚೆಂದದ ಬ್ಯಾನರ್ ಕೂಡ ಮಾಡ್ಕೊಟ್ಟಿದ್ದು.
    ಅಭಿನಂದನೆಗಳು ‘ ಅಗ್ನಿ’

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: