ಗಂಗಾ ಚಕ್ರಸಾಲಿ
——
ಇತಿಹಾಸದುದ್ದಕ್ಕೂ
ಶಾಂತಿಗಿಂತಲೂ ಯುದ್ಧ ಪದ
ಹೆಚ್ಚು ಹೊಳಪು ಕಂಡಿದೆ.. |
ಶ್ರೇಷ್ಟ ರಾಜನೆಂಬ ಪಟ್ಟ
ಸುಮ್ಮನೇ ಬಂದಿಲ್ಲ..ಅಲ್ಲವೇ..
ಸಾವಿರಾರು ಯುದ್ಧಗಳಾಗಬೇಕು
ಲಕ್ಷಾಂತರ ಸಾವುನೋವುಗಳಾಗಬೇಕು
ಕೊನೆಗೆ ರಾಜನ ಹೆಸರು ದಾಖಲಾಗುತ್ತಿತ್ತು
ಶಾಸನಗಳಲ್ಲಿ..ಗ್ರಂಥಗಳಲ್ಲಿ…|

ಮತ್ತೆ ಬಡಸೈನಿಕರು
ಬುವಿಯಲ್ಲಿ ಮಣ್ಣಾಗುತ್ತಿದ್ದರು
ಯಾವ ಹೆಸರಿಲ್ಲದೇ..
ಆದರೆ ಅವರ ಹೆಂಡತಿ,ಮಕ್ಕಳು
ಅವರ ಹೆಸರನ್ನು ..ಉಸಿರುತ್ತಿದ್ದರು..|
ಈಗಿನ ಯುದ್ಧಗಳು ಅದೇ…
ಭೂಮಿಗಾಗಿಯಲ್ಲವೇ?.
ಅಹುದು..ಪ್ರತಿಷ್ಟೆಗಾಗಿಯೂ..|
ಘಟಿಸುತ್ತಿರುವುದು…
ಕೇವಲ ಮರಣಗಳಲ್ಲ
ವಯಸ್ಸಿನ ಹಂಗಿಲ್ಲದ ಮಾರಣಹೋಮ
ಯಾರ ಹೆಸರನ್ನು ಯಾರು ಉಸಿರಿಸಬೇಕು?
ಕವಿತೆಯ ಸಾಲುಗಳಷ್ಟೇ…ಅಲ್ಲವೇ..






0 Comments