ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಖಾಲಿ ಬದುಕಿನ ಖಾಲಿ ಪಯಣ!

ಸಂತೆಬೆನ್ನೂರು ಫೈಜ್ನಟ್ರಾಜ್

ತಿಕ್ಕಿ,ತಿಕ್ಕಿ
ತೊಳೆದರು
ಮೈ ತುಂಬಾ ಸುಗಂಧ ಪೂಸಿದರು
ಮೆಲ್ಲ ಮಲಗಿಸಿ
ಗುಲಾಬಿಗಳಿಂದ ಸಿಂಗರಿಸಿದರು
ಒಬ್ಬೊಬ್ಬರೇ ಮುಂದಾಗಿ
ಹಿಂದೆ ಮುಂದೆ ಹೆಗಲಿಗೆ ಹೆಗಲಾದರು
ದಾರಿ ತುಂಬಾ ಮೌನ
ಹೊದ್ದು ತಲೆಯಲೇನೋ ಹೊತ್ತು ನಡೆದರು
ಖಬರಸ್ತಾನದಿ ಇಳಿಸಿ
ಕಡೆಗೊಮ್ಮೆ ಎಂಬಂತೆ ಮುಖ ನೋಡಿದರು
ಸಿಂಗರ ಪಕ್ಕ ಸರಿಸಿ
ಮೈಯಷ್ಟೇ ಮಣ್ಣಲಿಳಿಸಿ ಹಿಡಿ ಮಣ್ಣ ಕೊಟ್ಟರು
ನೋಡ- ನೋಡುತ್ತ ಮೈ
ಮಣ್ಣ ಪಾಲಾಗಿಸಿ ಸುಮ್ಮನೆ ನಡೆದರು
ಕಡೇ ಪಕ್ಷ ಒಂದು ಗುಲಾಬಿ
ಯಾದರೂ ಎದೆ ಮೇಲಿಡದಾದರು
ಇಷ್ಷೆ; ಖಾಲಿ ಬಂದ ನಾವು
ಖಾಲಿಯೇ ನಡೆಯಬೇಕೆಂದು ತಿಳಿಸಿ ಹೋದರು!

ಕೈಯ ಕುಡುಗೋಲು

ಮಣ್ಣ ಪಾಟಲಿದ್ದ ಹಳೇ ಮಣ್ಣ
ಅಗೆದು ತೆಗೆಯುತ್ತಿದ್ದೆ
ಮಣ್ಣ ಕೆಳಗೆ ಮತ್ತೆ
ಮಣ್ಣು
ಅದರಾಳದಲ್ಲಿ ಎಂದೋ ಹೂತಿಟ್ಟ
ಬೀಜ ಬೇರು
ಬಿಟ್ಟುಕೊಂಡು
ಹಳೇ ರೋಗಿಯಂತೆ
ಮಂದ ಉಸಿರಾಡುತ್ತಿತ್ತು;
ಕೀಳಲಾ
ಬಿಡಲಾ
ಹೊಸ ಬೀಜ ಬಿತ್ತಲಾ
ಬೇರೆ ಹಾಕಲಾ
ದ್ವಂದ್ವ ಕಾಡಿದರೆ
ಅಗೆವ ಕುಡುಗೋಲು ನನ್ನ
ಮುಖವ ದಿಟ್ಟಿಸುತ್ತಿತ್ತು;
ಆಗಲೇ
ಎಲ್ಲೋ ಹೋಗಿದ್ದ ಅಪ್ಪ
ಮೆಲು ಹೆಜ್ಜೆ ಹಾಕಿ ಒಳ ಬಂದರು,
ಕಂಡರು” ಬಿಡಪ್ಪ ಹಸಿರಾಗುತ್ತೆ ಒಂದಿಷ್ಟು ಗೊಬ್ಬರ
ಹಾಕಿ ನೀರ ಹನಿಸು ನಾ ಇರಂಗೇ ಇರ್ತದೆ”
ನಾ ಅಷ್ಟ್ ಮಾಡಿ ಎದ್ ಹೋದೆ
ಕೈಯ ಕುಡುಗೋಲು
ನೆಲ ನೋಡುತ್ತಿತ್ತು!

 

‍ಲೇಖಕರು Avadhi GK

20 February, 2018

5 Comments

  1. SRINIVASA MURTHY

    Both the poems are very thought provoking.
    First poem shows the relative meaningless of life, while the second one creates a feeling of hope for regeneration.
    Very well crafted.
    Much appreciated for sharing this.

  2. madhusudanrangenahally

    ಮೊದಲನೆಯ ಕವಿತೆ ಇಷ್ಟವಾಯಿತು ಫೈಜ್

  3. Subhanu Raravi

    ಫೈಜ್ ಅವರ ಇಷ್ಟವಾಯಿತು…

  4. Syed faizulla

    Tnx

  5. ಅಮರದೀಪ್. ಪಿ.ಎಸ್.

    ಚೆಂದಗಿವೆ ಪದ್ಯಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading