ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಖಾದರ್ಮೊಹಿಯೊದ್ದೀನ್ ಕೆ ಎಸ್ ಕವಿತೆ- ಬದುಕೊಂದು ಸಂತೆ…

ಖಾದರ್ಮೊಹಿಯೊದ್ದೀನ್ ಕೆ ಎಸ್

ಪ್ರಕೃತಿ ಮಡಿಲಲ್ಲಿ
ಮರದ ನೆರಳಲ್ಲಿ
ಹೂ ಮನಸು ಅರಳಬೇಕು

ಜೀವ-ಭಾವಗಳು
ಒಂದಾಗಿ ಬೆರೆತು
ನಸು ನಗೆಯ ಸೂಸಬೇಕು

ಸ್ವರ-ರಾಗ-ತಾಳ
ಲಯ-ಭಾವ-ಮೇಳ
ಎದೆಯಲ್ಲಿ ಮಿಡಿಯಬೇಕು

ಚೆಂದುಟಿಯ ಚೆಲುವು
ಹೂವಾಗಿ ಬಿರಿದು
ಹಾಡೊಂದು ಜಿನುಗಬೇಕು

ಕನಸ ಕಣ್ಣೊಳಗೆ
ಮಿನುಗು ನಕ್ಷತ್ರ
ಹೊಳೆ ಹೊಳೆದು ಮಿನುಗಬೇಕು

ಬಾಳೊಂದು ಬಂಧ
ತೇಯ್ದಷ್ಟು ಗಂಧ
ಹೊಡ ಮರಳಿ ತೇಯಬೇಕು

ಬದುಕೊಂದು ಸಂತೆ
ಮರೆತೆಲ್ಲ ಚಿಂತೆ
ಪರಿಮಳವ ಸೂಸಬೇಕು

‍ಲೇಖಕರು avadhi

29 May, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading