ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕ್ಷಮೆ ಇರಲಿ ಅಕ್ಕ…

ರಾಘವೇಂದ್ರ ಜೋಶಿ

ಅಕ್ಕ ಹೇಳುತ್ತಾಳೆ:
ಬಿಟ್ಟೆನೆಂದರೂ
ಬಿಡದೀ ಮಾಯೆ;
ಬಿಟ್ಟುಕೊಟ್ಟರೂ
ಅಟ್ಟಿಸಿಕೊಂಡು
ಬಂತು ನೋಡಾ

ಇಂದ್ರನನ್ನು ಬಿಡಲಿಲ್ಲ
ಚಂದ್ರನನ್ನೂ ಬಿಡಲಿಲ್ಲ
ಹರಿಯನ್ನು
ನುಂಗಿತು
ಹರನನ್ನೂ
ಸುಟ್ಟಿತು

ಎಲ್ಲ ಬಲ್ಲೆ
ಅಂದವನ
ಬಲಗೈಯನ್ನೂ,
ಏನೂ ಗೊತ್ತಿಲ್ಲ
ಎಂದವನ
ಮೆದುಳನ್ನೂ
ತಿಂದು ಹಾಕಿತು

ಮುಠ್ಠಾಳರಾ,
ಒಳಗೆ ಶೋಧಿಸಿ
ಹೊರಗೆ ಶುದ್ಧಿಸಿ
ಮಾಯೆಯನ್ನು
ಮಾರುದ್ದಕ್ಕೆ
ಚಿಮ್ಮಿ
ಸ್ಪಟಿಕದ
ಸಲಾಕೆಯಂತೆ
ಊರ್ಧ್ವಗಾಮಿಯಾಗಿ!

ಹಾಗಂತ
ಹೇಳಿದ
ಅಕ್ಕ
ಕೂಡ
ಚೆನ್ನಮಲ್ಲಿಕಾರ್ಜುನನಿಗೆ
ಸೋತು
ಹೋದಳು

ಎಂಥ
ಮಾಯೆ?
ಇದೆಂಥಾ
ಮಾಯೆ?
ಅಕ್ಕ
ಸತ್ತರೂ
ಅಮಾವಾಸ್ಯೆ
ನಿಲ್ಲಬಾರದೆ?

‍ಲೇಖಕರು avadhi

20 May, 2010

6 Comments

  1. armanikanth

    joshi dear,
    enu nintaroooo neevu intha kavite baredu nammalli mechhuge,swalpa asoooye huttisuvudannu nillisabaaradu…
    keep it up

  2. Dr.K.Muralidhara

    akkana kalpaneye adbuthavagide, nimma kavana halavaru janakke
    talupuva sambandha nivu namma kavigostiyalli baghavahisabeku.

  3. Mallikarjuna Barker

    Joshi,
    Nice poem
    Nimma baravanige hege munde saguttirali

  4. Muralidhar.Padaki

    Raghu, nee kalu hisida kavite yennu odide. santosha ayutu.
    Nanu Bangalore nalli, iddaga neenu ” wife of Laxman ” story
    munde varesu.
    God bless you.

  5. sunaath

    RJ,
    ಮಾಯೆಯ ಜಾಲದಲ್ಲಿ ಸಿಲುಕದವರಾರು? ನಿಮ್ಮ ಕವನದಲ್ಲೂ ಸಹ ಮಾಯೆ ಇದೆ. ಅಭಿನಂದನೆಗಳು.

  6. Yatheesh

    Joshiavare,
    Nimma kavitheya olagina artha chennagide. Bittaroo bidadi maaye ennuva haage nimma kavitheyallina goodarthavide. Ide reeti nimma baravanigeyannu munduvaresi.
    Nade munde Nade Munde Nuggi Nadeyiri Joshiyavare……..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading