ಕ್ರೌರ್ಯದ ಪರಮಾವಧಿ ಇದು!

ರಾಜಾರಾಂ ತಲ್ಲೂರು 

ಯಾರೋ ಬಂದು ರಾತ್ರಿ ಇಲ್ಲಿ ಮೈ ಒರಗಿಸಬಹುದೆಂಬ ಕಾರಣಕ್ಕೆ ಮುಳ್ಳು ಹಾಸಿ ಮನೆಯಲ್ಲಿ ಮೆತ್ತನೆಯ ಹಾಸಿಗೆಯ ಮೇಲೆ ಮೈ ಮರೆಯುವ “ ವ್ಯಾಪಾರಿ ಮನಸ್ಸುಗಳು” ಎಲ್ಲ ಕಡೆಗಳಲ್ಲಿವೆ.

ಇದು ಮುಂಬಯಿಯ ಖಾಸಗಿ ಬ್ಯಾಂಕೊಂದರ ಎದುರಿನ ಕಥೆಯಂತೆ…

ದಾರಿಹೋಕರಿಗಾಗಿ ಅರವಟ್ಟಿಗೆಗಳನ್ನು ಕಟ್ಟುವ, ಹಾದಿಯಲ್ಲಿ ತಂಪು ಮರಗಳನ್ನು ನೆಡುವ, ಅ ಪರಿಚಿತರನ್ನೂ ಉಪಚರಿಸಿ ಕಳಿಸುವ ಚರಿತ್ರೆ ಇರುವವರು ನಾವು…

ಚರಿತ್ರೆ ಮರೆತ ಮೇಲೆ ಹೀಗೇ!

ಬಿ ಆರ್ ಸತ್ಯನಾರಾಯಣ 

ಸೌತ್ ಎಂಡ್ ವೃತ್ತದಲ್ಲಿರುವ ಸಾರ್ವಜನಿಕ ಗ್ರಂಥಾಲಯದ ಎದುರಿಗೆ ಒಂದು ಪಾರ್ಕ್ ಇದೆ. ಅದರ ಸುತ್ತಲೂ ಸುಮಾರು ಎರಡು ಅಡಿ ಎತ್ತರದ ಸಿಮೆಂಟ್ ವಾಲ್ ಇದ್ದು ನಂತರ ಗ್ರಿಲ್ ಅಳವಡಿಸಲಾಗಿದೆ.

ಅದರ ಉದ್ದಕ್ಕೂ ದಟ್ಟವಾದ ಮರಗಿಡಗಳಿದ್ದು ಮದ್ಯಾಹ್ನ ತುಂಬಾ ತಂಪಾಗಿರುತ್ತದೆ. ನಾನು ದಿನಾ ಮದ್ಯಾಹ್ನ ನೋಡುತ್ತಿದ್ದೆ: ಅಲ್ಲಿ ನೂರಾರು ಜನ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಹಲವಾರು ಕಾರು ಆಟೋಗಳ ಚಾಲಕರು ಊಟ ಮಾಡುತ್ತಲೋ ಒಂದು ಸಣ್ಣ ನಿದ್ದೆ ತೆಗೆಯುತ್ತಲೋ ಇರುವ ದೃಶ್ಯ ಸಾಮಾನ್ಯವಾಗಿತ್ತು.

ಮೊನ್ನೆ ನೋಡುತ್ತೇನೆ. ಆರಾಮವಾಗಿ ಕುಳಿತುಕೊಳ್ಳಬಹುದಾಗಿದ್ದ ಜಾಗದಲ್ಲೆಲ್ಲಾ ಕಾಂಕ್ರೀಟ್ ಮಿಶ್ರಣವನ್ನು ಹಾಕಿ ಕೆಡಿಸಲಾಗಿತ್ತು. ಅದರ ಮೇಲೆ ಆಯಿಲ್ ಸುರಿದು ಯಾರೂ ಕುಳಿತುಕೊಳ್ಳದಂತೆ ಗಲೀಜು ಮಾಡಲಾಗಿತ್ತು. ಈಗ ಕೆಲವರು ಫುಟ್ ಪಾತಿನ ಮೇಲೆ ಕುಳಿತು ಊಟ ಮಾಡುವುದು ಸಾಮಾನ್ಯ ದೃಶ್ಯವಾಗಿದೆ!

 

‍ಲೇಖಕರು avadhi

May 27, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: