ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೋಣೆಯ ಬಾಗಿಲು ಬಡಿದ ಸದ್ದು..

 kadambini raavi

ಕಾದಂಬಿನಿ

pair sculptureಸಂಜೆ ಅಷ್ಟು ಮಳೆ ಹೊಯ್ಯುತ್ತಿದ್ದರೂ
ಸಂಜೆ ಮಲ್ಲಿಗೆಯ ಪರಿಮಳದ
ಜಾಡು ಹಿಡಿದರಸಿ
ಹೊರಟೇಹೋದೆ ನೀನು.
ಬೆನ್ನಲ್ಲೇ ಸುದೀರ್ಘ ಕಾಳ ರಾತ್ರಿ ಆವರಿಸಿತು
ಬಾಗಿಲು ಮುಚ್ಚಿ
ಅದಕ್ಕೊಂದು ಕಲ್ಲುಬಂಡೆಯ ಒರಗಿಸಿ
ಕಲ್ಲಾಗುತ್ತೇನೆ ನಾನೂ…
ಎಲ್ಲೆಲ್ಲೋ ಅಲೆದಲೆದು ದಣಿದು ಅಪರಾತ್ರಿಯ
ಕಗ್ಗತ್ತಲಲ್ಲೇ ಹಾದಿ ಹಿಡಿದು
ಹಿಂದಿರುಗಿದ ನೀನು ಟಕ ಟಕ ಟಕ ಟಕ…
ಕೋಣೆಯ ಬಾಗಿಲು ಬಡಿದ ಸದ್ದು…

ಸಂಬಂಧಗಳ ನೆನಪಿಸಿಕೊಳ್ಳುತ್ತ
ಕೋಣೆಯ ಬಾಗಿಲು ಬಡಿದ ಸದ್ದು…

ನೀನು ನಡುಗುತ್ತ, ನರಳುತ್ತ
ಕೋಣೆಯ ಬಾಗಿಲು ಬಡಿದ ಸದ್ದು…
ನಕ್ಕು ನಿಡುಸುಯ್ಯುತ್ತೇನೆ
ಹಾ…! ಇಷ್ಟಾದರೂ…
ನನ್ನ ಹೃದಯದ ಬಾಗಿಲ ಬಡಿಯಲೊಲ್ಲೆ ನೀನು
ಹೇಗೆ ತೆರೆಯಲಿ ನಾನು!?

‍ಲೇಖಕರು admin

1 December, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading