ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೊಳಲ ಗಾನದ ಝೆನ್ ಟೆಲಿಗ್ರಾಂ..

ದೇವನೂರ ಮಹಾದೇವ

– ಲಕ್ಷ್ಮೀಪತಿ ಕೋಲಾರ

ನೀಲಿಗ್ಯಾನ ಬಿದಿರು ವನದಿಂದ ಹಿಂದಿರುಗಿದ ಕೊಳಲ ಗಾನದ ಝೆನ್ ಟೆಲಿಗ್ರಾಂ..   ಎಲ್ಲೆಡೆಯ ಮಣ್ಣಿನ ತಾಯ ಭಾಷೆಯ ಸಂಗೀತ ಘಾಸಿ ಮನಸ್ಸುಗಳನ್ನು ಮಾಯಿಸುವ ಜೋಗುಳ ಜೇನಿನಿಂದ ಜ್ವಾಲೆಗಳ ನಂದಿಸಬಲ್ಲ ಬಿದಿರು ಗಾನ   ದೇವನೂರ ಮಹಾದೇವ ಅತ್ಯಪರೂಪದ ಹಕ್ಕಿ ಮತ್ತೆಷ್ಟನೇ ಸಲವೋ ಬಂದಿದೆ! ತನ್ನ ಪಾಡಿಗೆ ತಾನು ಉಕ್ಕಿದೆ ಸಿಹಿ ನೀರು ಕೃತಜ್ಞತೆ ಎಂಬ ಪದದ ಪರಿಚಯವೂ ಇರದೆ! ನದಿಯ ಅತ್ಯಮೂಲ್ಯ ತಿರುವು ಮತ್ತು ನೀರ ನಿಶ್ಯಬ್ದ ಜೋಗುಳ ಮತ್ತೆ ಮತ್ತೆ ನೆನಪಾಗುವಂತೆ   ದೇವನೂರ ಮಹಾದೇವ ನಡೆದಾಡುವ ಪ್ರತ್ಯೇಕ ಬುದ್ಧನ ಪ್ರತಿಹೆಜ್ಜೆಯೂ ಭೂಮ್ತಾಯಿಯ ಪೂಜೆಯೆ ಯುಗಗಳ ಕತ್ತಲೆಯನ್ನು ದಾಟಿ ಬೆಳಕಿನ ಹೂವು ಅರಳಿಸಬಲ್ಲ ಪೂರ್ವೀಕ ಬೇರು ಲೋಕಗಳೆಲ್ಲವೂ ಸಂಧಿಸುವ ಮಾಂತ್ರಿಕ ಬಾಗಿಲ ಬಳಿ ಹೂವು ತರುವವನಿಗೆ ಕತ್ತಲೆಯೂ ಬೆಳದಿಂಗಳೆ   ದೇವನೂರ ಮಹಾದೇವ…..]]>

‍ಲೇಖಕರು G

17 March, 2012

1 Comment

  1. R.vijayaraghavan

    I only wish Lakshmipathi regain his wonderful ability. Three opening lines are marvellous. Mahadev does not depend on the admiration in the poem. but on the substance that he has, but Lakshmipathi who loved but could not express.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading