ಟಿ ಎನ್ ಸೀತಾರಾಂಗೆ ಸಿಎನ್ನಾರ್ ಕಿವಿಮಾತು

ಇದ್ದಕ್ಕಿದ್ದ೦ತೆ ಟಿ ಎನ್ ಸೀತಾರಾ೦ ನಿರಾಶೆಯ, ನಿರಾಸಕ್ತಿಯ ಮಾತುಗಳನಾಡುತ್ತಿದ್ದಾರೆ.

ಅದು ಇಲ್ಲಿದೆ

ಸೀತಾರಾ೦ ಗೆ ಮತ್ತೆರಡು ಪತ್ರಗಳು : ಪ್ರಿಯ ಸೀತಾರಾಮ್: ವರ್ಷಗಟ್ಟಲೆ, ಕಥೆಯೊಂದರ ಹತ್ತು-ಹನ್ನೆರಡು ಎಳೆಗಳನ್ನು ನಿಧಾನವಾಗಿ ಬಿಚ್ಚಿಡುತ್ತಾ, ಪ್ರತಿಯೊಂದು ಎಳೆಗೂ ವಿಶ್ವಸನೀಯ ಮುಕ್ತಾಯವನ್ನು ಚಿಂತಿಸುತ್ತಾ, ಪ್ರತಿಯೊಂದು ಪಾತ್ರ-ಘಟನೆಗೂ ಅರ್ಥಪೂರ್ಣ ರೂಪು ಕೊಡುತ್ತಾ, ’ಬೋಧನೆ-ರಂಜನೆ’ಗಳನ್ನು ಒಂದು ಆರೋಗ್ಯಕರ ಹದದಲ್ಲಿ ಬೆರೆಸುತ್ತಾ, ಧಾರಾವಾಹಿಗಳನ್ನು ಮಾಡುವುದು ಅತ್ಯಂತ ಸವಾಲಿನ ಸಂಗತಿ –ಹಾಗೂ ನೀವು ಹೇಳುವ ಹಾಗೆ ಬೇಸರದ ಸಂಗತಿ —-ನಿಮಗೆ. ಆದರೆ, ನೀವು ಧಾರಾವಾಹಿಗಳನ್ನು ಮಾಡುವುದನ್ನು ನಿಲ್ಲಿಸಿದರೆ ನನ್ನಂತಹ ಸಾವಿರಾರು ಅಭಿಮಾನಿಗಳ ಗತಿ? ಸತ್ಯವೆಂದರೆ, “ಮನ್ವಂತರ,” “ಮುಕ್ತ”ದಂತಹ ಧಾರಾವಾಹಿಗಳನ್ನು ನಿರ್ಮಿಸುವುದು ನಿಮ್ಮ ಸಾಂಸ್ಕೃತಿಕ-ಸಾಮಾಜಿಕ ಧರ್ಮ —ಮತ್ತು ಕರ್ಮ. ಕರ್ಮದಿಂದ ಮುಕ್ತನಾಗುವುದು ಸುಲಭವಲ್ಲ. ನಿಮ್ಮ ಅಭಿಮಾನಿ, ಸಿ. ಎನ್. ರಾಮಚಂದ್ರನ್   – ಪ್ರಿಯ ಸೀತಾರಾಮ್ ನಿಮ್ಮ ಚಿಂತನಾಲಹರಿ ತುಂಬಾ ಆರೋಗ್ಯಕರವಾದದ್ದು. ಪರಿಹಾರ ನೀವೇ ಶೋಧಿಸಬೇಕು. ನಿಮಗೆ ಪ್ರತಿಕ್ರಿಯಿಸುವ ನೆಪದಲ್ಲಿ ನಾನು ಸ್ವಪ್ರಚಾರಕ್ಕೆ ಹೊರಟಿದ್ದೇನೆ ಎಂದು ಯಾರಾದರೂ ತಪ್ಪು ತಿಳಿದರೂ ಸರಿಯೇ. ನಾನು ಇಷ್ಟಪಟ್ಟು ಕಟ್ಟಿದ, ಮೂವತ್ತಾರು ವರ್ಷಗಳುದ್ದಕ್ಕೆ ಬೆಳೆಸಿದ ಅತ್ರಿ ಬುಕ್ ಸೆಂಟರನ್ನು ಇಂದು ಇದೇ ಕಾರಣಕ್ಕೆ ಮುಚ್ಚಿ ಹೊರಬರುತ್ತಿದ್ದೇನೆ. ವಿವರಗಳು ಬೇಕಾದರೆ ದಯವಿಟ್ಟು ನನ್ನ ಜಾಲತಾಣ ನೋಡಿ: http://www.athreebook.com ನಿಮಗೆ ಶುಭವಾಗಲಿ ಅಶೋಕವರ್ಧನ  ]]>

‍ಲೇಖಕರು G

March 17, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. vijayaraghavan

    How can someone like Seetharam have this disillusionment? His works stem from disillusion about the today

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: