ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೊನೆಯಿಲ್ಲದ ಪ್ರಶ್ನೆಗೆ ಕೊನೆಯಿಲ್ಲದ ಉತ್ತರ…

ವೈ ಬಿ ಹಾಲಬಾವಿ

ಎಲ್ಲಾ ಕೇಳುವವರೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳ
ಉತ್ತರಿಸಲಾದಿತೆ ಕೇಳುವ ಅವರೆಲ್ಲ ಪ್ರಶ್ನೆಗಳಿಗೆ
ಅಷ್ಟು ಸುಲಭವೇ ಪ್ರಶ್ನೆಗಳಷ್ಟು ಉತ್ತರ;
 
ರಾಮನೇನೋ ಕಾಡಿಗಟ್ಟಿದ್ದ ಸೀತೆಯನ್ನು
ಅಗಸನ ಪ್ರಶ್ನೆಗೆ ಉತ್ತರವೆಂಬಂತೆ
ಸರಿಯಿತ್ತೇ ರಾಮನ ಈ ಕ್ರಮ
ಉತ್ತರಿಸಲಾಗದ ಪೌರುಷಕೆ
ಗುಮಾನಿಗಳು ನೂರೆಂಟು…
 
ಶಾಪಗ್ರಸ್ಥ ಅಹಲೆಗೆ
ನೂರೆಂಟು ಅನುಮಾನಗಳು
ಬಗೆಹರಿಯಿತೆ ಬರೀ ಪ್ರಶ್ನೆಗಳಲ್ಲೇ
ರಾಮನ ಒಂದು ಸ್ಪರ್ಶಕೆ
ಮರುಜೀವ ಪಡೆದವಳಿಗೆ
ಒಡೆಯಲಾಯಿತೆ ಅನುಮಾನದ ಹುತ್ತ…!

ಲೋಕ ಕೊಂಡಾಡುವ
ಕೋದಂಡ ರಾಮನಲ್ಲಿತ್ತೆ
ಮರದ ಮರೆಯಲ್ಲಿ ನಿಂತು
ವಾಲಿಯನ್ನು ಕೊಂದದ್ದಕ್ಕೆ ಉತ್ತರ
ಸುಗ್ರೀವನ ಬೆಂಬಲಕ್ಕೆ ನಿಂತ ಹುನ್ನಾರ
ಬಿಡಿಸಲಾಯತೆ ಮನದ ನೋವು
ಸಂಶಯಕ್ಕುಂಟು ನೂರೆಂಟು ಗಂಟು…
 
ಈಗಲೂ ಬಿಟ್ಟಿಲ್ಲ ಪ್ರಶ್ನೆಗಳು
ಹೆಣ್ಣು ವಿಧುವೆಯಾದರೆ
ತಿವಿಯುತ್ತವೆ ಕಣ್ಣ ಬಾಣಗಳು
ನೂರೆಂಟು ಅಪವಾದಗಳು
ಇಲ್ಲ ಸಲ್ಲದ ಅಂತೆ ಕಂತೆಗಳು
ಕಾಡುತ್ತವೆ ಸದಾ ಕೊನೆಯಿಲ್ಲದ
ಪ್ರಶ್ನೆಗೆ ಕೊನೆಯಿಲ್ಲದ ಉತ್ತರಗಳು…!
 
 

‍ಲೇಖಕರು avadhi

14 June, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading