ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೊಚ್ಚಿ ಹೋಗಿದೆ ಮಾನವೀಯತೆ…

ಅಭಿಜ್ಞಾ ಪಿ ಎಮ್ ಗೌಡ

ಯುದ್ಧೋನ್ಮಾದದಡಿಯಲಿ
ಕೊಚ್ಚಿ ಹೋಗಿದೆ ಮಾನವೀಯತೆ…..

ಆಧುನಿಕತೆಯ ಜಾಲದಡಿ
ಮಾನವೀಯತೆಯ ಬಳ್ಳಿ ಕಳಚುತಿದೆಯೆ.?
ಅಂತರ್ದಾನವಾಗುತಿದೆ
ಕರುಣೆ ವಾತ್ಸಲ್ಯಗಳ ಬಂಧ
ಮೆರೆದಾಡುತಿವೆ
ದರ್ಪ ದಬ್ಭಾಳಿಕೆಯ ಗಂಧ..

ಮನುಷ್ಯ ಮನುಷ್ಯರ ನಡುವೆಯೇಕೆ
ಈ ದ್ವೇಷಾಗ್ನಿ ಜ್ವಾಲೆ.?
ಹೊತ್ತಿ ಉರಿದುರಿದು
ಬೂದಿಯಾಗುತಿದೆಯಲ್ಲ
ಮನದೊಡಲ ವಹ್ನಿಜ್ವಾಲೆ..

ರಣರಂಗವೆಂಬ ಕೂಪದೊಳಗೆ
ನರಳಾಡುತಿವೆ
ಅಮಾಯಾಕ ಜೀವಗಳ ಹಿಂಡು
ಪ್ರತಿಷ್ಟೆಯ ಕಣವಾಗಿ
ಪ್ರಕ್ಷುಬ್ಧಗೊಂಡಿದೆ ಮನವು
ವಿದ್ವಂಸಗಳ ಕಂಡು….

ರಣಘೋರ ಯುದ್ಧವೀ
ದ್ವಂಸ ವಿದ್ವಂಸಕಗಳಲಿ
ಕಾಳಗದ ಕರಾಳತೆ ಸಾರುತಿದೆ.!
ಹೊತ್ತಿ ಉರಿಯುತಿಹ
ದೇಶಗಳೆರಡರಲಿ
ಮನುಕುಲ ಕ್ರೌರ್ಯ ತೋರುತಿದೆ..!

ಬೀದಿ ಬೀದಿಗಳ ತುಂಬೆಲ್ಲ
ರಾಶಿ ರಾಶಿ ಶವಗಳ ದಿಬ್ಬಣ
ಬಾಂಬುಗಳ ಮಳೆಯಾರ್ಭಟದಿ
ರಕ್ತಸಿಕ್ತಗೊಂಡಿದೆಯೆಲ್ಲಾ..!
ಕೆರೆಗಳಂತಾಗಿವೆ
ಬೀದಿಗಳೆಲ್ಲ ಗುಂಡಿ ಬಿದ್ದು
ದ್ವೇಷದ ದಳ್ಳುರಿಯಲಿ
ದೇಶವೆಲ್ಲ ಹಾಳು
ಕೊಂಪೆಯಾಗುತಿದೆಯಲ್ಲ…!

ದೊಡ್ಡ ದೊಡ್ಡ ಮಹಲುಗಳೆಲ್ಲ
ನೆಲಸಮವಾಗಿ
ರಿಕ್ತಹಸ್ತವಾದವಲ್ಲ.!
ಭೀಕರತೆಯ ಅತಿರೇಕದಿ
ಬೀದಿಗಳೆಲ್ಲ
ವಸ್ತುಶಃ ರಣರಂಗವಾಗಿವೆಯಲ್ಲˌ..

ಸಾವು ನೋವುಗಳಲಿ
ರಕ್ತದೋಕುಳಿ ಹರಿಸಿ
ಭೀಭತ್ಸವೆ ಮನೆಮಾಡುತಿದೆ..!
ಆಕ್ರಂದನದ ಕಿಡಿ
ದಿಕ್ತಟದವರೆಗೂ ಮುಟ್ಟುತ
ಕರುಳು ಹಿಂಡುವ
ದೃಶ್ಯಾವಳಿಗಳ ರೋಚಕ ಸ್ಥಿತಿ
ಅನಾವರಣವಾಗುತಿದೆ..!

ನರಮೇಧದೊಂದಿಗೆ
ನಲುಗುತಿಹ ಇಳೆಯೊಡಲು
ಸ್ಮಶಾನಮೌನ.!
ಬಾಂಬುಗಳ ಆರ್ಭಟದಲಿ
ಮಿಸೈಲುಗಳ ನರ್ತನದಲಿ
ಪ್ರಾಣಾಗ್ನಿ ಹೊಳೆ ಯಾನ..!

ಸಮರೋತ್ಸಾಹದ ಕಿಡಿಯೊಳಗಣ
ಯುದ್ಧೋನ್ಮಾದ
ದ್ವೇಷ ಅಮಾನುಷತೆ ಅಸೂಯೆಗಳ
ಭಾವಬುತ್ತಿಯಿದುˌ.!
ಭೀಕರತೆಯ ಪ್ರಭಾವಳಿ
ಜಟಿಲತೆಯೊಂದಿಗೆ
ಕುಟಿಲತೆಯ ಅರಿತು ಸಾಗುವ
ಸತ್ಯಕಲ್ಪವಾಗಿದೆ….

‍ಲೇಖಕರು Admin

14 March, 2022

1 Comment

  1. T S SHRAVANA KUMARI

    ಯುದ್ಧ ಭೀಕರತೆಯ ದರ್ಶನ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading