ಕೆಳಗೆ ಅಟ್ಲಾಂಟಿಕ್ ಸಾಗರ.. ಮೇಲೆ ಪ್ರೇಮ ಅಪರಂಪಾರ….

ಗಿರಿಜಾ ಶಾಸ್ತ್ರಿ

“ನಿಮ್ಮ ಸಂಬಂಧಕ್ಕೆ ಏನು ಹೆಸರು?” ಅಂಕುರ್ ಸಿಟ್ಟಿನಿಂದ, ಹೇವರಿಕೆಯಿಂದ ತಂದೆಯನ್ನು ಕೇಳುತ್ತಾನೆ.

“ನಮ್ಮದು ಭಕ್ತಿಯ ಸಂಬಂಧ” ಜೀವನ್ ಮಗನಿಗೆ ಮೆಲುದನಿಯಲ್ಲಿ ಹೇಳುತ್ತಾನೆ

೬೬ ವರುಷದ ಜೀವನ್ ಅಭ್ಯಂಕರ್ ಹೆಂಡತಿಯನ್ನು ಕಳೆದುಕೊಂಡವನು. ಹೆಚ್ಚು ಕಡಿಮೆ ಅದೇ ವಯಸ್ಸಿನ ಸಂಧ್ಯಾ ಗಂಡನನ್ನು ಕಳೆದುಕೊಂಡವಳು. ಇಬ್ಬರಿಗೂ ಐಹಿಕ ವಾಂಛೆ ಬಹುಪಾಲು ಮುಗಿದ ಹೊತ್ತು.

ಇಬ್ಬರ ನಡುವೆಯೂ ಒಂದು ರೀತಿಯ ಹೆಸರಿಲ್ಲದ ಅಭೌತಿಕ ಆಕರ್ಷಣೆ, ತೀವ್ರ ಅನ್ಯೋನ್ಯತೆ ಬೆಳೆಯುತ್ತದೆ. ಮಕ್ಕಳಿಗೆ ಇದರಿಂದ ಅವಮಾನ. ಸಮಾಜ ಅವರನ್ನು ಹೆದರಿಸುತ್ತದೆ. ಸಂಬಂಧಕ್ಕೆ ಹೆಸರು ಕೊಡಲು ಇಬ್ಬರೂ ಮದುವೆಯಾಗುತ್ತಾರೆ. ಅದರಿಂದ ಅವರಿಗೇನು ವ್ಯತ್ಯಾಸವಾಗುವುದಿಲ್ಲ. ಮಕ್ಕಳ ಸಮಾಧಾನಕ್ಕಷ್ಟೇ….ಆದರೆ ಮಕ್ಕಳಿಗೆ ಅದು ಇನ್ನೂ ನಾಚಿಕೆಗೇಡಿನ ಸಂಗತಿಯಾಗುತ್ತದೆ.

ಅವನು ಜೀವನ ( ಅಶೋಕ್ ಸರಾಫ್)! ಇವಳು ಸಂಧ್ಯಾ! ( ಕಿಶೋರಿ ಶಹಾನೆ) ! ಜೀವನದ ಸಂಧ್ಯಾಕಾಲದಲ್ಲಿ ಘಟಿಸುವ ಪ್ರೇಮ! ಇದು ಇಳಿ ವಯಸ್ಸಿನ , ಮಧುರ ಭಕ್ತಿಯ ಭಾವಯಾನ. ಹಾಗೆಂದು ಇದು ದೇವರು ಭಕ್ತರ ನಡುವಿನ ಸಾಂಪ್ರದಾಯಿಕ ಏಕ ಮುಖ ಭಕ್ತಿಯಲ್ಲ. ಅವನು ಅವಳ ಭಕ್ತ. ಅವಳು ಅವನ ಭಕ್ತೆ. ಸಮರ್ಪಣೆ ಎನ್ನುವುದಾಗಲೀ ಸ್ವೀಕಾರ ಎನ್ನುವುದಾಗಲೀ ಇಲ್ಲಿ ಪರಸ್ಪರವಾದುದು. ಗಾಳಿ ಕೆನೆಯಂತೆ ನವಿರು! ಮುಟ್ಟಿದರೆ ಮೆತ್ತಿಕೊಳ್ಳುವಷ್ಟು ಮೃದು. ಸೂಕ್ಷ್ಮ. ಕರಗಿ ನೀರಾಗುವಷ್ಟು ಸರಳ, ಉಸಿರಾಡುವಷ್ಟೇ ಸಹಜ ಎನಿಸಿಬಿಡುತ್ತದೆ ಕಾಲದ ಹಂಗು ತೊರೆದ ಪ್ರೇಮ. ಒಬ್ಬರಿಗೊಬ್ಬರು ಹೀಗೆ ತೆತ್ತುಕೊಳ್ಳುವ ಅಂತಹ ಉತ್ಕಟ ಮೃದು ಮಧುರ ಪ್ರೇಮ ಸಾಧ್ಯವೇ?

ಗಾಢವಾಗಿ ಆವರಿಸಿಬಿಡುವ, ಇನ್ನಿಲ್ಲದಂತೆ ಕಾಡುವ ಮರಾಠಿ ಸಿನಿಮಾ “ಜೀವನಸಂಧ್ಯಾ” !
ಕೆಳಗೆ ಅಪರಂಪಾರ ಅಟ್ಲಾಂಟಿಕ್ ! ಅಗಾಧತೆಯ ಮೇಲೆ ವಿಮಾನ ಹಾರುತ್ತಿತ್ತು. ಎದುರು ಪರದೆಯಮೇಲೆ ಜೀವನಸಂಧ್ಯಾ! ಸಾಗರಕ್ಕೆ ಸಾಗರವೇ ಉಪಮೆಯೆಂದರೆ ಹೇಗೆ? ಸಾಗರಕ್ಕೆ ಪ್ರೇಮವೇ ಉಪಮೆ! ಅದು ಪ್ರೇಮಸಾಗರ. ಪ್ರೇಮ‌ ಮತ್ತು ಸಾಗರ ಒಂದೊರೊಳಗೊಂದರ ಆವರ್ತನ. ನೋಡುಗರನ್ನು ಅಲ್ಲಾಡಿಸಿಬಿಡುತ್ತದೆ.
ನೋಡಿ “ಜೀವನಸಂಧ್ಯಾ” ಪ್ರೈಮ್ ವೀಡಿಯೋದಲ್ಲಿದೆ.

‍ಲೇಖಕರು Admin

October 10, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: