ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೆಟ್ಟ ಚಟವೇತಕೆ???…

ಸೌಜನ್ಯ ನಾಯಕ

ಸುತ್ತಲೂ ಕತ್ತಲೆಯ
ಕೋಣೆಯನ್ನು ಕಟ್ಟಿಕೊಂಡು
ಕನಸುಗಳನ್ನೆ ಕಾಣದಂತೆ
ಬದುಕುವುದಾದರೆ
ಅಂತಹ ಬದುಕಾದರೂ ಅದೇತಕೆ?
ತಿರುಗಿ ನೋಡಿದಾಗೊಮ್ಮೆ
ಕಳೆದು ಹೋದ ನೂರು
ದಿನಗಳ ನಡುವೆ
ಒಂದು ದಿನದ ನೆನಪು
ನಮ್ಮ ಮನಸ ನಗಿಸಲಾರದೆ
ಹೋದರೆ
ಅಂತಹ ದಿನಗಳ
ನೆನಪಿಸಿಕೊಳ್ಳುವುದಾದರು ಅದೇತಕೆ?
ಕಪಟವೇ ತುಂಬಿರುವವರ
ಮನಸಿನ ಬತ್ತಳಿಕೆಯಿಂದ
ಹೊರಡುವ ಸಿಹಿ ಮಾತಿನ
ಬಾಣಗಳೆಲ್ಲವೂ
ಬೇರೆಯವರನ್ನು ಮೋಸ
ಮಾಡಲಿಕ್ಕೆ ಇರುವುದಾದರೆ

ಅಂತಹ ಸಿಹಿತನವಾದರೂ ಅದೇತಕೆ?
ನಮ್ಮ ಬದುಕನ್ನು ಬೇರೆಯವರ
ಬದುಕಿಗೆ ಹೋಲಿಸಿ
ಬದುಕುವುದಾದರೆ
ನಮ್ಮದು ಪೂರ್ಣ ಪ್ರಮಾಣದ
ಬದುಕೆಂದು ಹೇಳಿ
ಅಪೂರ್ಣವಾಗಿ ಬೀಗುವುದಾದರೂ ಅದೇತಕೆ?
ಉತ್ತರವೇ ಸಿಗದಂತ
ಅದೆಷ್ಟೋ ಪ್ರಶ್ನೆಗಳು
ನಮ್ಮನ್ನು ಕಾಡುತಿರುವಾಗ
ಉತ್ತರ ಸಿಕ್ಕವುಗಳಲ್ಲಿಯೂ
ಪ್ರಶ್ನೆಯೊಂದ ಕೆದಕಿ
ಹೊರ ತೆಗೆವ
ಕೆಟ್ಟ ಚಟವೊಂದು ನಮಗೆ
ಅಂಟಿಕೊಂಡದಾದರೂ ಅದೇತಕೆ?

‍ಲೇಖಕರು Admin

15 June, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading