ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೆಟ್ಟತಲೆಯ ನಾಲ್ಕು ಘಟ್ಟಗಳು

– ರಾಘವೇಂದ್ರ ಜೋಶಿ ಪಾಠ ಒಂದು: ಅ-ಅಗಸ ಆ-ಆನೆ ಈತ ಗಣಪ ಆತ ಈಶ ಈಶನ ಮಗ ಗಣಪ ಕಮಲಳ ಲಂಗ ಥಳಥಳ ಸೂರ್ಯನ ಬೆಳಕು ಫಳಫಳ.. ವ್ಹಾ! ಎಂಥ ಸರಳರೇಖೆ. ಪಾಠ ಎರಡು: ಜಲಜನಕವು ಆಮ್ಲಜನಕದೊಂದಿಗೆ ವರ್ತಿಸುತ್ತಿರುವಾಗ- ಅವನು ಅವಳ ಹೆಸರನ್ನು ನೀಲಿ ಹೃದಯದೊಂದಿಗೆ ಡೆಸ್ಕಿನಲ್ಲಿ ದಟ್ಟವಾಗಿ ಕೆತ್ತುತ್ತಿದ್ದ. ಮುಂದಿನ ಪಿರಿಯಡ್ಡು ಅಭಿಜ್ಞಾನ ಶಾಕುಂತಲ. ಹುಡುಗನ ಪೆನ್ನಲ್ಲಿ ಹನಿ ಇಂಕಿಲ್ಲ. – ಮುಂಜಾನೆಯ ಕನಸು ಯಾವತ್ತೂ ನಿಜವಾಗದು. ಕನಸು ನನಸಾಗುವ ಅವಸರದಲ್ಲಿ ಕನಸು ಕನವರಿಕೆಯಾಗುವ ಗೊಂದಲವೇ ಹೆಚ್ಚು ಸುಂದರ ಮತ್ತು ಅಪೇಕ್ಷಣೀಯ. ಸದ್ಯ, ಮುಂಜಾನೆಯ ಕನಸು ಬರೀ ಸಿಹಿನಿದ್ದೆ ಮಾತ್ರ ತರಬಲ್ಲದು. – ಎಲ್ಲ ಮರೆಯಬೇಕಿದೆ ಹಿಂದೆ ಸಾಗಬೇಕಿದೆ. ಕಮಲಳ ಲಂಗವನ್ನು ಮತ್ತೊಮ್ಮೆ ಥಳಥಳಿಸಬೇಕಾಗಿದೆ ಶಕುಂತಲೆಯ ಕತೆ ಸರಿಯಾಗಿ ಬರೆಯಬೇಕಿದೆ ಅಕಟಕಟಾ, ಎಷ್ಟು ಬೈದರೂ ಬರಲಾರ ದೂರ್ವಾಸ ಕೊಡಲಾರ ಮರೆವಿನ ಶಾಪ. – ಅವರು ಅಂತಾರೆ: ಮಾನವನಿಗೆ ಏಳೇ ಜನ್ಮ. ಮುಗಿಸಿಯಾಗಿದೆ ಏಳೇಳು ಜನ್ಮ. ಆದರೂ ಮತ್ತೊಮ್ಮೆ ಹುಟ್ಟುವಾಸೆ at least, ಅವಳ ಮನೆಯ ಎಮ್ಮೆ ಕಟ್ಟುವ ಗೂಟವಾಗಿ!]]>

‍ಲೇಖಕರು avadhi

19 June, 2010

10 Comments

  1. suresh kota

    cool..!
    ನಿಮ್ಮ ಪೆನ್ನಿನಲ್ಲಿ ಇಂಕು ಸದಾ ತುಂಬಿ ತುಳುಕುತ್ತಿರಲಿ..

  2. savitri

    Kavana bahala cholo aithe. oduttiddanteye naanu nanna Kamana billu kamaanu kattide.. modalada kavanagalu matthu aa dinagalalli paatagala kendra binduvagiruthidda Kamale, Basava matthu Ravi modalada charactors smruthiyalli theli bandavu. Thanks. Nimma kagadagalu mathu ink and ur will to write may ever green.

  3. Laxminarayana Bhat P

    ಪೆನ್ನಿನ ಇಂಕನ್ನು ಬಳಸುವಾಗ ಬಹಳ ಎಚ್ಚರಿಕೆ ಇರಬೇಕು. ಇಂಕು ಸೋರಬಾರದು; ನವಿರಾಗಿ ಹರಡಬೇಕು! ಗೀಚಿದ್ದೆಲ್ಲಾ ಕವಿತೆಯಾಗಲಾರದು.

  4. sunaath

    ತಲೆ ಕೆಟ್ಟರೆ ಮಾತ್ರ, ಒಳ್ಳೆಯ ಕವನ ಹೊರಬರಬಲ್ಲದು. ನಿಮ್ಮ ತಲೆ ಹೀಗೇ ಕೆಡುತ್ತಿರಲಿ ಎಂದು ಹಾರೈಸುತ್ತೇನೆ!

  5. Siddu Yawagal

    Tumba channagide joshi Kavanagalu, Ankalipi ya nenepu madi kottiri

  6. jyothi

    yako….. parvagilla annisthu ashte…avala maneya yemme kattuva gootavaagiye yake ???keep writing…and let me understand your kavanas more …..

  7. Hema

    tumba chennagi bandive salugalu….tale kettare ishtu chennagi moodi bandide nimma kavana,ful fresh aagi iddare mind,innu beautiful aagi baritara ansutte alwa sir…

  8. Mallikarjuna Barker

    Nanna primary scool teacher nenapadru,
    thanks for rembereing

  9. chinnu mama

    chitravu chikkavaraagiddagin shaaleya nenapannu nenapisuttade. manushya jeevanad naalku ghattagalannu naalku paathagalannagi chitrisiruva ninna kavanavu chennagide. aadare murane ghattavu innu chennagi barabahuditteno anisuttade.

  10. K.Kotresh

    Nimma Kavan nanna Primary,PUC,Degree yalla nennpu tanditu,Jeevan
    Saral Rekhe inda golakarad aayam vannu bechhidante toritu,keept it up with enthu filled up in the pen.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading