ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೃಷ್ಣಾ ಕೌಲಗಿ ಕವಿತೆ- ‘ದುಃಖ’ -ವೆಂದರೆ…

ಕೃಷ್ಣಾ ಕೌಲಗಿ

‘ದುಃಖ’
-ವೆಂದರೆ,
ನನಗೆ ಬೇರೆಯದೇ ಒಂದು ಭಾವವಿತ್ತು-

ಅದು-
ಮನಸ್ಸಿಗೆ ಹತ್ತಿರವಾದವರ
ಸಾವು- ನೋವಿನಲ್ಲಿದೆ ಎಂಬುದೊಂದು
ಅನಿಸಿಕೆಯಿತ್ತು…
ಅದನ್ನು ದಾಟಿ ದಡ ಸೇರುವದು ನಿಜಕ್ಕೂ ತೀರದ ‘ಸೆಣಸಾಟ’
ಅಂದುಕೊಂಡಿದ್ದೆ…

ಇಲ್ಲ –
ಹಾಗೆ ದಾಟಿ ಸೇರಬಹುದಾದ ದಡವೆಂಬುದು ಇಲ್ಲವೇಯಿಲ್ಲ-
ಎಂಬುದೀಗ ನನಗೆ ಅರಿವಾಗಿದೆ…

ಏನಿದ್ದರೂ ಅದನ್ನು ತಾಳಿಕೊಳ್ಳಬೇಕು,
ಅದರೊಂದಿಗೆ ರಾಜಿಯಾಗಬೇಕು,
ಕೊನೆಯವರೆಗೂ ಅದು ಇರುವದೇ ಎಂಬ ಸತ್ಯವನ್ನು ಒಪ್ಪಿಕೊಳ್ಳಲೇಬೇಕು-

ದುಃಖವೆಂದರೆ ಅನುಭವಿಸಿ ಮುಗಿಸಬಹುದಾದದ್ದಲ್ಲ,
‘ಮುಗಿಯಿತು’ ಎಂದು ನಿರಾಳವಾಗುವದಂತೂ ಅಲ್ಲವೇ ಅಲ್ಲ-

ಅದೆಂದರೆ, ಒಂದು ಪರಿಹಾರ,
ನಮ್ಮೊಳಗೇ ಇರುವ
ಒಂದು ಗುಣಾತ್ಮಕ ಅಂಶ…
ನಮ್ಮೊಳಗೇ ಆಗಬೇಕಾದ ಆಂತರಿಕ
ಬದಲಾವಣೆ…
ನಮ್ಮನ್ನೇ ನಾವು ಕಂಡುಕೊಳ್ಳುವ ಹೊಸದೊಂದು ಅರಿವು…
ಅಷ್ಟೇ-
ಬರೀ ಅಷ್ಟು ಮಾತ್ರವೇ…

(ಈ ಅರಿವು ಮೂಡಿ ಈ ನವರಾತ್ರಿಗೆ ಮೂವತ್ತೊಂಬತ್ತು ವರ್ಷಗಳು…)

‍ಲೇಖಕರು Admin

8 October, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading