ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೃಷ್ಣಾ ಕೌಲಗಿ ಅನುವಾದಿತ ಕವಿತೆ – ದ್ವಂದ್ವ…

ಮೂಲ : ಕಾರ್ಲ್‌ ಸ್ಯಾಂಡ್‌ಬರ್ಗ್‌    

 ಕನ್ನಡಕ್ಕೆ : ಕೃಷ್ಣಾ ಕೌಲಗಿ

ನನಗೆ ಯಾವಾಗಲೂ ದ್ವಂದ್ವ…
ಬಯಲಾಗದೇ ಒಳಗೇ ಹುದುಗಿರಲೇ?
ಎಲ್ಲರೊಂದಿಗೆ ಮುಕ್ತವಾಗಿರಲೇ?

ಅನಿಶ್ಚಿತತೆಯ ಕಾತರತೆಯಲ್ಲಿರಲೇ?
ಅಭಯದ ಶ್ರೀರಕ್ಷೆಯಲ್ಲಿರಲೇ?
ಸ್ವಾತಂತ್ರ್ಯಕ್ಕಾಗಿ ಹಂಬಲಿಸಲೇ?
ಬೇರುಗಳೊಂದಿಗೆ ಬೆಸೆದುಕೊಳ್ಳಲೇ?

ಪ್ರವಾಹದ ಸೆಳೆತಕ್ಕೆ ಸಿಕ್ಕು ಆಚೀಚೆ
ಸದಾ ಜಾಗ ಬದಲಿಸುತ್ತಲೇ ಇರುವ ತೆರೆಗಳಂತೆ ನಾನು…
ನಿರಂತರವಾಗಿ ಅತ್ತಿಂದಿತ್ತ,ಇತ್ತಿಂದತ್ತ
ಹೊಯ್ದಾಡುವ ಗಡಿಯಾರದ
ಲೋಲಕ ನಾನು…
“ನಾನೆಲ್ಲಿ ಸಲ್ಲುತ್ತೇನೆ?”- ಎಂದರೆಕ್ಷಣ ಯೋಚಿಸಲೂ
ಸ್ಥಬ್ದವಾಗದಷ್ಟೂ
ಸಮಯದ ಅಭಾವ ನನಗೆ !!!

‍ಲೇಖಕರು Admin

18 September, 2022

1 Comment

  1. prathibha nandakumar

    ಮೂಲ ಕವನ ಮತ್ತು ಅನುವಾದ ಎರಡೂ ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading