‘ಕಿಲಾರಮನೆ’ಯಲ್ಲಿ ಹೀಗಾಯ್ತು..

 

 

 

 

ಕೆ ಎಸ್ ರಾಜಾರಾಂ 

 

 

 

 

 

ಪ್ರಿಯರೇ..

ನಿಮಗೆ ಹಾಗೂ ನಿಮ್ಮ ಬಳಗದ ಎಲ್ಲರಿಗೂ ದೀಪಾವಳಿ – ಬಲಿಪಾಡ್ಯಮಿ ಪ್ರಯುಕ್ತ  ಭಗವಂತ ಆಯುರಾರೋಗ್ಯ, ಸಂಪತ್ತು, ನೆಮ್ಮದಿ ಮತ್ತು ಜೀವನ ಸಂತೋಷ ನೀಡಲಿ ಎಂದು ಹಾರೈಸುತ್ತೇನೆ..

15 ವರ್ಷದಹಿಂದೆ  ನಮ್ಮ ಗಿರಿನಗರದ ‘ಕಿಲಾರಮನೆ’ ಯನ್ನು ಕಟ್ಟಿದ್ದ ಕಂಟ್ರಾಕ್ಟ್ ದಾರರ ಮಣ್ಣು ಕೆಲಸಗಾರ ನಾಗಪ್ಪ ಆನಂತರವೂ ನಮ್ಮ ಜೊತೆಯೇ ವಾಸಮಾಡುವುದಕ್ಕೆ ಅವರಿಗಾಗಿ  ಇದ್ದ ಜಾಗದಲ್ಲೇ ಪುಟ್ಟ ಔಟ್ ಹೌಸ್ ಕಟ್ಟಲಾಯಿತು,  ಕಾರಣ ಆ ದಂಪತಿಗಳ ಪ್ರಾಮಾಣಿಕ , ನಂಬಿಕಸ್ತ ಗುಣ.  .

ಹಾಗಾಗಿ, ಅಲ್ಲಿ ನಾಗಪ್ಪ-ಮಾದೇವಿ ಮತ್ತು ಅವರ ಮಕ್ಕಳ ವಾಸ.

BPL ಕಾರ್ಡ್, ಆಧಾರ್ ಕಾರ್ಡ್, ಜನ್ ಧನ್ ಬ್ಯಾಂಕ್ ಅಕೌಂಟ್ ಎಲ್ಲವನ್ನೂ ಮಡದಿ ಶೈಲಾ ಪಟ್ಟು ಹಿಡಿದು ಅವರಿಗೆ ಮಾಡಿಸಿಯೂ ಆಯಿತು!

ಅವರ  ಮೂರೂ ಹೆಣ್ಣುಮಕ್ಕಳೂ ಓದಿನಲ್ಲಿ, ರಂಗೋಲಿಯಲ್ಲಿ, ಶಾಲೆಯ ಸಾಂಸ್ಕೃತಿಕ ಕಾರ್ಯ ಚಟುವಟಿಕೆಗಳಲ್ಲಿ ಮುಂದೆ. SSLC ಯಲ್ಲಿ 80 % ಅಂಕ ಗಳಿಸಿದ ಹಿರಿಯ ಮಗಳು ಅಂಬಿಕಾಗೆ ಬಿ.ಎಂ.ಎಸ್. ಮಹಿಳಾ ಕಾಲೇಜಿನಲ್ಲಿ PUC ಮಾಡsಲು ವಿಶೇಷ ರಿಯಾಯಿತಿ ವಾರ್ಷಿಕ ಶುಲ್ಕದಲ್ಲಿ ಈ ವರ್ಷ ಸೀಟ್ ಕೊಟ್ಟಿದ್ದಾರೆ. ಮತ್ತಿಬ್ಬರೂ ಅಕ್ಕನಂತೆಯೇ ಓದಿನಲ್ಲಿ ಜೋರು. ಅವರ ವಿದ್ಯಾಬ್ಯಾಸದ ಖರ್ಚು ನನ್ನ ಮಡದಿಯದ್ದು.

ನಮ್ಮ ಮಕ್ಕಳು ಈಗ ಹೊರ ದೇಶದಲ್ಲಿದ್ದಾರೆ.. ಹಾಗಾಗಿ, ನಮಗೆ ಹಬ್ಬದ ಸಂಭ್ರಮ ನೀಡುವವರು, ಈ ಮುದ್ದು ಮಕ್ಕಳೇ ಆಗಿದೆ..

ಅವರೇ ನಮ್ಮ ಕೇರ್ ಟೇಕರ್ಸ್ ಕೂಡಾ!,

ಮೊನ್ನೆ ಸಂಜೆ ಮತ್ತು  ನಿನ್ನೆ ಮತ್ತು ಇಂದೂ  ಸ್ನೇಹಿತರಾದ ಬಿಂದು, ಕಿರಣ ಜೊತೆಗೂಡಿ  ಅಂಬಿಕಾ, ಶಿವಗಂಗಾ ಮತ್ತು ರೂಪ ಹಬ್ಬದ ದೀಪಾಲಂಕಾರ ಮಾಡಿ, ರಂಗೋಲಿ ಚಿತ್ತಾರ ಬೆಡಿಸಿ ನನ್ನ ಕ್ಯಾಮೆರಾಕ್ಕೂ ಸಂಭ್ರಮ ಹಂಚಿದ್ದಾರೆ… ಫೋಟೋ  ನೋಡಿ. ಆನಂದಿಸಿ

 ~ ಶೈಲಾಳ ಶುಭಾಶಯಗಳನ್ನೂ ಸೇರಿಸಿ ರಾಜಾರಾಮ್

‍ಲೇಖಕರು avadhi

October 21, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: