ಕಿರಣ್ ಭಟ್ ಅವರ ವಿಶೇಷ ರಂಗ ಸರಣಿ – Third Reach…

ಇವರು ರಂಗ ‘ಕಿರಣ’-

ಕಿರಣ್ ಭಟ್ ಎಲ್ಲರಿಗೂ ರಂಗ ಬಂಧು. ಕಿರಣ್ ಭಟ್ ಅವರನ್ನು ನುಡಿಸಲು ತೊಡಗಿದರೆ ಎಷ್ಟೊಂದು ರಂಗ ಕಥೆಗಳು ಹೊರಬರುತ್ತವೆ. ‘ಅವಧಿ’ ಹೀಗೆ ನುಡಿಸಲು ತೊಡಗಿದ ಮೇಲೆ ಅವರಿಂದ ಹೊರ ಬಿದ್ದ ರಂಗ ಕಥೆಗಳೆಷ್ಟು?!.

ನನ್ನಿಂದ ಸಾಧ್ಯವೇ ಇಲ್ಲ ಎಂದು ಕೈ ಆಡಿಸಿ ಬೆನ್ನು ಹಾಕಿ ಹೋಗಿದ್ದ ಅದೇ, ಅದೇ ಕಿರಣ್ ಭಟ್ ನಮ್ಮೆದುರು ‘ರಂಗ ಕೈರಳಿ’ ಹಿಡಿದು ಬಂದರು. ಆ ರಂಗ ಕೈರಳಿ ಎಲ್ಲರೂ ಕೇರಳದ ರಂಗಭೂಮಿಯ ಕುರಿತ ದಾಖಲೆ ಎಂದುಕೊಂಡಿದ್ದರೆ. ಅದು ನಿಜವೇ ಹೌದಾದರೂ ಅದು ಅದಕ್ಕಿಂತ ಹೆಚ್ಚಾಗಿ ಕಿರಣ್ ಭಟ್ ಅವರ ರಂಗ ಪ್ರೀತಿಯ ಬಗೆಗಿನ ದಾಖಲೆ.

ನಾನು ಕಿರಣ ಭಟ್ ಅವರ ಹೆಸರು ಕೇಳಿದ್ದು ರಂಗಭೂಮಿಗೆ ಥಳಕು ಹಾಕಿಕೊಂಡೇ. ಅಷ್ಟರ ಮಟ್ಟಿಗೆ ಕಿರಣ್ ಹಾಗೂ ರಂಗಭೂಮಿ ಒಂದೇ ನಾಣ್ಯದ ಎರಡು ಮುಖಗಳು.

ಮಕ್ಕಳ ಅಂತೆಯೇ ಹಿರಿಯರ ರಂಗಭೂಮಿಯಲ್ಲಿ ಅಪಾರ ಅನುಭವವಿದೆ. ಇಷ್ಟೇ ಆಗಿದ್ದರೆ ಕಿರಣ್ ಬಗ್ಗೆ ರಂಗ ಪ್ರಿಯರು ಮಾತನಾಡುತ್ತಿರಲಿಲವೇನೋ. ಅವರು ಪ್ರತೀ ರಂಗ ಉತ್ಸಾಹಿಗೂ ಕೊಟ್ಟ ಬೆಂಬಲ, ತಮ್ಮ ಜಿಲ್ಲೆಯಲ್ಲಿ, ಹೋದೆಡೆಯಲ್ಲಿ ಕಟ್ಟಿಕೊಂಡ ರಂಗ ಆವರಣ, ಪ್ರಯೋಗಗಳಿಗೆ ಕೊಟ್ಟ ಹೊಸ ಧಿಕ್ಕು ಎಲ್ಲವೂ ಕಿರಣರನ್ನು ‘ರಂಗ ಕಿರಣ’ವಾಗಿಸಿದೆ.

ಇವರ ಬೆನ್ನು ಬಿದ್ದು, ದಮ್ಮಯ್ಯಗುಡ್ಡೆ ಹಾಕಿ ಇವರ ಕೈಗೆ ಪೆನ್ನು ಹಿಡಿಸಿದ ಒಂದೇ ಕಾರಣಕ್ಕೆ ಇವರ ಏಕೈಕ ಕೃತಿ ರಂಗ ಕೈರಳಿ ಹೊರಬಂದಿತು. ಅದು ಅವರಿಗೆ ಹೆಸರು ತಂದುಕೊಟ್ಟಂತೆ ಕೇರಳದ ರಂಗಭೂಮಿಯನ್ನೂ ಕರ್ನಾಟಕದಲ್ಲಿ ಇನ್ನಿಲ್ಲದಂತೆ ಪ್ರಚುರಪಡಿಸಿತು.

ಈ ಕೃತಿಯ ನಿರೂಪಣಾ ಶೈಲಿ, ಅನುಭವ ಎಲ್ಲವೂ ಕನ್ನಡದ ಓದುಗರ ಕುತೂಹಲ ಕೆರಳಿಸಿದೆ. ಇವರ ಈ ಕೃತಿ ಪ್ರಕಟಿಸಲು ಕೈ ಹಚ್ಚಿದ ಕಾರಣಕ್ಕೆ ನಾನು ಅವರ ಜೊತೆಯಾಗಿ ಕೇರಳದ ಅಂತಾರಾಷ್ಟ್ರೀಯ ರಂಗ ಉತ್ಸವಕ್ಕೂ ಹೋಗಿ ಬಂದೆ. ಅಲ್ಲಿ ನಾವಿಬ್ಬರೂ ನೋಡಿದ, ನನಗೆ ನೋಡಲು ಕೊಡದೆ ತಾವೊಬ್ಬರೇ ಕೂತು ನೋಡಿದ ನಾಟಕಗಳ ಸರಣಿಯೇ ಈ ಬರಹ ಗುಚ್ಛ.

ಕೇರಳದ ಬೀದಿಗಳಲ್ಲಿ ಸುತ್ತುತ್ತಾ, ಅಲ್ಲಿನ ಗೊತ್ತಿಲ್ಲದ ಭಾಷೆಗೆ ಕಣ್ಣು ಬಿಡುತ್ತಾ, ಭಾಷೆ ಗೊತ್ತಿಲ್ಲದಿದ್ದರೂ ನಾಟಕದ ಒಳಮಿಡಿತಗಳನ್ನು ಅರ್ಥ ಮಾಡಿಕೊಂಡ, ಅಲ್ಲಿನ ರಂಗ ಉತ್ಸಾಹದ ಜೊತೆಗೆ ಸೇರಿ ಹೋದ ಎಲ್ಲದರ ನೋಟ ಇಲ್ಲಿದೆ.

ಕಿರಣ ಭಟ್ ತಮ್ಮ ಇಂದಿನ ಶೈಲಿಯಲ್ಲಿ ಬರೆದಿದ್ದಾರೆ. ಓದಿ

-ಜಿ ಎನ್ ಮೋಹನ್

ರಂಗ ಕೈರಳಿ‘ ಕೃತಿಯನ್ನು ಕೊಳ್ಳಲು –https://bit.ly/3zioQ5f ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

4

Third Reach

Performative Video installation

Director: Organizzazione Romeo Castellicci

ಈ ಪ್ರಯೋಗದ ದಿನ ಬೆಳಿಗ್ಗೆ ನಾನು ಓನಲೈನ್ ನಲ್ಲಿ ಕಾದಿರಿಸಿದ ಟಿಕೆಟ್ ಗಳ ಪ್ರತಿಯನ್ನ ಪಡ್ಕೊಳ್ಳೋಕೆ ಆಫೀಸಿಗೆ ಹೋಗಿದ್ದೆ. ಕೌಂಟರ್ ನಲ್ಲಿ ಕುಳಿತ ಮನುಷ್ಯ ಈ ನಾಟ್ಕದ ಟಿಕೆಟ್ ಕೊಢೋಕೆ ಹಿಂದೆ ಮುಂದೆ ನೋಡ್ತಿದ್ದ. ಸ್ವಲ್ಪ ಹೊತ್ತು ಅಲ್ಲಿಲ್ಲಿ ವಿಚಾರಿಸಿಕೊಂಡು ಬಂದವ, ಒಂದು ಘಂಟೆಗೆ ಬನ್ನಿ ಸರ್, ನಾಟ್ಕದ ಟಿಕೆಟ್ ಕೊಡೋಕೂ ಮುಂಚೆ ಕೆಲವು ಸೂಚನೆಗಳನ್ನ ಕೊಡ್ಬೇಕಂತೆ ಅಂತ ನನ್ನನ್ನು ಸಾಗಹಾಕಿದ. ನನ್ಗೂ ಇದು ವಿಚಿತ್ರವಾಗೇ ಕಂಡ್ತು. ಆಯ್ತಪ್ಪಾ…. ಅಂತ ಮತ್ತೆ ಒಂದು ಘಂಟೆಗೆ ಹೋದೆ. ಸುಮ್ಮನೆ ಟಿಕೆಟ್ ಕೊಟ್ಟ. ಯಾವ ಸೂಚನೆಗಳೂ ಇರ್ಲಿಲ್ಲ. ತುಂಬ ರಷ್ ಇತ್ತು. ನಾನೂ ಕೇಳಲಿಲ್ಲ.

ಸಂಜೆ ಪ್ರದರ್ಶನಕ್ಕಾಗಿ ಕ್ಯೂ ನಿಂತಿದ್ವಲ್ಲ…. ನಮ್ಮನ್ನು ದಾಟ್ಕೊಂಡು ಸ್ಟೆತಾಸ್ಕೋಪ್ ಹಾಕ್ಕೊಂಡ ಡಾಕ್ಟರೂ, ನರ್ಸುಗಳೂ ಒಳಗೆ ಹೋದ್ರು. ಹಾಲ್ ನ ಪಕ್ಕ ಏಂಬುಲೆನ್ಸ್ ಬಂದು ನಿಂತಿತು. ಓಹ್!   ಕಲಾವಿದರಿಗೇನೋ ಆಗಿದೆ ಆಂದ್ಕೊಂಡೆವು. ಇಲ್ಲ. ಡಾಕ್ಟರೂ ನರ್ಸುಗಳೂ ಬಾಗಿಲಲ್ಲೊಂದು ಕುರ್ಚಿ, ಟೇಬಲ್ ಹಾಕಿ ಕೂತ್ಕೊಂಡ್ರು. ಆಗ ವಿಶೇಷವಾದದ್ದೇನೋ ಇದೆ ಅಂತ ಅನಿಸೋದಕ್ಕೆ ಶುರುವಾಯ್ತು. ಅಷ್ಟ್ರಲ್ಲ್ಲಿ ಅಲ್ಲಿಗೊಂದು ಮೈಕು ಬಂತು. ಮೈಕು ಹಿಡಿದವ ಮಾತಾಡತೊಡಗಿದ. ಬೆಳಿಗ್ಗೆ ಹೇಳಿದ ಸೂಚನೆಗಳು ಆಗ ಬರತೊಡಗಿದವು.

ಈ ಪ್ರದರ್ಶನದಲ್ಲಿ ತೀವ್ರ ಪ್ರಮಾಣದ ಬೆಳಕಿನ ಕಿರಣಗಳು ಎಸೆಯಲ್ಪಡುತ್ತವೆ.

ಅತಿ ಎನಿಸುವಷ್ಟು ತೀವ್ರತೆ ಮತ್ತು ದೊಡ್ಡದಾದ ಶಬ್ದಗಳಿರುತ್ತವೆ

ಆದುದರಿಂದ-

ಹೃದಯದ ತೊಂದರೆಯಿರುವವರು, ಮಕ್ಕಳು, ಜಾಸ್ತಿ ಬಿ.ಪಿ. ಹೊಂದಿರುವವರು, ಕಣ್ಣಿನ ತೊಂದರೆಯಿರುವವರು ಪ್ರದರ್ಶನಕ್ಕೆ ಹೋಗಬೇಡಿ, ಹೋದವರಲ್ಲಿ ಯಾರಿಗಾದರೂ ತೊಂದರೆ ಎನಿಸಿದರೆ ಮಧ್ಯದಲ್ಲೂ ಎದ್ದು ಬರಬಹುದು.

ಇಂಥದೊಂದು ಅನುಭವ ನನಗಂತೂ ಹೊಸದು. ತುಂಬ ಇಂಟರೆಸ್ಟಿಂಗ್ ಎನಿಸಿತು. ತಂಡ ಪ್ರೇಕ್ಷಕರ ಮೇಲಿಟ್ಟ ಕಾಳಜಿಗೆ ಹೆಮ್ಮೆಯೂ ಅನಿಸ್ತು.

ಏನೇ ಆಗ್ಲಿ ನೋಡ್ಬಿಡೋದೇ ಅಂತ ಧೈರ್ಯ ಮಾಡಿ ಒಳಗೆ ಹೊಕ್ಕಾಯ್ತು.

ನಿಜಕ್ಕೂ ಇದೊಂದು ಹೊಸ ಅನುಭವವೇ.

ಇದೊಂದು ವೀಡಿಯೋ ಇನಸ್ಟಲೇಷನ್. ಶುರುವಾಗೋದು ಜಾನಪದದಂಥ ಸಣ್ಣ ಆಚರಣೆಯೊಂದಿಗೆ. ಮ ಬೆಳಕಿನಲ್ಲಿ ನಟಿಯೊಬ್ಬಳು ಬರ್ತಾಳೆ. ರಂಗದ ಮಧ್ಯದಲ್ಲಿ ಇದ್ದ ಕಿವಿಯೋಲೆಯನ್ನ ತೊಟ್ಟುಕೊಳ್ತಾಳೆ. ಮುಂಭಾಗದಲ್ಲಿ ತುಸು ಎತ್ತರದಲ್ಲಿ ಇಟ್ಟ ಬೆನ್ನು ಮೂಳೆಯಂಥ ಆಕೃತಿಯೊಂದನ್ನು ಬಿಡಿಸಿ ಬಿಡಿಸಿ ಇಟ್ಟು ಹೊರಟುಹೋಗ್ತಾಳೆ.

ಮುಂದೆ ಶುರುವಾಗೋದೇ ವೀಡಿಯೋ ಇನಸ್ಟಲೇಶನ್. ಈಗ ಇಟಾಲಿಯನ್ ಶಬ್ದ ನಿಘಂಟಿನ, ಬೇರೆ ಭಾಷೆಗೆ ಅನುವಾದಿಸಲ್ಪಟ್ಟ ನಾಮ ಪದಗಳು ಪರದೆಯ ಮೇಲೆ ಎಸೆಯಲ್ಪಡುತ್ತಿವೆ. ಅವುಗಳ ವೇಗ ಜಾಸ್ತಿಯಾಗ್ತಿದೆ. ಈಗ ಒಂದು ಸೆಕೆಂಡಿನ ಹನ್ನೆರಡನೆಯ ಒಂದು ಭಾಗದ ವೇಗದಲ್ಲಿ ಅವು ನಿರಂತರವಾಗಿ ಬದಲಾಗ್ತಿವೆ ಜೊತೆಗೆ ದೊಡ್ಡ ಶಬ್ದದ ಇಟಾಲಿಯನ್ ಸಂಗೀತ. ಅದರ ವೇಗವೂ ಬದಲಾಗ್ತಲೇ ಇದೆ. ಮಧ್ಯೆ ಮಧ್ಯೆ ಯಾವುದೋ ಒಂದೊಂದು ಶಬ್ದಗಳನ್ನು ಮಾತ್ರ ಒದೋದಕ್ಕೆ ಸಾಧ್ಯವಾಗ್ತಿದೆ. ನೆನಪಿಟ್ಕೊಳ್ಳೋಕೆ ಅಸಾಧ್ಯವಾದ ವೇಗ ಅದು.

ಒಟ್ಟಾರೆ ಇದೊಂಥರಾ ಶಬ್ದಗಳ ಆಟ ಅನ್ನಿಸ್ತು.

ಆದ್ರೆ ಇಟಾಲಿಯನ್ನರ ಸುಕ್ಷ್ಮತೆಗೆ ಮೆಚ್ಚೋದೇ. ನಿಜಕ್ಕೂ ಎಷ್ಟು ಕಾಳಜಿಯಿಂದ ಸೂಚನೆಗಳನ್ನ ಕೊಟ್ಟಿದ್ರು.

ಆದ್ರೆ ಥಿಯೇಟರ್ ನೊಳಗಿನ ಶಬ್ದದ ಜೋರು ನಮ್ಮ ಡಿ.ಜೆ ಗಳ ಕಿವಿ ಗಡಚಿಕ್ಕುವ ಶಬ್ಬದ ಹತ್ತಿರಕ್ಕೂ ಬರ್ತಿರಲಿಲ್ಲ. (ಒಂದು ಸ್ಮೈಲಿ)

। ನಾಳೆಗೆ ಇನ್ನೊಂದು ನಾಟಕ ।

‍ಲೇಖಕರು avadhi

March 30, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: