ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಿಟಕಿಯಾಚೆಯ ಕನಸೂ ಮತ್ತು ..

kamal_belagurಕಮಲ ಬೆಲಗೂರ್

ಕಗ್ಗತ್ತಲ ಅಂಧಕಾರ,
ಜಗವು ಮಲಗಿರೆ
ಕಿಟಕಿಯೊಂದು
ತೆರೆದ ಹೃದಯದಿclick-kavte4
ಕಾದಿದೆಯಿಲ್ಲಿ
ಪ್ರಥಮ ಉಷಾ
ಕಿರಣದ ಆಹ್ವಾನಕೆ;
ಸೃಷ್ಟಿಯ ಹೊಂಗನಸು
ನನಸಾದ ಪರಿಯ
ಬೆರಗಿನ ಆಸ್ವಾದಕೆ.

ಕಿಟಕಿಯಾಚೆಗಿನ
ರಮ್ಯ ಲೋಕದ
ಕನಸು ಕಿಟಕಿಯೊಳಗಿನ
ಹುಡುಗಿಯ ಕಣ್ಣ
ರೆಪ್ಪೆಯೊಳಗೆ ಬಂಧಿ.

ತಪ್ಪು ಕಿಟಕಿಯದಲ್ಲ!
ಆದರೀ ಸರಳುಗಳು?
ಸರಳವಿಲ್ಲದ ಬದುಕ
ಅಂತರಂಗ ಸತ್ಯಗಳು;
ಹಾರುವ ಬಾನಾಡಿಯ
ಜರ್ಜರಿತ ಮನದ ದರ್ಪಣಗಳು.

‍ಲೇಖಕರು Admin

9 October, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading