ನಿನ್ನೊಳಗೇ ನೀ ಬಂಧಿಯಾಗಿರುವೆ

asha-jagadeesh

ಆಶಾ ಜಗದೀಶ್

ಅಲ್ಲಿ ಆ ಕಿಟಕಿಯಲಿ
ನಿನ್ನ ಮಧುರ ಅಧರಗಳು ಝೇಂಕರಿಸುತ್ತವೆ
ಹೇಗೆ ದ್ವೇಶಿಸಲಿ ಅದನು
ಕಟಕಿಯಾಡುವ ನೆನಪುಗಳು.ನಿನ್ನುಸಿರಿನ ಶೃತಿclick-kavte4
ಎದೆಬಡಿತದ ತಾಳ
ಪ್ರೇಮ ಗೀತೆಯ ಶೋಕವಾಗಿ
ಶೋಕಗೀತೆಯ ಪ್ರೇಮವಾಗಿ
ಲಯಗೊಳ್ಳುತ್ತಾ  ಅನಾಹತ ನಾದವಾಗುತ್ತಿದೆ.

ಎಲ್ಲ ಬಣ್ಣಗಳನ್ನೂ ಕಬಳಿಸಿದ ಕಪ್ಪು
ಕ್ಷುದ್ರ ಶಕ್ತಿಯ ಮೇಲೆ
ಬೆಳಕಿನ ಭಾಷ್ಯ ಬರೆವ ಹಸ್ತಕ್ಕೆ
ಮಾತು ಕಲಿಸಬೇಕಿದೆ
ಉಬ್ಬಿರುವ ಗಂಟಲೊಳಗಿನದ್ದಕ್ಕೆ
ಶಸ್ತ್ರಚಿಕಿತ್ಸೆಯಾಗಬೇಕು.

ಮೋಡ ಕವಿದ ಬಾನಿನ
ಬೆಳ್ಳಿ ಗೆರೆಯಂತೆ
ಡಾಂಬಾರುಗತ್ತಲೆಯ ಕರಿ ಬಾನಿನ
ತಾರೆಗಳಂತೆ
ಕಾಣುತ್ತಿದೆ
ಎಲ್ಲ ದಾರಿಯೂ ಮುಚ್ಚಿದಾಗ ತೆರೆದುಕೊಂಡ
ಕಾಲು ಹಾದಿಯಂತೆ.

ಮುಚ್ಚಿದ ಬಾಗಿಲ ಮನೆಯ
ಕಿಟಕಿ ತೆರೆದಿದೆ
ನೀನಲ್ಲಿ ಇಲ್ಲವಾದರೂ
ಕೈಗೆ ಕೈ ಬೆಸೆಯುವ ಹೊಂಬಾಳೆಯ
ಎಸಳಿನಂತಾ ಹಸ್ತ ಚಾಚಿ ನನ್ನೆಡೆ ನೋಡುತ್ತಿದೆ.

ತಿಳಿಯಿತು
ಇದೋ
ಬಂದೆ
ಸೆರೆ ಬಿಡಿಸಲು
ಗೊತ್ತು.

ನೀನಲ್ಲಿ ನನ್ನನ್ನು
ಹೊರಹಾಕಿ ಉಳಿದಿಲ್ಲ
ನಿನ್ನೊಳಗೇ ನೀ
ಬಂಧಿಯಾಗಿರುವೆ
ಎಂದು.

‍ಲೇಖಕರು Admin

October 9, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: