ಕಿಚನ್ ಸೆಟ್ ಆಟಿಕೆಯೂ… ಮಹಾನಗರಿಯ ಕಥೆಗಳು…

ವಿನಯಾ ನಾಯಕ

 

1. ಅಮ್ಮಾ, ನಂಗೆ ಕಿಚನ್ ಸೆಟ್ ಕೊಡ್ಸು, ಅಡುಗೆ ಆಟ ಆಡ್ತೀನಿ… ಆರು ವರ್ಷದ ಮಗ ಆಟಿಕೆ ಅಂಗಡಿಯಲ್ಲಿ ಒಂದೇ ಸಮನೆ ದುಂಬಾಲು ಬಿದ್ದಾಗ ಲಕ್ಷ್ಮೀಗೆ ಇರಿಸು ಮುರಿಸಾಯಿತು. ‘ಹುಡುಗರು ಅಡುಗೆ ಆಟ ಆಡ್ತಾರೇನೋ ದಡ್ಡ’ ಎಂದು ಗದರುವ ದನಿಯಲ್ಲಿ ನುಡಿದಳು. ಹೌದಾ, ಹುಡುಗರು ಅಡುಗೆ ಆಟ ಆಡೋ ಹಾಗಿಲ್ವಾ! ಮತ್ತೆ ನೀನ್ಯಾಕೆ  ಅಡುಗೆ ಮನೆ ಕೆಲಸದಲ್ಲಿ ಸಹಾಯ ಮಾಡಲ್ಲ ಅಂತಾ ಅಪ್ಪನೊಡನೆ ದಿನಾ ಜಗಳ ಮಾಡ್ತೀಯಾ? ಮಗನ ಪ್ರಶ್ನೆಗೆ ಲಕ್ಷ್ಮಿ ದಿಂಙ್ಮೂಡಳಾದಳು. ಅಂಗಡಿಯಿಂದ ಹೊರಬಂದಾಗ ಮಗನ ಕೈಯಲ್ಲಿ ದೊಡ್ಡ ಕಿಚನ್ ಸೆಟ್ ಆಟಿಕೆಯಿತ್ತು.

 

 

2. ಸಂಭ್ರಮ್, ಊರಿಂದ ಬೆಂಗಳೂರಿಗೆ ಅಣ್ಣನ ಮನೆಗೆ ಬಂದಿದ್ದ ತಂಗಿ ಸಂಧ್ಯಾಳಿಗೆ ಬಟ್ಟೆ ಕೊಡಿಸಲು ಬಹುಮಹಡಿಯ ಬಟ್ಟೆ ಮಳಿಗೆಗೆ ಕರೆದುಕೊಂಡು ಹೋದ. ಬಟ್ಟೆಗಳ ಆಯ್ಕೆ ಮುಗಿದ ಮೇಲೆ ಇಬ್ಬರೂ ಬಿಲ್ ಪಾವತಿಗೆಂದು, ಲಿಫ್ಟ್ ರಷ್ ಇದ್ದುದರಿಂದ ಕೆಳಗಿನ ಫ್ಲೋರಿಗೆ ಮೆಟ್ಟಿಲುಗಳ ಮುಖಾಂತರ ಹೊರಟರು. ಪಕ್ಕದಲ್ಲಿ ವಯಸ್ಸಾದ ಹಿರಿ ಹೆಂಗಸೊಬ್ಬರು ನಿಧಾನಕ್ಕೆ ಬದಿಯ ಸರಳು ಹಿಡಿದು ಇಳಿಯುತ್ತಿದ್ದರು. ಜನಸಂದಣಿಯ ನಡುವೆ ಸಂಭ್ರಮ್ ಹೆಚ್ಚು ಗಮನ ನೀಡದೆ ಪಟಪಟನೆ ಮೆಟ್ಟಿಲು ಇಳಿದು ಕೆಳಬಂದ.

ಇತ್ತ ಸಂಧ್ಯಾ ತನ್ನ ಕೈಚಾಚಿ ‘ಸಹಾಯ ಮಾಡಲಾ’ ಎಂದು, ಹಿರಿಯ ಹೆಣ್ಣುಮಗಳನ್ನು ಕೈಹಿಡಿದು ಸಲೀಸಾಗಿ ಮೆಟ್ಟಿಲಿಳಿಸಿಕೊಂಡು ಬಂದಳು. ಹಿರಿಯ ಜೀವ ತುಂಬು ಮೆಚ್ಚುಗೆಯ ನೋಟದಿಂದ ಸಂಧ್ಯಾಳನ್ನು ಬೀಳ್ಕೊಟ್ಟರು. ಕೆಳಗೆ ನಿಂತಿದ್ದ ಅವರ ಮಗ, ಸೊಸೆಯ ಕಣ್ಣಲ್ಲಿ ಪಶ್ಚಾತಾಪದ ಭಾವನೆಯಿತ್ತು. ಸಂಭ್ರಮನಿಗೆ ತಾನ್ಯಾವಾಗ ಅಕ್ಕ-ಪಕ್ಕದವರನ್ನು ಗಮನಿಸದಷ್ಟು ‘ಇನ್ ಸೆನ್ಸಿಟಿವ್ ನಗರ ಜೀವಿಯಾಗಿ’ ಬದಲಾದೆ ಎಂದು ಯೋಚನೆಯಾಯಿತು. ಮನಸ್ಸಲ್ಲೇ ಮಾನವೀಯತೆಯ ಮರುಪಾಠ ಮಾಡಿದ ತಂಗಿಗೆ ಕೃತಜ್ಞತೆ ಅರ್ಪಿಸಿದ.

‍ಲೇಖಕರು AdminS

September 22, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: