ವಿಜಯನಗರಕ್ಕೊಂದು ರಂಗಾಯಣ ಕೊಡಿ…

ಮಹದೇವ ಹಡಪದ

 

ವಿಜಯನಗರ ಸಾಮ್ರಾಜ್ಯ ಎನ್ನುವುದು ಕನ್ನಡನಾಡಿನ ಕಲೆ, ಸಂಸ್ಕೃತಿ, ಭಾಷೆಗೆ ಸಂಬಂಧಿಸಿ ಮತ್ತೆ ಮತ್ತೆ ಪ್ರಸ್ತಾಪವಾಗುವ ಇತಿಹಾಸವುಳ್ಳ ನಾಡಾಗಿದೆ. ಈ ನಾಡಿಗೊಂದು ರಂಗಾಯಣದ ಅವಶ್ಯಕತೆ ಇದೆ. ಮಧ್ಯಕರ್ನಾಟಕದ ತುದಿಯಲ್ಲಿರುವ ಈ ವಿಜಯನಗರಕ್ಕೊಂದು (ಹಂಪಿ) ರಂಗಾಯಣ ಅವಶ್ಯಕತೆಯಿದೆ.

ಈ ಭಾಗದ ರಂಗಾಯಣವು ದೂರದ ಕಲಬುರ್ಗಿಯಲ್ಲಿದ್ದು ಅದು ಯಾವ ರೀತಿಯಲ್ಲೂ ಬಳ್ಳಾರಿ-ಕೊಪ್ಪಳ ಜಿಲ್ಲೆಗಳನ್ನು ಪರಿಗಣಿಸಿ ಸ್ವತಂತ್ರವಾದ ಕಾರ್ಯಕ್ರಮ ರೂಪಿಸಿದ್ದ ಬಗ್ಗೆ ದಾಖಲೆ ಇಲ್ಲ. ಅಲ್ಲದೆ ಇತ್ತ ಧಾರವಾಡ ರಂಗಾಯಣವೂ, ಶಿವಮೊಗ್ಗ ರಂಗಾಯಣಗಳೂ ಸಮಾನ ದೂರದಲ್ಲಿವೆ. ಕರ್ನಾಟಕದ ಮೇರು ವೃತ್ತಿಕಲಾವಿದರು, ದೊಡ್ಡಾಟ ಕಲಾವಿದರು, ಸಾಕಷ್ಟು ನಾಟಕ ಕಂಪನಿಗಳ ಹುಟ್ಟಿಗೂ ಕಾರಣವಾಗಿರುವ ಬಳ್ಳಾರಿ, ಕೊಪ್ಪಳ ಜಿಲ್ಲೆಗಳು ಸಾಕಷ್ಟು ಶ್ರೇಷ್ಠ ಕಲಾವಿದರನ್ನು ಕನ್ನಡ ರಂಗಭೂಮಿಗೆ ಪರಿಚಯಿಸಿವೆ.

 

ಚಿತ್ರಕೃಪೆ: ಗೂಗಲ್

 

ಅಲ್ಲದೆ ಬುರ್ರಕತೆ, ಗೊಂದಲಿಗರ ಪದ, ಗೊಂಬೆಯಾಟ ಇತ್ಯಾದಿ ವಂಶಪಾರಂಪರ್ಯವಾಗಿ ಕೆಲವು ಕುಟುಂಬಗಳು ಈಗಲೂ ಕಲಾಪ್ರಕಾರಗಳನ್ನು ಈ ಭಾಗದಲ್ಲಿ ಜನಜೀವನದ ಬದುಕಿನೊಟ್ಟಿಗೆ ಉಳಿಸಿಕೊಂಡು ಬಂದಿದೆ. ಇಂಥ ನಾಡನ್ನು ಕಡೆಗಣಿಸಿ ದೂರದೂರದಲ್ಲಿ ರಂಗಾಯಣ ಸ್ಥಾಪಿಸಿದ್ದು ಸ್ಥಳಿಯವಾಗಿ ಸಾಂಸ್ಕೃತಿಕ ಲೋಕಕ್ಕೆ ಅಡಚಣೆಯಾಗಿದೆ. ದಯಮಾಡಿ ಸರಕಾರವು ಈ ಭಾಗದ ರಂಗಭೂಮಿಗೆ ಜೀವ ಕೊಡಲು ಹಂಪಿಯನ್ನು ಕೇಂದ್ರವಾಗಿಸಿಕೊಂಡು ಒಂದು ರಂಗಾಯಣವನ್ನು ಸ್ಥಾಪಿಸಿದರೆ ಈ ಗಡಿನಾಡ ಭಾಗದಲ್ಲಿ ರಂಗಚಟುವಟಿಕೆಗಳ ಜೊತೆಗೆ ಸಾಂಸ್ಕೃತಿಕವಾದ ವಾತಾವರಣ ಕಟ್ಟಲು ಹೆಚ್ಚು ಉಪಯೋಗವಾಗುತ್ತದೆ.

‍ಲೇಖಕರು avadhi

September 22, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: