ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾ..ja..ಲ್

manjunath kamath

ಮಂಜುನಾಥ್ ಕಾಮತ್

ಹದಿನೈದು ದಿನಗಳ ಇಂಗ್ಲೀಷ್ ಕ್ಲಾಸು ಇವತ್ತಿಗೆ ಮುಗೀತು. ಕಾಜಲ್ಲಿಗೂ ಖುಷಿ, ಕಲಿಸಿದ ಮೇಡಂಗೂ ತೃಪ್ತಿ.

ಕಾಜಲ್ ವಯಸ್ಸು ಈಗ ಇಪ್ಪತ್ತೆಂಟು. ನನಗಿಂತ ಎಂಟು ತಿಂಗಳು ದೊಡ್ಡವಳು. ಪಿ.ಯು.ಸಿ ಓದಿದ್ದ ಅವಳಿಗೆ ಹತ್ತು ವರುಷದ ನಂತರ ಈಗ ಮತ್ತೆ ಕಲಿಯೋ ಹುಮ್ಮಸ್ಸು.

kajal2ತನ್ನ ರಜೆಯ ಹದಿನೈದು ದಿನಗಳ ಎರಡೆರಡು ಗಂಟೆಯನ್ನು ಎಂ.ಐ.ಟಿಯ ಮೇಡಂ ಒಬ್ಬರು ಕಾಜಲ್ ಗಾಗಿ ನೀಡಿದ್ದಾರೆ. ಭಾನುವಾರವೂ ಬಿಡದೆ, ಮಗಳ ಬರ್ತ್ ಡೇ ದಿನವೂ ರಜೆ ತಗೊಳ್ಳದೆ ಕ್ಲಾಸು ಮಾಡಿದ್ದಾರೆ. ಪಿ.ಯೂ.ಸಿ ವರೆಗೆ ಓದಿದ್ದ ಕಾಜಲ್ ಒಳಗಿದ್ದ ಇಂಗ್ಲಿಷನ್ನು ಮತ್ತೆ ಜ್ಞಾಪಿಸುವಂತೆ ಮಾಡಿ ಬೇಸಿಕ್ ಕಲಿಸಿಕೊಟ್ಟು,
ಇನ್ನು ಮನೇಲೇ ಓದೋಕೆ ಅಂತ ಪುಸ್ತಕವೊಂದನ್ನು ನೀಡಿದ್ದಾರೆ. ಇವಳು ಏನನ್ನಾದರೂ ಕಲಿಯಬಲ್ಲಳು. ಓದಿನ ಹಸಿವುಳ್ಳ ಸ್ಟೂಡೆಂಟು ಸಿಕ್ಕಿದ್ದು ತನ್ನ ಭಾಗ್ಯವೆನ್ನುತ್ತಾರೆ ಮೇಡಂ.

ಕಾಜಲ್ ಗೆಳತಿ ನಗ್ಮಾ ಹೇಳಿದ್ದಳು, ಮೇಡಂ ಹೇಳಿಕೊಟ್ಟದ್ದನ್ನು ಬರೆದುಕೊಂಡಿರುತ್ತಿದ್ದ ಕಾಜಲ್ ರಾತ್ರಿ ಎರಡು ಗಂಟೆಗೆಲ್ಲ ಎದ್ದು ಬೆಳಿಗ್ಗೆ ಐದು ಗಂಟೆವರೆಗೂ ಓದುತ್ತಿದ್ದಳಂತೆ. ಮಳೆಗೆ ಕರೆಂಟ್ ಇಲ್ಲದ ಒಂದು ರಾತ್ರಿ ನಗ್ಮಾಳ ಮೊಬೈಲ್ ತಗೊಂಡು ಅದ್ರ ಟಾರ್ಚು ಹಾಕ್ಕೊಂಡು ಓದ್ತಿದ್ದಳಂತೆ.

ಮೇಡಂ, ನಗ್ಮಾ ಳಿಂದ ಇದೆಲ್ಲವನ್ನೂ ಕೇಳುತ್ತಿದ್ದರೆ, ಕಾಜಲ್ ನೋಟ್ಸನ್ನೊಮ್ಮೆ ನೋಡುತ್ತಿದ್ದರೆ ನನ್ನ ಈ ಐದು ವರುಷ ಕಣ್ಣೆದುರು ಬರುತ್ತದೆ. ಶಿಕ್ಷಣವಿದ್ದರೂ ಬರಡಾಗಿ ಕಳೆದಿದ್ದಕ್ಕೆ ಪಶ್ಚತ್ತಾಪ. ಕಾಜಲ್ ನನಗೀಗ ಸ್ಪೂರ್ತಿ.

ಇಂಗ್ಲಿಷ್ ಕಲಿಕೆ ಸಾಧ್ಯವಾಗಿದ್ದು ಡಾಕ್ಟರ್ ವಿರೂಪಾಕ್ಷ ದೇವರು ಮನೆಯವರಿಂದಾಗಿ. ಅವ್ರಿಗೆ ಓದುಗರು ಬಳಗದ ಪರವಾಗಿ ಧನ್ಯವಾದಗಳು. ನಗ್ಮಾ ಕಾಜಲ್ ರತ್ನಾಕರ್ ಅವ್ರಿಗೆ ಕೆಲಸ ದೊರಕಿಸಲು ಅವರು ಪ್ರಯತ್ನಿಸುತ್ತಿದ್ದಾರೆ.

ಹದಿನೈದು ದಿನಗಳ ಕಾಲ ಸ್ಥಳ ಕೊಟ್ಟು ಓದೋಕೆ ಅವಕಾಶ ಮಾಡಿ ಬೆನ್ನು ತಟ್ಟಿದ ಸೋನಿಯಾ ಕ್ಲಿನಿಕ್ಕಿನ ಡಾಕ್ಟರ್ ಸಹೋದರಿಯರಿಗೂ ಕೃತಜ್ಞತೆಗಳು.

 

‍ಲೇಖಕರು Admin

3 July, 2016

2 Comments

  1. Prasad

    Very Interesting. Kindly tell us more about ‘Odhugaru’ Balaga. Would love to take part if there is any opportunity. Thank you.
    – Prasad, Republic of Angola (prasad1302@gmail.com)

  2. Anushk

    Oh nice!really interesting!no age limit to learn what to need!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading