ಕಾಲ್ಕೇಜಿ….

ರಾಜಕುಮಾರ್ ಮಡಿವಾಳರ

ನಮ್ಮ ಪೇಢಾ ಅಂಗಡಿಲಿ ಸುಪ್ರಸಿದ್ಧ ಬಾಬುಸಿಂಗ್ ಠಾಕೂರ್ ಪೇಢಾ, ಕಾಲು ಕೇಜಿಗೆ 105 ರೂಪಾಯಿ, ಸಮಸ್ಯೆ ಅಂದರೆ ಈ ಮೇಲಿನ 5 ರೂಪಾಯಿ, ತುಂಬ ಜನ ಚಿಲ್ಲರೆ ಇದ್ದೂ ಕೊಡಲ್ಲ, ದೊಡ್ಡ ಜನ 500, 2000ದ ನೋಡು ಕೊಡ್ತಾರೆ, ಕೆಲವರು 200 ಕೊಡ್ತಾರೆ, ಅಲ್ಲಿಗೆ ನಾನು 95 ರೂಪಾಯಿ ಚಿಲ್ಲರೆ ಹೊಂದಿಸಬೇಕು.

ಚಿಲ್ಲರೆ ಇಲ್ಲದಾಗ ಎಷ್ಟೋ ಸಲ 5 ರೂಪಾಯಿ ಇನ್ನೊಮ್ಮೆ ಬಂದಾಗ ಕೊಡಿ ಅಂದಿರುತ್ತೇನೆ, ಅವರು ಇನ್ನೊಮ್ಮೆ, ಮತ್ತೊಮ್ಮೆ, ಮಗದೊಮ್ಮೆ ಬಂದಿದಾರೆ ನಿಜ, ಆದರೆ ಯಾರೂ ಆವತ್ತಿನ 5 ರೂಪಾಯಿ ತಗೊಳ್ಳಿ ಅಂದಿಲ್ಲ. ಅವರಾರಿಗೂ 5 ರೂಪಾಯಿ ಒಂದು ಮೊತ್ತವೆ ಅಲ್ಲ ಅನ್ನುವಷ್ಟು ಶ್ರೀಮಂತರು ಅನ್ನೋದು ಇಲ್ಲಿ ತುಂಬ ಮುಖ್ಯ..

ಮೊನ್ನೆ ಪಿಯೂಸಿ ರಿಜಲ್ಟ್ ಬಂತಲ್ಲ, ಧಾರವಾಡದ ಸಪ್ತಾಪೂರ ಬಾವಿ ತುಂಬಿ ತುಳುಕೊವಷ್ಟು ಕೋಚಿಂಗ್ ಸೆಂಟರ್ ಇಂದ ತುಂಬಿದೆ! ಒಬ್ಬ ಹುಡುಗ 10-15 ನಿಮಿಷ ನನ್ನ ಅಂಗಡಿ ಮುಂದೆ ನಿಂತ, ತಾಸು ತಡೆದು ಅಣ್ಣಾ ನನ್ನ ಹೆಸರು ಹೀಗೆ,ಊರು ಇಂತಾದ್ದು, 594 ಮಾರ್ಕ್ಸ್ ತಗದಿದಿನಿ, ಊರಿಗೆ ಹೊರಡಬೇಕು, ಬಸ್ಚಾರ್ಜ್ ಬಿಟ್ರೆ ದುಡ್ಡಿಲ್ಲ, ತಂಗಿಗೆ ಪೇಢಾ ತರ್ತಿನಿ ಅಂತ ಹೇಳಿದಿನಿ ಕಾಲ್ಕೇಜಿ ಪೇಢಾ ಕೊಡಿ, ಊರಿಂದ ಬಂದ ತಕ್ಷಣ ದುಡ್ಡು ಕೊಟ್ಟೆ ರೂಮಿಗೆ ಹೋಗ್ತಿನಿ ಅಂದ, ಹುಡುಗನ ಡ್ರೆಸ್ ನೋಡಿದ್ರೆ ಬಡವ ಅನಿಸಲಿಲ್ಲ ಆದರೂ ಸರಿ ಕನ್ನಡಕ್ಕೆಷ್ಟು ತಗೊಂಡಿದಿಯಾ? ಅಂದೆ, 96 ಅಂದ, ಅಲ್ಲಿಗೆ ಈ ಕುಮಾರಾ ಕರಗಿ ನೀರಾಗಿ ಬಿಟ್ಟ, ಸರಿ ಮನೆಲಿ ಎಷ್ಟ ಜನ ಇದ್ದೀರಿ? ಅಣ್ಣ ಜಾಯಿಂಟ್ ಫ್ಯಾಮಿಲಿ 13 ಜನ, ಅಕ್ಕ ರಜೆಗ ಊರಿಗೆ ಬಂದಿದ್ರೆ 15 ಜನ ಅಂದ. ಕಾಲ್ಕೇಜಿ ಯಾತಕ್ಕೆ ಸಾಲತ್ತೆ ಅರ್ಧ ಕೇಜಿ ತಗೋ ಅಂತ ಕೊಟ್ಟು ಕಳಿಸಿದ್ದೆ.

ಇವತ್ತು…

ನನ್ನ ಅಂಗಡಿ ತೆರೆಯೋದು ಬೆಳಗಿನ 8-30, ಆ ಹುಡುಗ ಊರಿಂದ 6-45 ಗೆ ಬಂದಿದಾನೆ, ರೂಮಿಗೂ ಹೋಗದೆ ನನ್ನ ಅಂಗಡಿ ಕಟ್ಟೆ ಮೇಲೆ ಕೂತಿದಾನೆ, ನನ್ನ ನೋಡಿದವನೆ ಅದೇನೋ ದೇವರು ಪ್ರತ್ಯಕ್ಷ ಆದ ಹಾಗೆ ಎಕ್ಸೈಟ್ ಆಗಿ ಬೇರೆ ಏನೂ ಮಾತಾಡದೆ ಅಣ್ಣಾ ನಿಮ್ಮ 210 ರೂಪಾಯಿ ತಗೊಳ್ಳಿ ಅಂದ..

ಈ ವಿಷಯವೇ ಮರೆತು ಹೋಗಿತ್ತು ನನಗೆ! ಮನೆಲಿ ಎಲ್ಲರೂ ತಿಂದರಾ? ಅಂದೆ, ಹೂನಣ್ಣಾ ತಂಗಿಗೆ ಹೆಚ್ಚು ಕೊಟ್ಟಿದ್ದು, ನೋಡಬೇಕಿತ್ತು ಅವಳ ಖುಷಿ ಅಂದ, ಸರಿ ದುಡ್ಡು ನೀನೆ ಇಟ್ಕೋ, ಈ ಸಲ ಮತ್ತೆ ಊರಿಗೆ ಹೋಗೊವಾಗ ದುಡ್ಡು ಕೊಟ್ಟು ತಗೊಂಡು ಹೋಗು ಅಂದೆ. ಹುಡುಗನ ಮುಖ ಸಣ್ಣದಾಯ್ತು, ಬೇಜಾರ ಆಗ್ಬೇಡ, ಇದು ನೀನು ಕನ್ನಡಕ್ಕೆ 96 ತಗೊಂಡು ನನಗೆ ಕೊಟ್ಟ ಖುಷಿಗೆ ಅಂದೆ. ಹುಡುಗ ನನ್ನನ್ನೇ ನೋಡುತ್ತ ಹೋದ.

ಇದ್ದವರು….

ಉಳಿಸಿಕೊಂಡು ಹೋದ ಕಾಲ್ಕೇಜಿಯ 5 ರೂಪಾಯಿ ಇಂತಹ 210 ಎಷ್ಟೊ ದಾಟಿದೆ, ಈ ಹುಡುಗನ ಖುಷಿ, ಪ್ರಾಮಾಣಿಕತೆ ನನಗೆ ಆ ಎಲ್ಲ 5 ರೂಪಾಯಿ ಮರಳಿ ಬಂದ ಖುಷಿ ತಂದುಕೊಟ್ಟಿತು, ಪ್ರಫುಲ್ಲ ಮನಸಲ್ಲಿ ಅಂಗಡಿ ತೆರೆದೆ.

‍ಲೇಖಕರು Avadhi

September 24, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Vasundhara k m

    ಹೃದಯಸ್ಪರ್ಶಿ ಅನುಭವ ದಾಖಲಿಸಿದ್ದೀರಿ..

    ಪ್ರತಿಕ್ರಿಯೆ
  2. u a

    nimma angadi ellide helri. dharwadakke bandaaga nimmannu bettiyaguttene. mana muttida baravanige.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: