ಸಚಿನ್ ಕುಮಾರ ಹಿರೇಮಠ
ನಾ ಎದುರಾದಾಗಲೆಲ್ಲ
ಅವಳ ಕೊರಳ ದನಿಗೆ ಬರಗಾಲ
ಮಾತೆಲ್ಲ ಮೌನದಲ್ಲಿ ಸೇರಿ
ಮೌನವೂ ಒಂದು ಸಿಹಿಗಾಲ
ಅವಳೆದುರಾದಾಗಲೂ ನಾ ನಿರ್ಲಿಪ್ತ
ಕಣ್ಣುಗಳ ನಡುವೆ ನಡೆದು ಹೋಗುವುದು
ಭಾವಗಳ ವ್ಯವಹಾರ
ಅವಳು ದೂರದಿಂದಲೇ ದೂರುತ್ತಾಳೆ
ಮಾತಾಗದ ಮೌನವನು
ನಾನದನು ಮನ್ನಿಸುತಲೇ ಮಾತು ಮರೆಯುತ್ತೇನೆ
ಬದುಕಿಗೆ ಅವಳನು ಆಹ್ವಾನಿಸಿರುವೆ
ಒಲುಮೆಯನು ಇಂಚಿಂಚು ಹಂಚಿಕೊಳ್ಳಲು
ಮೌನದಲಿ ಬೆರೆತ ಮಾತುಗಳ ಬಿಚ್ಚಿಕೊಡಲು
ಹರೆಯದ ಹಾದಿಯ ನಡುವೆ
ಮರೆಯದೇ ಅವಳ ದಾರಿ ಕಾಯುತ್ತಿದ್ದೇನೆ
ಮತ್ತೇ ಮೌನ ಕವಿಯದಿರಲೆಂದು
ಮಾತು ಮೌನ ಮುರಿಯಲೆಂದು..






0 Comments