ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಯಕದ ಕಡೆಗೋಲು

-ಮೌನೇಶ ನವಲಹಳ್ಳಿ

ಬೆವರ ಬನಿ

ಕಾಯಕದ ಕಡೆಗೋಲು
ಕಾಯದೊಳು ಆಡಲು
ಇಬ್ಬನಿಯ ಮಣಿಹಾರ ಮೈಯ್ಯಿಗೆಲ್ಲ
ಶ್ವೇತಾಂಬರ ಮನ
ಸತ್ಯಕರ್ಮಾಭರಣ
ಬೆವರು ಬೆವರಲ್ಲ ಬೆಳಕು ಜಗಕೆಲ್ಲ

ಅನ್ನದ ಕೊಪ್ಪರಿಕೆ
ಚಿನ್ನದ ಬೀಸಣಿಕೆ
ಗಂಡು-ಹೆಣ್ಣಿನ ಅಂಟು ನಂಟಿಗೆಲ್ಲ
ಕಾರ್ಮಿಕರ ಕೈಬಿಲ್ಲು
ಧರ್ಮದ ಕೈಗೋಲು
ಶರಣ ಸಂತರ ಅರಿವು ಸೆಲೆ ಎಲ್ಲ

ಶ್ರಮದಾನ ಸಮಾಧಾನ
ಶಿವಧ್ಯಾನ ಶ್ರಮದಾನ
ಬೆಮರ ಭೋರ್ಗರೆತ ಕೋಟೆ ಕೊತ್ತಲೆಲ್ಲ
ಮಂತ್ರಿಗಳ ಮಂಡನೆ
ಕಂತ್ರಿಗಳ ಅರಮನೆ
ಕಟ್ಟಕಡೆಯ ಜನರ ಬಲ ಬೆಟ್ಟವೆಲ್ಲ

ಅಮೃತವ ಕಡೆಯುತ
ವಿಷ ಉಂಡು ದುಡಿಯುತ
ಮೈ ಮೆಟ್ಟಿಲು ನೀಲಿ ಗಂಟಲೆಲ್ಲ
ಜಗದ ನರನಾಡಿಗೆ
ನೆತ್ತರಿನ ದೀವಿಗೆ
ಬೆವರ ಬನಿ ಹರಿವ ಕಡೆ ಹಸಿರೆಲ್ಲ

‍ಲೇಖಕರು Admin

16 June, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading