ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಮ ಪ್ರೇಮವಾಗಿ ಆಗಸದುದ್ದಕ್ಕೂ ಸದ್ದಿಲ್ಲದೆ ಮಿನುಗಲಿ…

– ಜಾನ್ ಸುಂಟಿಕೊಪ್ಪ


ಗಡಿ ಗಡಿಗಳ
ದಾಟಿ ಬಂದಿದೆ ಪ್ರೇಮ;
ಅಕ್ಷರವಾಗಿ,
ದನಿಯಾಗಿ,
ಕಡೆಗೆ –
ಕಾಮವೂ ಆಗಿ;
 
2ಜಿ 3ಜಿ ಗಳ ನೆಟ್ವರ್ಕಿಗಿಲ್ಲ
ಹಾಳಾದ ಗಡಿಗಳ ಹ಼ಂಗು ..,
ಆಳವರಿಯದ ಭಾವನೆಗಳು
ಸದ್ದಿಲ್ಲದೆ ಮೊಳಕೆಯೊಡೆದಿವೆ;
ಬಿಟ್ಟ ಬೇರು ಆಳಕ್ಕಿಳಿದ಼಼ತೆ
ಹೃದಯವೂ ಬಿರುಕು ಬಿಡುತಿದೆ.,
ಹೊರಗಿಣುಕುವ ಹಸುರು ಚಿಗುರಲು
 
ತೇಪೆ ಹಚ್ಚುತಿದೆ ಕ್ರೌರ್ಯ…
ನಡೆ ಮು಼ದೆ ನಡೆ ಮು಼ದೆ
ಹೆಗಲೇರಲಿ ಶವಸಂಪುಟ.
ಉಸಿರು ಮರೆತ ನಾಗರಿಕತೆ-
ಕೊಳೆವ ಮುನ್ನ
ಹೆಜ್ಜೆ ಗಳನಿರಿಸಿ ಹೆಜ್ಜೆಯ ಮೇಲೆ
ಗಡಿಗಡಿಗಳೂ ನಡೆದು ಬಿಡಲಿ,
ಶವಸಂಪುಟದ ಗರ್ಭ –
ನವಕೂಸೊ಼ದನು ಹಡೆಯಲಿ;
ಬೆಳಕು ಮಳೆಯಾಗಿ
ಕಾಮ ಪ್ರೇಮವಾಗಿ ಆಗಸದುದ್ದಕ್ಕೂ
ಸದ್ದಿಲ್ಲದೆ ಮಿನುಗಲಿ ,,.
 

‍ಲೇಖಕರು G

1 April, 2015

2 Comments

  1. mmshaik

    nice kavana..aashya chennaagide..

  2. Anonymous

    nice one sir..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading