ಅಂಜನಾ ಗಾಂವ್ಕರ್
ಮಂದ ಬೆಳದಿಂಗಳಲಿ ಹುಡುಕುತಿರುವೆ ನಾ ಕಾಡುಮಲ್ಲಿಗೆ,
ಬೆಳಕಿನ ಈ ಕಣ್ಣಾಮುಚ್ಚಾಲೆಯಲಿ ನೀ ಕೃಷ್ಣ ಕಾಡುಮೆಲ್ಲಗೆ.
ಘಮವಿಲ್ಲದ ಈ ಕುಸುಮ ಬಿಳಿಯ ಕಾಡುಮಲ್ಲಿಗೆ,
ವಿರಹಿಯಾದ ಈ ಮನದಿ ನೀ ಕೃಷ್ಣ ಕಾಡುಮೆಲ್ಲಗೆ.

ಸಿಕ್ಕ ಮರವ ಆಸರೆಯಾಗಿಸಿ ಬೆಳೆದ ಬಳ್ಳಿಯ ನಾ ಕಾಡುಮಲ್ಲಿಗೆ,
ಒಮ್ಮೆ ಸೋಕಿ ನಿನ್ನ ಕೈಯ್ಯ ಶ್ವೇತ ದಳಕೆ ಕೃಷ್ಣ ನೀ ಕಾಡುಮೆಲ್ಲಗೆ.
ಹೊಸಕುವ ಮುನ್ನ ತುಸು ಜೋಪಾನ ಕಾರಣ ನಾ ಕಾಡುಮಲ್ಲಿಗೆ,
ಸುಗಂಧಕಾಗಿ ಹಾತೊರೆವ ಈ ಮೃದು ಭಾವಗಳ ಕಾಡುಮೆಲ್ಲಗೆ.
ನಾಳೆ ‘ಅಂತಿಮ’ ಪಯಣದಲಿ ಒಣಗುವ ನಾ ಕಾಡುಮಲ್ಲಿಗೆ.
ಒಮ್ಮೆ ಬಂದು ಕೊಳಲ ನಾದ ಬೀರಿ ನೀ ಕೃಷ್ಣ
ಕಾಡುಮೆಲ್ಲಗೆ….






0 Comments