ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಡಿಗೆಯ ಕಪ್ಪು ಕರಗುವ ಮುನ್ನ..

ಕನಸುಗಳ ಕೊಟ್ಟಿಗೆ

ರೂಪಾ ಮಂಜಪ್ಪ ನರಸಾಪುರ

ನಲಿಯುತಿದೆ ಕನಸಿನ ನವಿಲೊಂದು

ಮರುಗುತಿದೆ ಮನಸು ಇಲ್ಲೊಂದು

ಕಟ್ಟಿಟ್ಟ ಕನಸುಗಳ ಕೊಟ್ಟಿಗೆಯೊಳಗೆ

ಜಾರುತಿದೆ ಗುರಿಯೊಂದು

ಕಣ್ಣೀರ ಒರೆಸುವುದೆ  ಒಲವಿನ ಬಿಂದು

ಕರೆಯದೆ ಬಂದು

ಕರೆಯದೆ ಬಂದು ಕಣ್ಣೀರ ಒರೆಸುವುದೇ

ಇಲ್ಲ ಸಿಹಿ ತುತ್ತು ನೀಡುವುದೇ

ಕಾಡಿಗೆಯ ಕಪ್ಪು ಕರಗುವ ಮುನ್ನ

ಹಚ್ಚಿದ ಕೆಂಪು ಹರಿಯುವ ಮುನ್ನ

ಇನ್ನೂ ಹೆಚ್ಚು ಹೇಳುವುದು ಇಲ್ಲ

ಕನಸಿನ್ನು ಬದುಕಿದೆಯಲ್ಲ

ಗುರಿಯ ಗಂಟೊಂದು ಜೊತೆಯಿದ್ದರೆ ಸಾಕಲ್ಲ

ಕಾಣುವ ದಾರಿಗಳಿಗೆ ಬರವೇನಿಲ್ಲ

ಭರವಸೆಯ ಬೆಳಕು ಮನದಲ್ಲಿ ಅಡಗಿದೆಯಲ್ಲ.

‍ಲೇಖಕರು avadhi

29 June, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading