ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಜೂರು ಸತೀಶ್ ಅನುವಾದಿಸಿದ ಕವಿತೆ

ಒಂದು ಕೊಕ್ಕರೆಯ ಕತೆ

ಕಾಜೂರು ಸತೀಶ್

ಮೋಡವನ್ನು ದಿಟ್ಟಿಸಿದಾಗಲೆಲ್ಲ
ಆನೆ,ಮೊಲಗಳೆಲ್ಲ ಆಟವಾಡುತ್ತಿರುವಂತೆ
ಗುಬ್ಬಚ್ಚಿಗಳು ಚೀಂವ್ ಚೀಂವ್ ಹಾಡಿ
ನಿಧಾನಕ್ಕೆ ಹಾರುತ್ತಿರುವಂತೆ ತೋರುತ್ತದೆ.
 
ಮನೆಯ ಹಿಂದಿರುವ ಗದ್ದೆಬದಿಯಲ್ಲಿ
ನೀರಿನಾಳಕ್ಕೆ ಕಣ್ಣುನೆಟ್ಟು
ಧ್ಯಾನಿಸುವ ಕೊಕ್ಕರೆಯ ಚಿತ್ರವನ್ನು
ಆ ಕೊಳ ಹಿಡಿದಿಟ್ಟುಕೊಂಡಿದೆ.

ಬಿರುಬೇಸಿಗೆಯಲ್ಲಿ
ಕೊಳ ಬತ್ತಿದ ಮೇಲೆ
ಕೊಕ್ಕರೆ ಕಾಣಿಸುತ್ತಲೇ ಇಲ್ಲ,
ಏನು ಸಂಭವಿಸಿತೊ ಏನೊ ಆ ಚಿತ್ರಕ್ಕೆ.
 
ಈಗೀಗ
ಕೆಲವೊಮ್ಮೆ
ಮೋಡವನ್ನು ದಿಟ್ಟಿಸಿದರೆ
ಕಣ್ಣ ತುಂಬ ಅದೇ ಕೊಕ್ಕರೆಯ ಚಿತ್ರ.

**

ಮಲಯಾಳಂ ಮೂಲ- ವೀರಾನ್ಕುಟ್ಟಿ
ಕನ್ನಡಕ್ಕೆ-ಕಾಜೂರು ಸತೀಶ್
 

‍ಲೇಖಕರು G

14 May, 2015

1 Comment

  1. bidaloti Ranganath

    ಭಾವನೆ ಕವಿತೆಯ ಭಾವ ಚನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading