ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕವಿಯ ಬಳಿ ಪದವೊಂದಿರುತ್ತದೆ..

ಕನ್ನಡಕ್ಕೆ: ಶಿವಕುಮಾರ್ ಮಾವಲಿ

ಕವಿಯ ಬಳಿ ಪದವೊಂದಿರುತ್ತದೆ ;
ಭೀಕರ ದುರಂತದಂತೆ.

ಕವಿಯ ಬಳಿ ಪದವೊಂದಿರುತ್ತದೆ ;
ಗಟ್ಟಿಯಾಗಿ ಕೂಗುವ ಕೇಡಿನಂತೆ.

ಕವಿಯ ಬಳಿ ಪದವೊಂದಿರುತ್ತದೆ ;
ಮಹಾಕಾವ್ಯದ ಕಿರುಚಿತ್ರದಂತೆ.

ಕವಿಯ ಬಳಿ ಪದವೊಂದಿರುತ್ತದೆ ;
‘ಐತಿಹಾಸಿಕ ಯಾನ’ ದಂತೆ.

ಕವಿಯ ಬಳಿ ಪದವೊಂದಿರುತ್ತದೆ ;
ರೋಗದ ಬಟ್ಟಲಿನಂತೆ.

ಕವಿಯ ಬಳಿ ಪದವೊಂದಿರುತ್ತದೆ ;
ರಕ್ತ ಮಡುಗಟ್ಟಿದ ದ್ವೀಪದಂತೆ.

ಕವಿಯ ಬಳಿ ಪದವೊಂದಿರುತ್ತದೆ ;
ಬೆಳಕಿನ ಕಿರಣಗಳ ಕಕ್ಷೆಯಂತೆ.

ಕವಿಯ ಬಳಿ ಪದವೊಂದಿರುತ್ತದೆ ;
ಸತ್ಯವೇ ಸದ್ದು ಮಾಡಿದಂತೆ.

ಕವಿಯ ಬಳಿ ಪದವೊಂದಿರುತ್ತದೆ ;
ಒಂದು ಮಹತ್ತರವಾದ ಘಟನೆಯಂತೆ

ಕವಿಯ ಬಳಿ ಪದವೊಂದಿರುತ್ತದೆ ;
ಅತೀ ಮುಖ್ಯವಾದ ಮೂಳೆಯಂತೆ.

ಕವಿಯ ಬಳಿ ಪದವೊಂದಿರುತ್ತದೆ ;
ದೇವರ ಬೆನ್ನೆಲುಬಿನಂತೆ .

ಕವಿಯ ಬಳಿ ಪದವೊಂದಿರುತ್ತದೆ ;
ಅಮರತ್ವದ ಅಳುವಿನಂತೆ.

ಕವಿಯ ಬಳಿ ಪದವೊಂದಿರುತ್ತದೆ ;
ಭೂಲೋಕದ ಮೂಲತತ್ವದಂತೆ.

**************
A poet holds a word
like a heavy tragedy.
A poet holds a word
like a loud apocalypse.
A poet holds a word
like an epic miniature.
A poet holds a word
like a historic voyage.
A poet holds a word
like the cup of disease.
A poet holds a word
like the blood’s island.
A poet holds a word
like the axis of light.
A poet holds a word
like the noise of truth.
A poet holds a word
like an immense event.
A poet holds a word
like a vital bone.
A poet holds a word
like the spine of god.
A poet holds a word
like eternity’s tear.
A poet holds a word
like the basis of the earth.
– Anonymous

‍ಲೇಖಕರು avadhi

11 May, 2017

1 Comment

  1. Anonymous

    ಉತ್ತಮ ಕವಿತೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading