ಸಂಗಮೇಶ ಸಜ್ಜನ
ಸೂರ್ಯನ ಉರಿ ಬಿಸಿಲಿನ ಹಾಗೆ
ನಿನ್ನ ಕಣ್ಣೋಟ ನನ್ನ ತಾಕಿದೆ
ತಂಗಾಳಿ ಬೀಸಿದಂತೆ ನಿನ್ನಿರವು ನನ್ನ ಸೋಕಿದೆ
ಚಳಿಗಾಲದ ತಣ್ಣನೆಯ ಗಾಳಿಯು ತಾಕಿದ ಹಾಗೆ
ನಿನ್ನ ಆ ತಣ್ಣನೆಯ ಮೃದುವಾದ ಕೈಯು ತಾಕಿದಂತಿದೆ,
ಮಳೆಗಾಲದಲ್ಲಿ ಹಾರಿ ಬರುವ ಹಕ್ಕಿಯ ಹಾಗೆ
ನಿನ್ನ ನೆನಪುಗಳು ಒಮ್ಮೊಮ್ಮೆ ಹಾರಿ ಬಂದಂತಿದೆ,

ಇವತ್ತೇನೋ ನಿನಗೆ ಹೇಳಬೇಕೆಂಬ ಆಸೆ ಉಕ್ಕುಕ್ಕಿ ಬರುತ್ತಿದ್ದರು
ಈ ಒಲವೋ, ವಿರಹವೋ ನನ್ನನ್ನು ಬಂಧಿ ಮಾಡಿದೆ,
ನಿನ್ನ ತುಂಟ ನಗುವಿನ ಮುಖವು ನೋಡುತ್ತಿದ್ದ ನನಗೆ
ಆ ನಿನ್ನ ಬಿಸಿ ಚುಂಬನದ ಭಾವವು ಬೆನ್ನ ಹಿಂದೆಯೇ ಭಾಸವಾದಂತಿದೆ,
ನಿನ್ನ ಕೈಯನ್ನೊಮ್ಮೆ ಹಿಡಿದು ನಡೆದರೂ ಜನ ಕೇಳುತ್ತಿರುತ್ತಾರೆ
ನಿಮ್ಮದು ಒಂದು ಪ್ರೀತಿಯೇ? ನಿಮ್ಮದು ಒಂದು ಜೋಡಿಯೇ?
ನಿನ್ನ ಪ್ರೀತಿಯಲ್ಲಿ ಬಂಧಿಯಾದ ನನಗೆ ಆಕರ್ಷಣೆಯೊಂದೇ ಅಲ್ಲ
ಆಕಾರವಿಲ್ಲದ ಬದುಕಿಗೆ, ಆಯಾಸಕಾಂತದಂತಹ ನಿನ್ನೊಲವು, ನಿಲುವು ಕೊಡಬಲ್ಲುದು.






ತುಂಬಾ ಚೆನ್ನಾಗಿದೆ ಸಜ್ಜನ್ ಸರ್
Looks good!I like this!