ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಕವಿತೆಯೆಂದರೆ ಗಾಯಕೆಲ್ಲ ಮುಲಾಮು ಹಚ್ಚಿ ಕಣ್ಣೊರಸುವ ತಾಯಿ ' – ಜಯಶ್ರೀ

download

ಜಯಶ್ರೀ ಬಿ ಕದ್ರಿ

ಹೂವು
ಹಾಗೆ ಒಂದು ಹೂವು
ಫಳ್ಳನೆ ನಕ್ಕಿತು
ಮೆದುವಾದ ಪಕಳೆ
ಮಣ್ಣಿನೊಡಲಿಂದ
ಮೊಳಕೆಯೊಡೆದ
ಒಂದು ಟಿಸಿಲಿನ ಮೊಗ್ಗು
ಬಿರುಗಾಳಿಗೆ ಉರಿಬಿಸಿಲಿಗೆ
ಬಾಡಿಹೋಗದಿರಲೆಂದು
ಚಿವುಟುವ ಕೈಗಳಿಗೆ ಸಿಕ್ಕದಿರಲೆಂದು
ಪ್ರಾರ್ಥನೆ
images
ಕವಿತೆ
ಒಂದು ಕವಿತೆ
ಅಲ್ಲೆಲ್ಲೊ
ಪಿಸುಗುಟ್ಟುತ್ತಿದೆ
ಕಂದನ ನವಿರು
ಕವಿತೆಯೆಂದರೆ ಮತ್ತೆ
ಗಾಯಕೆಲ್ಲ ಮುಲಾಮು ಹಚ್ಚಿ
ಕಣ್ಣೊರಸುವ ತಾಯಿ
ಕವಿತೆಗೂ ಭಾವಕೂ
ಏನೋ ನಂಟು
ಅರಳಿ ಅರಳಿ
ಬೆಳಕಾಗಿ ನೆಳಲಾಗಿ
ತುಂಬು ಮೌನ

‍ಲೇಖಕರು avadhi-sandhyarani

23 August, 2015

6 Comments

  1. Noorulla Thyamagondlu

    ಚೆಂದಿವೆ

  2. sangeetha raviraj

    Thumba chennagive
    Sangeetha

  3. mmshaik

    uttama naviru bhaavada kavana,,

  4. mahesh kalal

    ಬಿರುಗಾಳಿಗೆ ಉರಿಬಿಸಿಲಿಗೆ
    ಬಾಡಿಹೋಗದಿರಲೆಂದು
    ಚಿವುಟುವ ಕೈಗಳಿಗೆ ಸಿಕ್ಕದಿರಲೆಂದು
    ಪ್ರಾರ್ಥನೆ fine

  5. lakshmikanth itnal

    mechcugaeyayitu naviraad kavana. bhava tumbida prarthaneya kalaji mechchugeyayitu

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading