ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಳೆ ಬೆಳೆದು ಬೆಳೆ ಹುಡುಕಿದರೆ!

ಕು ಸ ಮಧುಸೂದನ ರಂಗೇನಹಳ್ಳಿ

ಮುಚ್ಚಿದ ಕಣ್ಣುಗಳು
ಶತಮಾನಗಳ ಕನಸುಗಳು
ತೆರೆದಿಟ್ಟ ಬಯಲು
ಇಲ್ಲದ ಗೋಡೆಗಳ ಕಟ್ಟಿ
ನಟಿಸುತಿಹರು ಎಡವಿದಂತೆ.

ಕಪೋಲಕಲ್ಪಿತ ಕತೆಗಳ ತುಂಬಿಟ್ಟ
ಪಠ್ಯಪುಸ್ತಕಗಳ ಉರುಹೊಡೆದು
ಹೊಟ್ಟೆ ಉಬ್ಬರಿಸಿ
ಬೆವರ ಬಸಿದರು ಜಿಮ್ಮುಗಳ ಬಿಮ್ಮಿನಲಿ

ರೆಟ್ಟೆ ಬಲ ಅರಿಯದ
ಪೀಳಿಗೆಯೊಂದ ಸೃಷ್ಠಿಸಿದ ತಪ್ಪಿಗೆ
ಇದ್ದ ಅಂಗೈಯಗಲ ನೆಲಕೆ
ಬದುಗಳ ಹಾಕಿ ಕೊಟ್ಟಿದ್ದಾಯಿತು.
ಉತ್ತುಕೊಳ್ಳಿ ನಿಮಗಿಷ್ಟಬಂದದ್ದೆಂದು.

ಹೇಳಿದ ಮಾತೇ ತಪ್ಪಾಯಿತೊ
ಕೇಳಿದ ಕಿವಿಗಳಿಗೆ ಅಪಾರ್ಥವಾಗಿತ್ತೊ
ಬಿತ್ತಿಬೆಳೆದಿದ್ದೆಲ್ಲ ಕಳೆಯೇ
ಬೆಳೆದವರಿಗೆ ಬೆಳೆದೆವೆನ್ನುವ ಭ್ರಮೆಯಾದರೆ
ಉಳಿದವರಿಗೆ ಕಳೆಯ ನಡುವೆ ಬೆಳೆಯ ಹುಡುಕುವ ಕೇಮೆ!

‍ಲೇಖಕರು Admin

13 November, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading