
ರಾಜಕುಮಾರ ಮಡಿವಾಳರ
ಒಂದೆರೆಡು ಅಂಗಿ ಹರಿದಿವೆ
ಒಂದಂಗಿಯ ಒಂದು ಬಟನ್ನು
ಕಿತ್ತು ಮತ್ತೆ ತೊಟ್ಟಿಲ್ಲ
ಇನ್ನೂ ಎರಡು ತಿಂಗಳು ok
ಚಪ್ಪಲಿ ಬರುತ್ತವೆ ತಾಳಿಕೆ!
ಇನ್ನೆರಡು ಹೆಜ್ಜೆ ಕಲಿಯಬೇಕು
ವರ್ಷಕ್ಕೊಂದು ಜೋಡು ಹರಿವಷ್ಟಾದರೂ
ನಡೆಯಬೇಕು, ಇನ್ನು ನಿಲ್ಲಬಾರದು.
ಈ ವರ್ಷ ದಿನಂಪ್ರತಿ ಹನ್ನೊಂದಕ್ಕೆ ಮಲಗಿ
ರಾತ್ರಿಯ ಮೂರು ನಾಲ್ಕಕ್ಕೆಲ್ಲ ಎದ್ದಿದ್ದೇನೆ
ದೇವರೆ ಮಲಗಲು ಬಿಡು, ಕನಸಲು, ಕನಸಲಿ
ಸುಖ ನೋಡಲು, ತುಸು ನಿದ್ರೆಕೊಡು.
ಉಪವಾಸವಿದ್ದರೆ ನಿದ್ರೆ ಬಾರದು ಅಂತಾಳೆ ಅವ್ವ
ನನಗೋ ಯಾವ ದೇವರಲ್ಲೂ ಅನ್ನ ಬೇಡಿ ಗೊತ್ತಿಲ್ಲ!
ನೂರಿನ್ನೂರಿದ್ದ ಗೆಳೆಯರ ಸಂಖ್ಯೆ ಸಾವಿರ ದಾಟಿದೆ
ನನ್ನೀ ಸುಖ ಸ್ವರ್ಗದೆದೆಗೂ ನಾಟಿದೆ! ಅಲ್ಲಿರುವವರೆಲ್ಲ
ಇಲ್ಲಿಳಿದು ಮ್ಯಾಲೆನಿಲ್ಲ ಇಲ್ಲೊಂದು Kalanilayam ಸೃಷ್ಟಿಯಾಗಿದೆ, ಮಳಿನೀರ ಆಸೆ ಮರೆಸಿ ತಿಳಿನೀರ
ಕೊಳ ಕಟ್ಟಿ Kamala ಒಂದು ಅರಳಿದೆ. ಬದುಕು ಬಲು
ಮಜ! Ravikumar, Shashi,Chandru ಹಗಲಿರುಳಲ್ಲೂ ಬೆಳದಿಂಗಳಿದೆ.ಬಂಧ-ಸಂಬಧಗಳ ಚೆಂದದ ಬೆಸುಗೆ ಈ ಒಂಟಿ ಕವಿತೆಯ ಇನ್ನೊಂದು ವರ್ಷಕೆ ಉಳಿಸಿದೆ.
ನೀವೆ ಶುಭ ನನಗೆ






0 Comments