ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಲ್ಲು ತಿನ್ನುತ್ತಾರೆ!


ಸದಾಶಿವ್ ಸೊರಟೂರು 
ಗರ್ಭಿಣಿ ಕಲ್ಲು ಮಣ್ಣು ತಿನ್ನುವುದು ಎಲ್ಲೊ ಕೇಳಿಸಿಕೊಂಡಿದಷ್ಟೇ ನಾವು. ಇಂದು ಸಂಜೆ ಒಂದು ಸುತ್ತು ತಿರುಗಾಡಲು ಹೋದಾಗ ಕಂಡಿದ್ದು ಚಿಕ್ಕ ಚಿಕ್ಕ ಕಲ್ಲು ಮಾರುವವ. ನಗ್ತಾನೇ ಕೇಳಿದೆ ‘ ಏನ್ ಸರ್ ಇದು, ಇದನ್ನು ಮಾರ್ತಿರಾ?’
ಸಾಮಾನ್ಯ ಕಲ್ಲು ಅಲ್ಲ ಸ್ವಾಮಿ ಗರ್ಭಿಣಿಯರು ತಿನ್ನೋದು ಅಂದ. ಅದರ ಬಗ್ಗೆ ಕೇಳಿದಿಕೊಂಡವನಿಗೆ ಅವುಗಳನ್ನು ನೋಡುವ ಭಾಗ್ಯ. ನೋಡಿದ್ದು ಆಯ್ತು. ಯಾರಾದರೂ ತಗೋತಾರಾ ಕೇಳಿದೆ? ತಗೋಳೊದೇನು ಫುಲ್ ಡಿಮ್ಯಾಂಡ್ ಸ್ವಾಮಿ ಅಂದ್ರು’ ನಮ್ಮ ಜನ ಇನ್ನೂ ಯಾವ ಕಾಲದಲ್ಲಿದ್ದಾರೆ ಅನ್ಸತು.
ಅದೊಂದು ಆರ್ಯವೇದಿಕ್ ಔಷಧಿಯಂತೆ ಕೆಲಸ ಮಾಡಬಹುದು, ಖನಿಜ ಅಥವಾ ಮತ್ತೊಂದೂ ಒದಗಿಸಬಹುದು. ಆದರೆ ಅಂತಹ ಔಷಧಿಯ ಗುಣಗಳ ಕಲ್ಲುಗಳು ಈಗ ಎಲ್ಲಿವೆ? ಗಾಳಿ, ನೀರೆ ಕೆಟ್ಟು ಕೂತಿರುವಾಗ ಕಲ್ಲು ಮಣ್ಣು ಕೆಡದೇ ಇದೀತೆ!? ಅಷ್ಟಕ್ಕೂ ಅವೇ ಕಲ್ಲುಗಳು (ಒಡುವಾ – odowa) ಅಂತ ಯಾರಿಗೆ ಚನ್ನಾಗಿ ಗೊತ್ತು? ಅದನ್ನು ನಿಖರವಾಗಿ ತೋರಿಸಿಕೊಡುವ ಜನಾಂಗ ಎಲ್ಲಿ ಉಳಿದಿದೆ? ಇದೇ ತಿನ್ನುವ ಕಲ್ಲು ಅಂತ ಯಾರೋ ನೀಡಿದ ಮಾತ್ರಕೆ ತಿಂದು ಬಿಟ್ಟರೆ ಗರ್ಭಿಣಿ ಮತ್ತು ಮಗುವಿನ ಗತಿ?
ನೈರೊಬಿಯ ಸಂಶೋಧನೆಯೊಂದು ಸ್ಪಷ್ಟವಾಗಿಯೇ ಹೇಳಿದೆ. ಕಲ್ಲು ಮಣ್ಣು, ಬಳಪ ಇತ್ಯಾದಿ ತಿನ್ನುವುದು ಅಪಾಯವೆಂದು. ಆದರೆ ಇಲ್ಲಿ ನಮ್ಮಲ್ಲಿ ಅವುಗಳನ್ನು ಶ್ರದ್ದಾ,ಭಕ್ತಿಗಳಿಂದ ತಗೆದುಕೊಳ್ಳುತ್ತಾರೆ. ಆ ಸಮಯದಲ್ಲಿ ದೇಹದ ಬದಲಾವಣೆಯಿಂದ ತಿನ್ನುವ ಬಯಕೆ ಹುಟ್ಟುವುದು ಸ್ವಾಭಾವಿಕ. ಆದರೆ ಅದರಿಂದ ಅನುಕೂಲಕ್ಕಿಂತ ಅನಾನುಕೂಲವೇ ಜಾಸ್ತಿಯೆಂದು ಜನಕ್ಕೆ ತಿಳಿಯುವುದೇ ಹೇಗೆ!? ನಂಬಿಕೆ ಮತ್ತು ಮೂಢನಂಬಿಕೆ ಮಧ್ಯೆ ಗೆರೆಯೇ ಕಾಣಿಸುತ್ತಿಲ್ಲ.
 

‍ಲೇಖಕರು avadhi

19 September, 2017

1 Comment

  1. RAVI MG

    surprised news

Trackbacks/Pingbacks

  1. ತಿನ್ನಬಾರದ್ದನ್ನೇ ತಿನ್ನಬಯಸುವ ಮನ.. – Avadhi/ಅವಧಿ - […] ಸೊರಟೂರು ಅವರು ಗರ್ಭಿಣಿಯರು ತಿನ್ನುವ ಕಲ್ಲಿನ ಬಗ್ಗೆ ಬರೆದ… ಡಾ ಎಚ್ ಎಸ್ ಅನುಪಮಾ ಅವರು ಅದಕ್ಕೆ […]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading