ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಪ್ಪೆಚಿಪ್ಪಿನ ಒಳಗೊಂದು ಮುತ್ತಿನಂಥ ಕನಸಿಟ್ಟೆ..

ಪಾವನಾ ಭೂಮಿ

ಬಂದಂತೆ ಬರಲಿ ಬದುಕು
ಆರಲು ಬಿಡೆನು ಭರವಸೆಯ ಬೆಳಕು
ನೆನ್ನೆ ಒಂದಿತ್ತು ..
ಇಂದು ಬಂತಿತ್ತು
ನಾಳೆ ನನ್ನ ನಗುವಿಗಾಗಿ ಕಾದು ನಿಂತಿರಲು
ನಾನು ಈ ಹೊತ್ತಿಗಷ್ಟೇ ದಕ್ಕಿದೆನು

72be54a2a5a5fa7e266da6e7c9265c38

 

 

ಕಡಲತಡಿಯ ಮಳಲ ಮೇಲೆ
ಕನಸೊಂದು ಕಟ್ಟಿದೆ ….
ವಾಸ್ತವ ಅಲೆಯಾಗಿ ಬಂತು
ದಡಕೆ ಕಪ್ಪೆ ಚಿಪ್ಪು ಬಿಟ್ಟು ಮರಳಿತು

ಕಪ್ಪೆಚಿಪ್ಪಿನ ಒಳಗೊಂದು
ಮುತ್ತಿನಂಥ ಕನಸಿಟ್ಟೆ…
ವಾಸ್ತವ ಮರಳ ಕಣವಾಗಿ
ಚಿಪ್ಪಿನಂದಿಣುಕಿತು

ಇಣುಕಿದ ಕಣ ಹಾರಿ
ಜಾರಿ ಕಣಕಣವೂ
ಒಂದಾಗಿ …
ಹುಡುಕಲೂ
ತೋಚದೇ ಮಂದೆ
ಮೌನದೀ
ಸಾಗಲು…

ಅದೇ ದಡದಲ್ಲಿ
ಕನಸಿನ ಹೆಜ್ಜೆಗಳು ಮೂಡುತಲಿದ್ದವು
ವಾಸ್ತವದಲೆಗಳು ಅಳಿಸುತಲಿದ್ದವು

72be54a2a5a5fa7e266da6e7c9265c38

 

 

 

ಮೌನದ ಮಹಾಮನೆಯಲ್ಲಿ
ಕಂಬಳಿ ಹುಳುವಾಗು
ಚಿಟ್ಟೆಯ ಪರಿವರ್ತನೆ
ಆದರೆ ಮಾತಿನ ಅರ್ಥ
ಕಂಡುಕೊಂಡಂತೆ….

72be54a2a5a5fa7e266da6e7c9265c38

 

 

 

ನಿದ್ರೆ ಕಳೆದ ರಾತ್ರಿಗಳದೆಷ್ಟೊ
ಸಾರಿ ಆತ್ಮಹತ್ಯೆ ಮಾಡಿಕೊಂಡವು
ಪ್ರತಿ ಸಲ ಕತ್ತಲು ಬದುಕಿಸುತ್ತಿತ್ತು
ಆದರೂ ರಾತ್ರಿಗಳು ಮಾತ್ರ …
ಹವಣಿಸಿದ್ದು ಬೆಳದಿಂಗಳನ್ನ !
ತಿಂಗಳ ತಂಗಳಿಗೆ ರಾತ್ರಿಗಳು
ಕನವರಿಸಿ ಕನವರಿಸಿ
ಕಣ್ಮುಚ್ಚಲು ಮತ್ತೆ ತನ್ನ
ತೋಳ ತೆಕ್ಕೆಗೆ ಆತುಕೊಂಡದ್ದು
ಅದೇ ಕರೀ ಕತ್ತಲು…

‍ಲೇಖಕರು admin

30 December, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading