ಎಸ್ ಎಸ್ ಕೆ ಕೊಪ್ಪ
ನಾಡು ನುಡಿ…
ಹೇಗೆ ವರ್ಣಿಸಬೇಕು
ನಮ್ಮ ಕನ್ನಡ ನುಡಿಯನ್ನು….
ಪದಗಳಿಗೆ ನಿಲುಕದ
ಅನನ್ಯ ಅನುಭವವನ್ನು….
ಹೇಗೆ ಬಣ್ಣಿಸಲಿ ನಾನು
ಕನ್ನಡಿಗರ ಮನವನ್ನು….
ಬದಲಾಗದ ಹೃದಯ
ಸೌಮ್ಯ ವಿನಮ್ರತೆಯನ್ನು….
ಎಲ್ಲಿ ಹುಡುಕಲಿ ನಾನು
ನಮ್ಮ ಕನ್ನಡವನ್ನು….
ಕಣ ಕಣದಲ್ಲೂ
ಬೆರೆತಿರುವ ಸ್ವಾಭಿಮಾನವನ್ನು….
ಹೇಗೆ ಬದುಕಲಿ ನಾನು
ನಮ್ಮ ಕನ್ನಡತನವನ್ನು….
ಎಂದಿಗೂ ಮರೆಯದಂತೆ
ಜೀವದ ಉಸಿರನ್ನು….






0 Comments