ಕನಸಿನಂತೆ…

ಡಾ ಪ್ರೇಮಲತ ಬಿ

ಹಾಗಿದ್ದರೇ ಚೆನ್ನ ಕನಸಿನಂತೆ
ಕಾತರಿಸಿ ಕನವರಿಸಿ ಕೈ ಹಿಡಿದು ನೇವರಿಸಿ
ಮುಷ್ಠಿಯಲಿ ಸುತ್ತಿ ಬಳಸಿಡಿದರೂ ಬರಿದಾಗುಳಿವ
ಬೆರಳುಗಳಂತೆ, ಮತ್ತೆ ಬೇಡುವಂತೆ

ತುಟಿಯಗಲಿಸಿ ಬೇಡಿ, ನಾಲಗೆ ಚಪ್ಪರಿಸಿ
ತಂಪು ತಂಪೆನಿಸಿ ಕುಡಿದಷ್ಟೂ
ದಾಹ ತಣಿಸದ, ಬತ್ತದ
ನಿರಂತರ ಸಿಹಿನೀರ ಒರತೆಯಂತೆ

ಅಕ್ಷಯವಾಗುವ ಅಸ್ಪಷ್ಟ ಆಕಾರ
ಬಿರುಬಿಸಿಲು ಸುಟ್ಟಾಗ ತಲೆ-ಪಾದ
ಬೀಸಿ ಬರುವ ತಂಗಾಳಿ
ಹೊತ್ತು ತರುವ ದಿವ್ಯ ಗಂಧದಂತೆ

ಕಳೆದು ಹೋದೆಯೆಂದೇ ಬಗೆದು
ನಿಟ್ಟುಸಿರನಿಟ್ಟ ಒಂಟಿದಿನಗಳಲಿ
ಮನ ಬಗೆದು ನೋಡಲು ಫಕ್ಕನೆ
ಎದುರಾಗಿ ಸಂತೈಸುವ ದಾರ್ಶನಿಕನಂತೆ

ನಿಮಿಷಗಳಲಿ ಮುಗಿಯದ ಸುಖ
ಕೂಡಲಾಗದ ಈ ಬದುಕಿನಲಿ
ಸದ್ದುಮಾಡದೆ ಸುಮ್ಮನೆ ಲೀನವಾಗಿದ್ದುಬಿಡು
ಹಾಗಿದ್ದರೆ ಚೆನ್ನ, ಮುಗಿಯದ ಸಿಹಿ ಕನಸಿನಂತೆ

‍ಲೇಖಕರು Admin

October 6, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: