ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕನಸಿಗಾಗಿ ಕನಸಿನಲ್ಲಿ ತಡಕಾಡಿದೆ..

m s rudreshvaraswamy

ಎಂ ಎಸ್ ರುದ್ರೇಶ್ವರಸ್ವಾಮಿ

ಒಂದು ಕನಸಿಗಾಗಿ
ಹುಡುಕಾಡಿದೆ.
ಅಡಿಕೆ ಸಸಿಗಳ ನಡುವೆ ಮೂರು ಸಾಲು
ಮುಸುಕಿನ ಜೋಳ
ಬಿತ್ತಿ, ಒಂದು ಸಾಲು
she with a birdತೊಗರಿ ಊರಿ,
ಕಾಯುತ್ತ ಕುಳಿತೆ. ಕನಸು ಮೊಳೆಯಲಿಲ್ಲ.
ಬೇರೆ ಕನಸುಗಳು
ಮುತ್ತಿಕೊಂಡವು. ಮುಸುಕಿನ
ಜೋಳದ ನಡುವೆ
ಬಂಧಿಯಾದೆ. ಎಷ್ಟು ಹುಡುಕಿದರೂ ಅತ್ತಿತ್ತ
ಹೊರಳಿದರೂ
ಕನಸು ಸಿಗಲಿಲ್ಲ. ಜವಾಬ್ದಾರಿ
ಇಲ್ಲದ ನೆನಪುಗಳು
ನೋವು ಹೆಚ್ಚಿಸಿದರೆ, ಪದ್ಯ ಮತ್ತು ಕನಸು
ಜೊತೆಗೇ ಹೊರನಡೆದು
ಕ್ರೌರ್ಯ ಮೆರೆದವು.
ಬಹುಕಾಲ
ಪ್ರೀತಿಸಿದವರು ವಿದಾಯ ಹೇಳಿ ದೂರ-
ಸರಿದ ನೋವು.

ಥಂಡಿ ಮಳೆಗಾಳಿ
ಹಲವು ಬಣ್ಣದ
ರಾಗಗಳನ್ನು ಹೊತ್ತೊಯ್ಯುತ್ತಿದೆ ಕತ್ತಲಲ್ಲಿ,
ಒದ್ದೆ ಭೂಮಿಯ ಮೇಲೆ
ಮೋಡಗಳ ನೆರಳು
ಅಚ್ಚೊತ್ತಿವೆ…

‍ಲೇಖಕರು admin

17 July, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading