ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಕದನ ಕುತೂಹಲಕೆ ಇದು ಸಮಯವಲ್ಲ..’ – ಯು ಮಹೇಶ್ವರಿ ಕವಿತೆ

ಬಾಳಯಾತ್ರೆ

ಮಹೇಶ್ವರಿ ಯು

ನರೆಕೂದಲೊಂದೊಂದು ಹಣಿಕಿಹಾಕುವ ವೇಳೆ
ಕದನ ಕುತೂಹಲಕೆ ಇದು ಸಮಯವಲ್ಲ
ಮಕ್ಕಳೊಂದಿಗರಾಗಿ ಮನೆಯೊಡೆಯರಾಗಿ
ಹದಬೆಂದ ದಾಂಪತ್ಯ ಸಮನಿಸಲಿ ಸೌಖ್ಯ
 
ಬಾಳ ಕುಲುಮೆಗಳಲ್ಲಿ ಬೆಂದು ಮಾಗಿದರಾಗಿ
ಕಟುಕರೋಹಿಣಿ ಮದ್ದು ಮೆದ್ದವರೆ ಆಗಿ
ಕೋಡುಗಳ ತಿವಿತಕ್ಕೆ ಗುಟುರುಗಳ ದಾಂಧಲೆಗೆ

ಸಹವಿದಾಯವ ಹೇಳಿ ವಿಶ್ವಾಸ ತಳವೂರಿ
ಸಹಪಾಕ ಸಮಭೋಗ ಸಮದು:ಖದಾಟದಲಿ
ಸಹಯಾತ್ರಿ ಸಂಗತಿಗೆ ಇಟ್ಟ ಹೆಜ್ಜೆ
 
ಭೋರೆಂದು ಸುರಿಯುತಿಹ ಅಮೃತವರ್ಷಿಣಿ ಧಾರೆ
ಅಹಂಕಾರದಡ್ಡೆಗಳ ಕೊಚ್ಚಿ ಕೆಡವಿ
ಭಾವಗಂಗಾಸಲಿಲ ನಿರ್ಮಲವು ನಿಷ್ಕಳವು
ಬಾಳಯಾತ್ರೆಗೆ ಇರುವುದೊಂದೆ ದಾರಿ..

‍ಲೇಖಕರು G

18 November, 2013

1 Comment

  1. bharathi b v

    Paalisodikke aagatta annode prashne ….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading