–ದೀಪಾ ರವಿಶಂಕರ್
‘ಕತ್ತಲ ನೆರಳು’ ಒಂದು ಅದ್ಭುತ ರಂಗ ಕೃತಿ. ನಾಟಕ ಮುಗಿಸಿ ಮನೆಗೆ ಬಂದು ಎಷ್ಟೋ ಹೊತ್ತು ಕಳೆದರೂ the play is haunting. ಬಿಗಿಯಾದ ಸ್ಕ್ರಿಪ್ಟ್. ಬಿಗಿಯಾದ ನಿರ್ದೇಶನ, ಅಷ್ಟೇ ಬಿಗಿಯಾದ ನಟನೆ. ಎಲ್ಲಿ ಜೋರಾಗಿ ಉಸಿರು ಬಿಟ್ಟರೆ ಏನು ಮಿಸ್ ಆಗಿಬಿಡುತ್ತದೋ ಎಂದು ಮುಖವೆಲ್ಲಾ ಹಸಿರುಗಟ್ಟಿಕೊಂಡು ಕೂತಿದ್ದೆವು!
ಮಾತುಗಳು ಅದೆಷ್ಟು subtle!!
ನಮ್ಮ ಕಾನೂನಿನಲ್ಲಿ ನಮಗೆ ಕೊಡಲಾದ ಹಕ್ಕು ಕರ್ತವ್ಯಗಳಲ್ಲಿ ಒಂದು ಹಕ್ಕಿದೆಯಂತೆ. Right to be forgotten ಎಂದು. ಒಬ್ಬ ವ್ಯಕ್ತಿ ತಪ್ಪು ಮಾಡಿ ಅದಕ್ಕೆ ಶಿಕ್ಷೆ ಅನುಭವಿಸಿ ಹೊರಬಂದ ಮೇಲೆ ಅದನ್ನು ಆತನ ಸುತ್ತಲಿನ ಸಮಾಜ ಅದನ್ನು ಮರೆಯಬೇಕು ಎಂದು ಅದರ ಉದ್ದೇಶ. ಕಥೆಯ ಕೊನೆಯಲ್ಲಿ ಆಕೆಯೂ, ನಾವೂ ಅವನ ಬಗ್ಗೆ ಮೃದುವಾಗತೊಡಗುತ್ತೇವೆ. ಆತನ ಕಣ್ಣೀರು ಸತ್ಯವಾದದ್ದಿರಬೇಕೆನಿಸುತ್ತದೆ. ಆದರೆ ಮರುಕ್ಷಣವೇ ಹಾಗಿಲ್ಲದೆಯೂ ಇರಬಹುದು. ಒಮ್ಮೆ ಹೊಡೆದವನು ಮತ್ತೆ ಕೈ ಎತ್ತಲಾರನೇ ಎಂಬ ಎಚ್ಚರಿಕೆಯೂ ಹೊಳೆಯುತ್ತದೆ. Insensitivityಯನ್ನು, ಕ್ರೌರ್ಯವನ್ನು ಮರೆಯುವುದು ಸುಲಭವಲ್ಲ. ಆಗಲೂಬಾರದು ಎಂಬ ಎಚ್ಚರಿಕೆಯನ್ನು ನೀಡುತ್ತದೆ.
ಬಾಲಾಜಿಯವರನ್ನು ಅಲೈಯನ್ಸ್ ಫ್ರಾನ್ಸೆಯ ಇಂಗ್ಲಿಷ್ ನಾಟಕಗಳ ಕಾಲದಿಂದಲೂ ನೋಡಿಕೊಂಡು ಬಂದಿದ್ದೇನೆ. ಒಮ್ಮೆಯೂ ಅವರು ನನ್ನನ್ನು ನಿರಾಶೆಗೊಳಿಸಿಲ್ಲ. ಇನ್ನು ಸಿರಿ! ಕ್ಷಣಾರ್ಧದಲ್ಲಿ ಬದಲಾಗುವ ಅವರ ಭಾವ, ಕಣ್ಣ ಆರ್ದ್ರತೆ, ಮಾತಿನ ರೀತಿ ಮನುಷ್ಯ ಸಾಧ್ಯತೆಯ ಬಗ್ಗೆಯೇ ಅಚ್ಚರಿ ಮೂಡಿಸುತ್ತದೆ. ಪುಟ್ಟ ಚುಕ್ಕಿ ಸ್ಟೇಜ್ಗೆ ಬಂದು ಆ ರೈನ್ ಕೋಟ್ ಮೇಲೆ ಮಲಗಿದರೆ ಕೂತ ಪ್ರತೀ ಪ್ರೇಕ್ಷಕನಿಗೂ ಥಟ್ಟನೆ ಎದ್ದು ಬಂದು ಆ ಮಗುವನ್ನು ಬಿಡಿಸಬೇಕೆನಿಸುತ್ತಿತ್ತು.
ಸ್ಟೇಜ್ ಸೆಟ್ಟಿಂಗ್ ಕೂಡ ಬಹಳ ಯೋಚಿಸಿ ಮಾಡಿದ ಅತ್ಯಂತ ಸೂಕ್ತ ನೇಯ್ಗೆಯಂತಿತ್ತು. ಆ ಧೂಳು ತುಂಬಿದ ಕೋಣೆ, ಒಮ್ಮೆ ಅಂಟಿಸಿ ನೇತುಬಿಟ್ಟ ಅಂಟಿನ ಹಾಳೆಯ ಸುರುಳಿಗಳು, ಅವು ಅಷ್ಟುದ್ದ ಬಿಡಿಸಿದ ಮೇಲೂ ಅಂಟು ಬಿಡಿಸಿಕೊಳ್ಳದೆಯೇ ಅಲ್ಲೇ ನೇತಾಡುತ್ತಿರುವುದು… ಒಳಗೇನಿದೆಯೋ ತಿಳಿಯದ ನಿಗೂಢ ಡಬ್ಬಿಗಳು… Translucent ಅಂದರೆ ಒಳಗಿನದು ಕಂಡರೂ ಕಾಣದ ಗೋಡೆಗಳು… ಒಂದೊಂದೂ precisely thought and kept.
ಒಬ್ಬ ಸಮರ್ಥ ನಿರ್ದೇಶಕ ಮಾತ್ರ ಹೀಗೆ attention to details ಕೊಡಬಲ್ಲ. ನಟನೆಯ subtility, lightingನ ಸೂಕ್ಷ್ಮತೆ, ಬಾಗಿಲು ತೆಗೆದ ಕೂಡಲೇ ಬರುವ ಶಬ್ದ ಮುಚ್ಚಿದ ತಕ್ಷಣ ಉಂಟಾಗುವ ನಿಶ್ಶಬ್ದ ಎಲ್ಲಕ್ಕೂ credit ನಿರ್ದೇಶನಕ್ಕೇ ಹೋಗಬೇಕು. ನಿಮ್ಮ Creativity ಗೆ hats off.
ಈ ನಾಟಕವನ್ನ ಖಂಡಿತವಾಗಿ ನೋಡಿ.






0 Comments