ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಣ್ಣುಗಳು ಜೀವಿಸಬಹುದು…

ಮುತ್ತು ಬಳ್ಳಾ ಕಮತಪುರ

ಪ್ರೀತಿಗೆ ಬರುವ ಸಮಯ ತಿಳಿದಿಲ್ಲ ಕನಸಿನಲಿ ಎಚ್ಚರಿಸಬಹುದು |
ಹೆಸರು ಕೇಳಿ ನಶೆ ಏರಿದ ತಪ್ಪಿಗೆ ಚಂದ್ರ ಇರುಳಿಡಿ ಕಾಯಬಹುದು ||

ಸರಸದ ಸಮಯಕೆ ಹಾಲಗೆನ್ನೆ ಕಳೆಗುಂದಿದ ಭಾವ ಎದೆಯ ಕನ್ನಡಿ |
ಮಾತುಗಳ ನಡುವಿನ ಕಣ್ಣೀರು ಮನದ ಸಂಶಯ ಅರಿಯಬಹುದು ||

ಹೂಗಳು ಅರಳುವಾಗ ಸಂಗಾತಿಗಳು ಮುದುಡಿದ ಘಳಿಗೆ ಜಗವೆ ಖಾಲಿ |
ನೂರಾರು ನೋವುಗಳು ಸುಮದ ಅಂದಕೆ ಕರಗಿ ಆವಿಯಾಗಬಹುದು ||

ಊದಿ ಬಿಟ್ಟ ನೀರ ಗುಳ್ಳೆಯೆ ಮನದ ಮುಂದಣ ಬಿರುಗಾಳಿ ಮನಸು |
ಗೆಳತಿ ಬದುಕೊಂದು ಉಸಿರು ಬೆರತ ಕೊಳಲ ರಾಗ ಬದಲಿಸಬಹುದು ||

ನನ್ನೊಳಗೆ ಪೋಣಿಸದೆ ಎತ್ತಿಟ್ಟ ಮುತ್ತಿನ ಡಬ್ಬಿಯಲಿ ಅವಳ ರೂಪವಿದೆ |
ಸಾವಿನ ದಡದ ಹತ್ತಿರ ಉಸಿರೊಳಗೆ ಅದೇ ಕಣ್ಣುಗಳು ಜೀವಿಸಬಹುದು ||

‍ಲೇಖಕರು Admin

2 July, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading