ಕಣ್ಣೀರನ್ನು ಮಾರಲಿಟ್ಟಿದ್ದೇನೆ

 

ಶ್ರೀದೇವಿ ಕೆರೆಮನೆ


ರಾಜಹಂಸ, ಜೀವನ ಪ್ರಕಾಶನ

ರಾಜಹಂಸ, ಜೀವನ ಪ್ರಕಾಶನ

ಜೀವನ್ ಪ್ರಕಾಶನದ ರಾಜ್ಯಮಟ್ಟದ

ಯುಗಾದಿ ಕಾವ್ಯ ಸ್ಪರ್ಧೆ-2016ರ ಮೆಚ್ಚುಗೆ ಪಡೆದ ಕವಿತೆ


 

 

ಕಣ್ಣೀರು ಮಾರಲಿಟ್ಟಿದ್ದೇನೆ

ಅತಿ ಕಡಿಮೆ ಬೆಲೆಗೆ

ತರೇಹವಾರಿ ಕಣ್ಣೀರು ನೋವಿಗೂ ದುಃಖಕ್ಕೂ

ಕೊನೆಗೂ ಸಂತೋಷಕ್ಕೂ
ವಿರಹದ ಉರಿಗೆ ಕಳೆದು-

ಹೋದ ಪ್ರೀತಿಗೆ

ಎಲ್ಲದಕ್ಕೂ ಪ್ರತ್ಯೇಕ ದರ ಗಲ್ಲಾಪೆಟ್ಟಿಗೆಯ

ತುಂಬಾ ಕಾಂಜಾಣದ

ಝಣಝಣ, ಆದರೂ

ನೆಮ್ಮದಿಯಿಲ್ಲ

ಬೇಕಿತ್ತು ಇನ್ನಷ್ಟು ಹಣ ಕೊಂಡುಕೊಳ್ಳಲು

ಮತ್ತಷ್ಟು ಗಿರಾಕಿಗಳು

eye lid

ಈಗ ಕೆಲವು ಬಗೆಯ

ಕಣ್ಣೀರಿಗೆ ರಿಯಾಯತಿ

ದರ ಘೋಷಿಸಿದ್ದೇನೆ, ವಿರಹದ ಕಣ್ಣೀರಿಗೆ

ಸ್ವಲ್ಪವೇ ದುಡ್ಡು

ಕಳೆದುಕೊಂಡ ಪ್ರೀತಿಗಂತÀೂ

ಮತ್ತೂ ಕಡಿಮೆ

ಮೊನ್ನೆ ಅಂಗಡಿಯ ಬಾಗಿಲಿಗೆ ಒರಗಿ

ನಿಂತವಳ ಕಣ್ಣಲ್ಲಿ

ಏನೋ ಒಂದು ನೋವು

ಪ್ರೀತಿಸಿದಾತನ

ಮೋಸಕ್ಕೆ ಬಲಿಯಾದವಳ ಎದೆಯಲ್ಲಿ

ಅಳುವಷ್ಟೂ ಇರಲಿಲ್ಲ

ಕಣ್ಣೀರು, ಹಣ ಕೊಟ್ಟು

ಕಣ್ಣಿರು ಖರೀದಿಸುವಷ್ಟೂ

ಶಕ್ತಿಯೂ ಆಕೆಗಿರಲಿಲ್ಲ, ಉಪಕಾರ ಮಾಡುವ

ಹಮ್ಮಿನಲಿ, ಒಂದಿಷ್ಟು

ಕಣ್ಣೀರು ದಾನ ಮಾಡಿದೆ.

ಇಂದಾಕೆ ಆ

ಕಣ್ಣೀರಿನ ಹಣವನ್ನು ಕೊಟ್ಟುಹೋಗಲು

ಬಂದಿದ್ದಾಳೆ, ಪಕ್ಕದಲ್ಲೊಬ್ಬ

ಸಿರಿವಂತ ಹುಡುಗ

ಆಸೆಗಣ್ಣಲಿ

ನಿಂತಿದ್ದಾನೆ,  ಅವಳ ಕಣ್ಣೀರ ಮಾರಿ

ದುಪ್ಪಟ್ಟು ಗಳಿಸಲು.

eye lid

ನಿನ್ನೆ ಬಂದ ಹುಡುಗನಿಗೆ

ಮೋಸದ ಕಣ್ಣೀರು

ಬೇಕಿತ್ತು, ಒಂದಾಗಲು ಒಪ್ಪದ ಹುಡುಗಿಗೆ

ಕಣ್ಣೀರು ಸುರಿಸಿ

ಆಕೆಯ ದೇಹ ಪಡೆಯಬೇಕಿತ್ತು

ವ್ಯಾಪಾರಕ್ಕೆ ನಿಂತ

ನನಗೆ, ಕೊಳ್ಳುವವರ ಕಾರಣ ಬೇಕಿರಲಿಲ್ಲ

ನಾಲ್ಕರಷ್ಟು ಅಧಿಕಮೊತ್ತ

ಪಡೆದು ಜೇಬು ತುಂಬಿಸಿ-

ಕೊಳ್ಳುವುದಷ್ಟೇ

ವ್ಯಾಪಾರದ ಸತ್ಯ; ಉಳಿದಿದ್ದೆಲ್ಲ ಮಿತ್ಯ.

eye lid

ಆ ಮೂಲೆಯಲ್ಲಿ ಸೊಂಟಕ್ಕೊಂದು

ಮಗು ಸಿಕ್ಕಿಸಿ,

ಎದೆ ಬತ್ತಿದ, ಬೆನ್ನಿಗಂಟಿದ ಹೊಟ್ಟೆಯ

ಹೆಣ್ಣಿನಾಕೃತಿಯೆಡೆಗೆ

ಗಮನಹರಿಸುವಷ್ಟು ಪುರುಸೊತ್ತು

ಇರಲಿಲ್ಲ. ಎಲ್ಲೋ

ಅಪಘಾತದಲ್ಲಿ ಸತ್ತವರ ಸಂಬಂಧಿಕರಿಗೆ ಕಣ್ಣಿರು

ಪೂರೈಸಿ ನಾನು

ಹೈರಾಣಾಗಿದ್ದೆ, ಆಕೆ ಕೊಡಲಾಗದ

ಹಣಕ್ಕೆ, ಸಮಯ

ಕಳೆದುಕೊಳ್ಳುವಷ್ಟು ಉದಾರತೆ ಇರಲಿಲ್ಲ

ಎರಡು ದಿನದಿಂದ

ನಿಂತ ಜಾಗದಿಂದ

ಕದಲದಾಕೆಯನ್ನು

ಸನ್ನೆ ಮಾಡಿ ಹತ್ತಿರ ಕರೆದೆ, ಹೌದು,

ಆಕೆಗೂ ಕಣ್ಣೀರು ಬೇಕಿತ್ತು

ಸತ್ತ ಗಂಡನ ನೆನೆದು

ಅಳಬೇಕಿತ್ತು

ಕೊಡಲು ಮಾತ್ರ ಕಾಸಿರಲಿಲ್ಲ. ಬತ್ತಿಹೋದ

ಕಣ್ಣೀರಿಗೆ ಅರ್ಥ ಕಲ್ಪಿಸಿ,

ಮನೆಯಿಂದ ಹೊರನೂಕಿದ

ಅತ್ತೆ ಮಾವ

ನೆರೆ ಹೊರೆಯವರಿಗಾಗಿ ಆಕೆ ಅಳಬೇಕಿತ್ತು

ಮಗುವಿನ ಹೊಟ್ಟೆಗೊಂದು

ತುತ್ತಿಗಾಗಿ, ತಲೆ ಮೇಲೆ

ಒಂದು ಸೂರಿಗಾಗಿ

ಕಾಮದ ಕಣ್ಣಿಂದ ತಪ್ಪಿಸಿಕೊಳ್ಳುವುದಕ್ಕಾಗಿ

ಆಕೆಗೆ ಕಣ್ಣೀರಿನ

ಅನಿವಾರ್ಯತೆಯಿತ್ತು

ತುರ್ತು ಕಾಲಕ್ಕಿರಲೆಂದು

ಸಂಗ್ರಹಿಸಿಟ್ಟ, ಎಲ್ಲಾ ಕಣ್ಣೀರನ್ನು ಅವಳೆದುರಿಗಿಟ್ಟು

ಒಂದೂ ಮಾತನಾಡದೆ,

 

ನಾನು ಕಣ್ಣೀರಿನ ಅಂಗಡಿಗೆ

ಬೀಗ ಹಾಕಿದೆ….

 

 

‍ಲೇಖಕರು admin

April 6, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ಚಂದ್ರಪ್ರಭಾ ಬಿ.

    ತುಂಬಾ ಚೆನ್ನಾಗಿದೆ. ಭಿನ್ನ ಧಾಟಿ, ಭಾಷೆ, ಅದಕ್ಕೊಪ್ಪುವ ವ್ಯಂಗ್ಯ…ಎಲ್ಲ ಒಂದಕ್ಕಿಂತ ಒಂದು ಚೆಂದ. ಮೂಲತಃ ಕಣ್ಣೀರು ಹೆಣ್ಣಿನ ಭಾಷಎ. ಅದನ್ನು ಅವಳಿಗಿಂತ ಚೆನ್ನಾಗಿ ಯಾರು ಅರಿಯಬಲ್ಲರು? ಅಭಿನಂದನೆಗಳು ಸೋದರಿಗೆ.

    ಪ್ರತಿಕ್ರಿಯೆ
  2. Anonymous

    ಚೆನ್ನಾಗಿದೆ ಕವಿತೆ
    ಸಂಗೀತ ರವಿರಾಜ್

    ಪ್ರತಿಕ್ರಿಯೆ
  3. Name* Raju A.Yadav

    ತುಂಬಾ ಚನ್ನಾಗಿದೆ ….ಕವನದ ಕಣ್ಣರಧಾರೆ ಮನಸು ಮೌನ….ಭಾವನೆಗಳ ಆತ್ಮೀಯ ನಮನ…ಅಭಿನಂದನೆಗಳು ….

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: